ವಾಷಿಂಗ್ಟನ್:ರಷ್ಯಾದಿಂದ ಎಸ್- 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಸಂಬಂಧ ಭಾರತಕ್ಕೆ ಪ್ರತಿಕೂಲವಾಗಿರುವಕಾಟ್ಸಾ ಕಾಯ್ದೆಗೆ ಅಮೆರಿಕದ ಸಂಸತ್ನಲ್ಲಿ ಶಾಸನಾತ್ಮಕ ತಿದ್ದುಪಡಿ ಮಸೂದೆಯನ್ನುಭಾರತ - ಅಮೆರಿಕದ ಕಾಂಗ್ರೆಸ್ಸಿಗ ರೋ ಖನ್ನಾ ಮಂಡಿಸಿದ್ದಾರೆ.

‘ಕಾಟ್ಸಾ (ಸಿಎಎಟಿಎಸ್) ಕಾಯ್ದೆಯ ತಿದ್ದುಪಡಿ ಮಸೂದೆ ಅಮೆರಿಕ ಮತ್ತು ಭಾರತದ ರಕ್ಷಣಾ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಆಕ್ರಮಣಕಾರರನ್ನು ಹಿಮ್ಮೆಟ್ಟಿಸುತ್ತದೆ.ಈ ತಿದ್ದುಪಡಿಯನ್ನು ದ್ವಿಪಕ್ಷೀಯ ಸಹಕಾರದ ಆಧಾರದ ಮೇಲೆನನ್ನ ಸಹೋದ್ಯೋಗಿಗಳು ಅಂಗೀಕರಿಸುವ ವಿಶ್ವಾಸವಿದೆ. ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಸಲು ಇದು ಅತ್ಯಂತ ತುರ್ತು ಕ್ರಮವಾಗಿದೆ’ ಎಂದು ಡೆಮಾಕ್ರಟಿಕ್ ಪಕ್ಷದ ಕ್ಯಾಲಿಫೋರ್ನಿಯಾ ಸಂಸದರಾದಖನ್ನಾ ಅವರುಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ರಷ್ಯಾದಿಂದ ಖರೀದಿಸಿದ ಟರ್ಕಿ ಮೇಲೆ ಅಮೆರಿಕ ಈಗಾಗಲೇ ಕಾಟ್ಸಾ (ಸಿಎಎಟಿಎಸ್) ಕಾಯ್ದೆಯ ನಿರ್ಬಂಧಗಳನ್ನು ಹೇರಿದೆ. ಇದೇ ನಿರ್ಬಂಧಗಳನ್ನು ಭಾರತದ ಮೇಲೂ ಹೇರುವ ಅಂದಾಜು ಇದೆ.

ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಸಂಬಂಧ ಭಾರತಕ್ಕೆ ಕಾಟ್ಸಾ ಕಾಯ್ದೆಯಡಿ ಸಂಭಾವ್ಯ ನಿರ್ಬಂಧ ಅಥವಾ ವಿನಾಯಿತಿಗಳ ಬಗ್ಗೆ ಅಮೆರಿಕ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಏಪ್ರಿಲ್ನಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.