ಅಶ್ಗಾಬಾತ್, ತುರ್ಕ್‌ಮೆನಿಸ್ತಾನ: ಭಾರತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಧ್ಯೆ ಏಷ್ಯಾದ ಪ್ರಮುಖ ದೇಶವಾದ ತುರ್ಕ್‌ಮೆನಿಸ್ತಾನಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದು, ಶುಕ್ರವಾರ ರಾಜಧಾನಿ ಅಶ್ಗಾಬಾತ್ ನಗರದಲ್ಲಿರುವ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಬಲ ನೀಡುವ ನಿಟ್ಟಿನಲ್ಲಿ ಕೋವಿಂದ್ ಅವರುತುರ್ಕ್‌ಮೆನಿಸ್ತಾನದ ಅಧ್ಯಕ್ಷ ಸರ್ದರ್ ಬೆರ್ಡಿಮುಹಮದೊವ್ ಅವರ ಜತೆ ಮಾತುಕತೆ ನಡೆಸಲಿದ್ದಾರೆ. ತುರ್ಕ್‌ಮೆನಿಸ್ತಾನವು ನೈಸರ್ಗಿಕ ಅನಿಲದ ಹೇರಳ ನಿಕ್ಷೇಪಗಳನ್ನು ಹೊಂದಿದೆ.

ನಂತರ, ಏಪ್ರಿಲ್ 4–7ರ ವರೆಗೆ ರಾಷ್ಟ್ರಪತಿ ಕೋವಿಂದ್ ಅವರು ನೆದರ್ಲೆಂಡ್ಸ್ ಪ್ರವಾಸ ಕೈಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ ರಾಷ್ಟ್ರಗಳ ವ್ಯವಹಾರ) ಸಂಜಯ್ ವರ್ಮಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.