ವಾಷಿಂಗ್ಟನ್: ಸಮುದ್ರದ ನೀರಿನಲ್ಲಿರುವ ಆಮ್ಲಜನಕ ಮಟ್ಟದಲ್ಲಿನ ಸಣ್ಣ ಪ್ರಮಾಣದ ಕೊರತೆ ಸಹ ಅಲ್ಲಿನ ಸೂಕ್ಷ್ಮ ಜಲಚರ ಜೀವಿಗಳ ಮೇಲೆ ತೀವ್ರತರವಾದ ಪರಿಣಾಮಕ್ಕೆ ಕಾರ ವಾಗುತ್ತದೆ ಎಂದು ಅಮೆರಿಕದ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ.

ಸಮುದ್ರದ ಜೀವಿಗಳ ಆಹಾರ ಚಕ್ರದಲ್ಲಾಗುವ ಪ್ರತಿಕೂಲ ಪರಿಣಾಮದ ಮೇಲೂ ಈ ಅಧ್ಯಯನ ಬೆಳಕು ಚೆಲ್ಲಿದೆ. ‘ಅಡ್ವಾನ್ಸಸ್ ಸೈನ್ಸ್’ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಈ ಲೇಖನವು, ಸಮುದ್ರದ 660 ರಿಂದ 44,920 ಅಡಿ ವರೆಗಿನ ಪ್ರದೇಶವನ್ನು ‘ಆಮ್ಲಜನಕ ವಿರಳ ವಲಯ’ ಎಂದು ಗುರುತಿಸಲಾಗುತ್ತದೆ. ಈ ವಲಯದ ಆಮ್ಲಜನಕ ಪ್ರಮಾಣದಲ್ಲಾಗುವ ವ್ಯತ್ಯಾಸವು ಸೂಕ್ಷ್ಮ ಜಲಚರಗಳ ನಾಶಕ್ಕೆ ಕಾರಣವಾಗುತ್ತದೆ ಎಂದಿದೆ. ಸಮುದ್ರದಲ್ಲಿನ ಆಮ್ಲ ಜನಕದ ಕೊರತೆ ಭವಿಷ್ಯದಲ್ಲಿ ಜಾಗತಿಕ ತಾಪಮಾನ ಏರಿಕೆಗೂ ಕಾರಣ ವಾಗುತ್ತದೆ. ಜಲಚರಗಳ ಆಹಾರ ವ್ಯವಸ್ಥೆಯಲ್ಲಿ ಪ್ರಮುಖವಾಗಿರುವ ಈ ಸೂಕ್ಷ್ಮ ಜೀವಿಗಳ ನಾಶವು ತಿಮಿಂಗಲುಗಳು ಸೇರಿದಂತೆ ವಾಣಿಜ್ಯ, ಆಹಾರ ಉದ್ದೇಶಕ್ಕೆ ಬಳಸುವ ಮೀನುಗಳ ಮೇಲೂ ಪ್ರಭಾವ ಬೀರಲಿದೆ ಎಂದು ಅಧ್ಯಯನ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.