ಲಂಡನ್ (ಪಿಟಿಐ): ‘ಟೈಮ್ಸ್ ಹೈಯರ್ ಎಜುಕೇಷನ್’ (ಟಿಎಚ್‌ಇ) ಏಷ್ಯಾ ವಿಶ್ವವಿದ್ಯಾಲಯ ಶ್ರೇಯಾಂಕ– 2023’ ಅನ್ನು ಗುರುವಾರ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ದೇಶದಲ್ಲೇ ಉನ್ನತ ಸ್ಥಾನ ಪಡೆದಿದೆ.

ಐಐಎಸ್ಸಿ 48ನೇ ರ‍್ಯಾಂಕ್ ಪಡೆದಿದ್ದರೆ, ಭಾರತದ ಎರಡನೇ ಅತಿ ಹೆಚ್ಚು ಶ್ರೇಯಾಂಕಿತ ವಿಶ್ವವಿದ್ಯಾಲಯವಾಗಿ ಸ್ಥಾನ ಪಡೆದಿರುವ ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ 68ನೇ ರ‍್ಯಾಂಕ್ ಗಿಟ್ಟಿಸಿದೆ. ಈ ಮೂಲಕ ಏಷ್ಯಾದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಕರ್ನಾಟದ ಎರಡು ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.

ಏಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಚೀನಾದ ಟಿಸಿಂಗುವಾ ವಿಶ್ವವಿದ್ಯಾಲಯ ಮತ್ತು ಪೆಕಿಂಗ್ ವಿಶ್ವವಿದ್ಯಾಲಯ ಕ್ರಮವಾಗಿ ಮೊದಲೆರಡು ರ‍್ಯಾಂಕ್‌ಗಳು ಹಾಗೂ ಸಿಂಗಪುರದ ರಾಷ್ಟ್ರೀಯ ವಿಶ್ವವಿದ್ಯಾಲಯ 3ನೇ ರ‍್ಯಾಂಕ್ ಪಡೆದುಕೊಂಡಿವೆ. ಏಷ್ಯಾದ ಅಗ್ರ 50 ವಿಶ್ವವಿದ್ಯಾಲಯಗಳಲ್ಲಿ ದೇಶದ ಒಂದು ವಿ.ವಿ (ಬೆಂಗಳೂರಿನ ಐಐಎಸ್‌ಸಿ) ಮತ್ತು ಅಗ್ರ ನೂರು ವಿ.ವಿಗಳಲ್ಲಿ ದೇಶದ ನಾಲ್ಕು ವಿವಿಗಳು ಹಾಗೂ ಅಗ್ರ 200 ವಿ.ವಿಗಳಲ್ಲಿ ದೇಶದ 18 ವಿವಿಗಳು ಸ್ಥಾನ ಪಡೆದಿವೆ.

‘ಟೈಮ್ಸ್ ಹೈಯರ್ ಎಜುಕೇಷನ್ (ಟಿಎಚ್‌ಇ) ಏಷ್ಯಾ ವಿಶ್ವವಿದ್ಯಾಲಯ ಶ್ರೇಯಾಂಕವು ಭಾರತದ ವಿಶ್ವವಿದ್ಯಾಲಯಗಳು ಹೆಚ್ಚು ನಾವಿನ್ಯತೆ ಮತ್ತು ಕ್ರಿಯಾತ್ಮಕವಾಗುತ್ತಿರುವುದನ್ನು ಮತ್ತು ವೈವಿಧ್ಯಮಯ ಖಂಡದಲ್ಲಿ ಉನ್ನತ ಶಿಕ್ಷಣವು ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿರುವುದನ್ನು ಸೂಚಿಸುತ್ತದೆ’ ಎಂದು ಟೈಮ್ಸ್ ಹೈಯರ್ ಎಜುಕೇಷನ್ಸ್‌ನ ಮುಖ್ಯ ಜಾಗತಿಕ ವ್ಯವಹಾರಗಳ ಅಧಿಕಾರಿ ಫಿಲ್ ಬ್ಯಾಟಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.