ಕಠ್ಮಂಡು: ನೇಪಾಳದ ಪ್ರಮುಖ ವಿರೋಧ ಪಕ್ಷ ಹಾಗೂ ದೇಶದ ಅತಿ ದೊಡ್ಡ ಕಮ್ಯುನಿಸ್ಟ್ ಪಕ್ಷ ಸಿಪಿಎನ್–ಯುಎಂಎಲ್ ಬುಧವಾರ ಅಧಿಕೃತವಾಗಿ ವಿಭಜನೆಯಾಗಿದೆ.

‘ರಾಜಕೀಯ ಪಕ್ಷಗಳ ಕಾಯ್ದೆ–2071‘ಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ಈ ಪಕ್ಷವು ವಿಭಜನೆಗೊಂಡಿದೆ.

ರಾಜಕೀಯ ಪಕ್ಷಗಳು ಸುಲಭವಾಗಿ ವಿಭಜನೆಗೊಳ್ಳಲು ನೆರವಾಗುವಂತಹ ಈ ವಿವಾದಾತ್ಮಕ ಸುಗ್ರೀವಾಜ್ಞೆಯನ್ನು ಸರ್ಕಾರ ಬೆಂಬಲಿಸಿದ ನಂತರ, ಪಕ್ಷದ ಭಿನ್ನಮತೀಯ ನಾಯಕ ಮಾಧವ್ ಕುಮಾರ್ ನೇಪಾಳ್ ನೇತೃತ್ವದ ಬಣ ಹೊಸ ರಾಜಕೀಯ ಪಕ್ಷ ನೋಂದಾವಣೆಗೆ ಮುಂದಾಯಿತು. ಈ ಸಂಬಂಧ ‘ಸಿಪಿಎನ್–ಯುಎಂಎಲ್(ಸೋಷಿಯಲಿಸ್ಟ್)‘ ಹೆಸರಲ್ಲಿ ಹೊಸ ಪಕ್ಷದ ನೋಂದಣಿಗಾಗಿ ಬುಧವಾರ ಚುನಾವಣಾ ಆಯೋಗಕ್ಕೆ ಅರ್ಜಿಯನ್ನೂ ಸಲ್ಲಿಸಿದೆ.

ಇದಕ್ಕೂ ಮೊದಲು ಬುಧವಾರದಂದು ಮಂತ್ರಿ ಮಂಡಲದ ಶಿಫಾರಸಿನ ಅನ್ವಯ, ನೇಪಾಳದ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು, ರಾಜಕೀಯ ಪಕ್ಷಗಳ ವಿಭಜನೆಯನ್ನು ಸರಾಗಗೊಳಿಸುವ ಉದ್ದೇಶದೊಂದಿಗೆ ‘ರಾಜಕೀಯ ಪಕ್ಷಗಳ ಕಾಯ್ದೆ 2071’ಕ್ಕೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.