ನ್ಯೂಯಾರ್ಕ್: ಭಾರತ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಆನಂದ್ ಹೆನ್ರಿ ಅವರು, ಪತ್ನಿ ಹಾಗೂ ಅವಳಿ ಮಕ್ಕಳನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಮೆರಿಕದ ಕ್ಯಾಲಿಫೋರ್ನಿಯಾದ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.

ಕೇರಳ ಮೂಲದ ಆನಂದ್ ಹೆನ್ರಿ, ಪತ್ನಿ ಆಲಿಸ್ ಹಾಗೂ ಅವರ ನಾಲ್ಕು ವರ್ಷದ ಅವಳಿ ಮಕ್ಕಳ ಮೃತದೇಹಗಳು ಸ್ಯಾನ್ಮಾಟಿಯೊ ಕೌಂಟಿಯಲ್ಲಿಯ ಐಶಾರಾಮಿ ಮನೆಯಲ್ಲಿ ಈಚೆಗೆ ಪತ್ತೆಯಾಗಿದ್ದವು. ಮೃತದೇಹಗಳ ಬಳಿ ಪಿಸ್ತೂಲು ಕೂಡ ಪತ್ತೆಯಾಗಿತ್ತು.

ಆಲಿಸ್ ಅವರಿಗೆ ಹಲವು ಗುಂಡುಗಳು ತಗುಲಿದ್ದವು. ಆದರೆ ಹೆನ್ರಿ ಅವರಿಗೆ ಒಂದೇ ಗುಂಡು ತಗುಲಿತ್ತು. ಈ ಕಾರಣಕ್ಕೆ ಅವರೇ ಹತ್ಯೆ ಮಾಡಿರಬಹುದು ಎಂದು ಶಂಕಿಸಿರುವುದಾಗಿ ಪೊಲೀಸರು ವಿವರಿಸಿದ್ದಾರೆ.

ಮಕ್ಕಳು ಗುಂಡೇಟಿನಿಂದ ಮೃತಪಟ್ಟಿಲ್ಲ. ಅವರ ಮರಣಕ್ಕೆ ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಹೆನ್ರಿ ಅವರು ಕೃತಕ ಬುದ್ಧಿಮತ್ತೆ (ಎ.ಐ) ಕ್ಷೇತ್ರದಲ್ಲಿ ಹಾಗೂ ಆಲಿಸ್ ಅವರು ಡೇಟಾ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿಯು ಸಾಮಾಜಿಕ ಮಾಧ್ಯಮ ಖಾತೆಗಳಿಂದ ತಿಳಿದು ಬಂದಿರುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.