ವಾಷಿಂಗ್ಟನ್: ಅಮೆರಿಕದ ಎರಡನೇ ಅತಿ ದೊಡ್ಡ ವಲಸೆ ಸಮೂಹವಾಗಿರುವ ಭಾರತೀಯ – ಅಮೆರಿಕನ್ನರು, ನಿಯಮಿತವಾಗಿ ತಾರತಮ್ಯ ಮತ್ತು ಧೃವೀಕರಣವನ್ನು ಎದುರಿಸುತ್ತಿದ್ದಾರೆ ಎಂದು ಬುಧವಾರ ಬಿಡುಗಡೆಯಾಗಿರುವ ಸಮೀಕ್ಷೆಯೊಂದು ತಿಳಿಸಿದೆ.

ಭಾರತೀಯ– ಅಮೆರಿಕನ್ನರ ಮನೋಭಾವ ಸಮೀಕ್ಷೆ(ಐಎಎಎಸ್) ಕುರಿತ ‘ಭಾರತೀಯ ಅಮೆರಿಕನ್ನರ ಸಾಮಾಜಿಕ ವಾಸ್ತವ : ಭಾರತೀಯ ಅಮೆರಿಕನ್ನರ ಮನೋಭಾವ ಸಮೀಕ್ಷೆ 2020‘ – ವರದಿಯಲ್ಲಿ ಈ ವಿಷಯ ಗಮನ ಸೆಳೆದಿದೆ. ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್, ಜಾನ್ ಹಾಪ್ಕಿನ್ಸ್–ಎಸ್‌ಎಐಎಸ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.

ವರದಿಯಲ್ಲಿರುವ ಅಂಶಗಳು, ‘ಅಮೆರಿಕದಲ್ಲಿರುವ 1,200 ಭಾರತೀಯ-ಅಮೆರಿಕನ್ ನಿವಾಸಿಗಳ ರಾಷ್ಟ್ರೀಯ ಪ್ರತಿನಿಧಿಗಳ ಆನ್‌ಲೈನ್ ಸಮೀಕ್ಷೆ - 2020‘ ಅನ್ನು ಆಧರಿಸಿವೆ. ಐಎಎಎಸ್ ಹಾಗೂ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ಯೂಗೊವ್ ಸಹಭಾಗಿತ್ವದಲ್ಲಿ 2020ರ ಸೆಪ್ಟೆಂಬರ್ 1 ರಿಂದ 20, ನಡುವೆ ಸಮೀಕ್ಷೆ ನಡೆಸಲಾಗಿದೆ.

‘ಭಾರತೀಯ-ಅಮೆರಿಕನ್ನರು ನಿಯಮಿತವಾಗಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಇಬ್ಬರು ಭಾರತೀಯ– ಅಮೆರಿಕನ್ನರಲ್ಲಿ ಒಬ್ಬರು ಕಳೆದ ಒಂದು ವರ್ಷದಲ್ಲಿ ಚರ್ಮದ ಬಣ್ಣ ಆಧರಿಸಿದ ತಾರತಮ್ಯ ಮತ್ತು ಪಕ್ಷಪಾತವನ್ನು ಎದುರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಭಾರತೀಯ–ಅಮೆರಿಕನ್ನರು ನಿಯಮಿತವಾಗಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ವರದಿಯಲ್ಲಿರುವಂತೆ ಕಳೆದ ಒಂದು ವರ್ಷದಲ್ಲಿ ಇಬ್ಬರು ಭಾರತೀಯ– ಅಮೆರಿಕನ್ನರಲ್ಲಿ, ಒಬ್ಬರು ಈ ತಾರತಮ್ಯಕ್ಕೆ ಗುರಿಯಾಗಿದ್ದಾರೆ. ಅದೂ, ಚರ್ಮದ ಬಣ್ಣವನ್ನು ಆಧರಿಸಿ ತಾರತಮ್ಯ ಎಸಗಲಾಗಿದೆ.

‘ಅಚ್ಚರಿಯ ಸಂಗತಿಯೆಂದರೆ, ಬೇರೆ ವಿದೇಶಿ ವಲಸಿಗರಿಗಿಂತ, ಅಮೆರಿಕದಲ್ಲಿ ಜನಿಸಿದ ಭಾರತೀಯ – ಅಮೆರಿಕನ್ ಪ್ರಜೆಯೇ ಹೆಚ್ಚು ತಾರತಮ್ಯಕ್ಕೆ ಒಳಗಾಗಿದ್ದಾರೆ‘ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ‘ಅಮೆರಿಕದಲ್ಲಿರುವ ಭಾರತೀಯರು ಹೆಚ್ಚಾಗಿ ತಮ್ಮ ಸಮುದಾಯದೊಳಗೇ ವಿವಾಹವಾಗುತ್ತಿದ್ದಾರೆ‘ ಎಂದು ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.