ನವದೆಹಲಿ:ವಾಡಿಯಾ ಸಮೂಹ ಸಂಸ್ಥೆ ಮುಖ್ಯಸ್ಥ,ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾಗೆ ಗಾಂಜಾ ಸಾಗಾಟ ಮಾಡಿದ ಪ್ರಕರಣದಲ್ಲಿ ಜಪಾನ್ನ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಉತ್ತರ ಜಪಾನ್ನ ಹೊಕ್ಕಾಯ್ಡೊ ದ್ವೀಪದ ‘ನ್ಯೂ ಚಿಟೋಸ್’ ವಿಮಾನ ನಿಲ್ದಾಣದಲ್ಲಿ ಕಳೆದ ಮಾರ್ಚ್ನಲ್ಲಿ ವಾಡಿಯಾ ಅವರನ್ನು ಕಸ್ಟಮ್ಸ್ ಅಧಿಕಾರಿಗಳು 25 ಗ್ರಾಂ ಗಾಂಜಾ ಸಮೇತ ವಶಕ್ಕೆ ಪಡೆದಿದ್ದರು ಎಂದು ‘ದಿ ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿದೆ.

ಈ ಕುರಿತು ವಾಡಿಯಾ ಸಮೂಹ ಸಂಸ್ಥೆ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, ವಾಡಿಯಾ ಸದ್ಯ ಭಾರತದಲ್ಲಿದ್ದಾರೆ ಎಂದಿದ್ದಾರೆ.

‘ಇದು ಸಸ್ಪೆಂಡೆಡ್ (ನಿಗದಿತ ಅವಧಿಯಲ್ಲಿ ಮತ್ತೆ ಅಪರಾಧ ಎಸಗದಿದ್ದರೆ ಶಿಕ್ಷೆ ಜಾರಿಗೊಳಿಸದೇ ಇರುವುದು) ತೀರ್ಪಾಗಿದೆ. ಹೀಗಾಗಿ ವಾಡಿಯಾ ಅವರ ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ಅಡ್ಡಿಯಾಗುವುದಿಲ್ಲ. ಈವರೆಗೆ ನಿರ್ವಹಿಸುತ್ತಾ ಬಂದಿರುವ ಜವಾಬ್ದಾರಿಯನ್ನು ಅವರು ಮುಂದುವರಿಸಲಿದ್ದಾರೆ’ ಎಂದು ವಕ್ತಾರರು ತಿಳಿಸಿದ್ದಾರೆ.

ಜಪಾನ್ನ ಸಪ್ಪೋರೊದ ಜಿಲ್ಲಾ ನ್ಯಾಯಾಲಯ ವಾಡಿಯಾಗೆ ಶಿಕ್ಷೆ ವಿಧಿಸಿದ್ದು, ಇದನ್ನು ಐದು ವರ್ಷಗಳವರೆಗೆ ಅಮಾನತಿನಲ್ಲಿರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.