ಮಾಲೆ: ಮಾಲ್ದೀವ್ಸ್ ಸಂಸತ್ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮದ್ ಮುಯಿಝು ನೇತೃತ್ವದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್ಸಿ) ಪಕ್ಷವು 71 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.

ಮಾಲ್ದೀವ್ಸ್ನ 93 ಕ್ಷೇತ್ರಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಮುಯಿಝು ನೇತೃತ್ವದ ಸರ್ಕಾರಕ್ಕೆ ಬಹುಮತ ಸಿಕ್ಕಿರುವುದರಿಂದ, ಅವರ ಚೀನಾ ಪರ ವಿದೇಶಾಂಗ ನೀತಿಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.

‘ತಮ್ಮ ಪಕ್ಷಕ್ಕೆ ಪ್ರಚಂಡ ಜಯ ಸಿಕ್ಕ ಬೆನ್ನಲ್ಲೇ ಇಲ್ಲಿನ ಕೃತಕ ಬೀಚ್ನಲ್ಲಿ ಸೋಮವಾರ ರಾತ್ರಿ ಪಿಎನ್ಸಿ ಸಂಭ್ರಮವನ್ನು ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ’ ಎಂದು ಮಿಹಾರು ಸುದ್ದಿಸಂಸ್ಥೆ ತಿಳಿಸಿದೆ.

‘ಮಾಜಿ ಪ್ರಧಾನಿ ಇಬ್ರಾಹಿಂ ಸೋಲಿಹ್ ನೇತೃತ್ವದ ದಿ ಮಾಲ್ದೀವಿಯನ್ ಡೆಮಾಕ್ರಟಿಕ್ ಪಕ್ಷವು (ಎಂಡಿಪಿ) ಕಳೆದ ಸಂಸತ್ ಚುನಾವಣೆಯಲ್ಲಿ 65 ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ 15 ಸ್ಥಾನಗಳಲ್ಲಿ ಗೆಲ್ಲಲಷ್ಟೇ ಶಕ್ತವಾಗಿದೆ’ ಎಂದೂ ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.