ತೆಹ್ರಾನ್: ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ನಡೆಸಿದ ದಾಳಿಯ ಹಿಂದೆ ತನ್ನ ಪಾತ್ರವಿದೆ ಎಂಬ ಆರೋಪವು ಆಧಾರರಹಿತ ಎಂದು ಇರಾನ್ ಹೇಳಿದೆ.

‘ದಾಳಿಯ ಹಿಂದೆ ಇರಾನ್ನ ಪಾತ್ರಕ್ಕೆ ಸಂಬಂಧಿಸಿದ ಆರೋಪಗಳು ರಾಜಕೀಯ ಕಾರಣಗಳನ್ನು ಆಧರಿಸಿವೆ. ಇಸ್ಲಾಮಿಕ್ ಗಣರಾಜ್ಯ ಇರಾನ್ ಪ್ಯಾಲೇಸ್ಟಿನ್ ಸೇರಿದಂತೆ ಇತರ ದೇಶಗಳಲ್ಲಿನ ನಿರ್ಣಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ನಾಸಿರ್ ಕನಾನಿ ಸುದ್ದಿಗಾರರಿಗೆ ತಿಳಿಸಿದರು.

ತೆಹ್ರಾನ್ನ ಯಾವುದೇ ಸಹಾಯವಿಲ್ಲದೆ ಪ್ಯಾಲೆಸ್ಟೀನ್ ಜನ ತಮ್ಮ ರಾಷ್ಟ್ರವನ್ನು ರಕ್ಷಿಸಲು ಹಾಗೂ ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ಅಗತ್ಯವಾದ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಹೊಂದಿದ್ದಾರೆ ಎಂದು ಕನಾನಿ ಹೇಳಿದರು.

ಹಮಾಸ್ ದಾಳಿ ಹಿಂದೆ ಇರಾನ್ ಪಾತ್ರವಿದೆ ಎಂಬ ಆರೋಪವನ್ನು ವಿಶ್ವಸಂಸ್ಥೆಯಲ್ಲಿನ ಇರಾನ್ನ ಕಾಯಂ ನಿಯೋಗವು ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ನಿರಾಕರಿಸಿದೆ.

‘ಇಸ್ರೇಲ್ ಮೇಲೆ ಹಮಾಸ್ ಅನಿರೀಕ್ಷಿತ ದಾಳಿ ಯೋಜಿಸಲು ಇರಾನ್ನ ಭದ್ರತಾ ಪಡೆ ಅಧಿಕಾರಿಗಳು ಸಹಾಯ ಮಾಡಿದರು ಮತ್ತು ಕಳೆದ ಸೋಮವಾರ ಬೈರುತ್ನಲ್ಲಿ ನಡೆದ ಸಭೆಯಲ್ಲಿ ದಾಳಿಗೆ ಹಸಿರು ನಿಶಾನೆ ತೋರಿದರು’ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.

ಹಮಾಸ್ ದಾಳಿಯ ಬಳಿಕ ಹಮಾಸ್ ಮತ್ತು ಗಾಜಾ ಮೂಲದ ಇಸ್ಲಾಮಿಕ್ ಜಿಹಾದ್ ಗುಂಪಿನ ನಾಯಕರೊಂದಿಗೆ ಮಾತನಾಡಿರುವ ಅಧ್ಯಕ್ಷ ಇಬ್ರಾಹಿಂ ರೈಸಿ, ಪ್ಯಾಲೆಸ್ಟೀನ್ ಬೆಂಬಲಿಸುವಂತೆ ಮುಸ್ಲಿಂ ಸರ್ಕಾರವಿರುವ ದೇಶಗಳನ್ನು ಒತ್ತಾಯಿಸಿದರು.

ಹಮಾಸ್ ದಾಳಿಯಲ್ಲಿ ಇರಾನ್ ನೇರವಾಗಿ ಭಾಗಿಯಾಗಿದೆಯೇ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದಾಗ್ಯೂ, ಹಮಾಸ್ಗೆ ಇರಾನ್ ಸೇರಿದಂತೆ ಇತರೆ ದೇಶಗಳು ಹಣಕಾಸು ಮತ್ತು ಶಸ್ತ್ರಾಸ್ತ್ರ ನೆರವು ನೀಡಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.