ಕೊಲಂಬೊ: ಶ್ರೀಲಂಕಾದಲ್ಲಿರುವ ಇಸ್ರೇಲ್ ಪ್ರಜೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದರು.

ಅಕ್ಟೋಬರ್ 19ರಿಂದ 23ರ ಒಳಗೆ ಅರುಗಮ್ ಕೊಲ್ಲಿಯಲ್ಲಿ ಸಂಭವನೀಯ ದಾಳಿ ನಡೆಯಬಹುದು ಎಂದು ಭಾರತೀಯ ಗುಪ್ತಚರ ದಳವು ಎಚ್ಚರಿಕೆ ನೀಡಿತ್ತು. ಈ ಕಾರಣದಿಂದಾಗಿ ಇಬ್ಬರು ಆರೋಪಿಗಳನ್ನು ಶ್ರೀಲಂಕಾದ ಭಯೋತ್ಪಾದನಾ ತನಿಖಾ ವಿಭಾಗದ ಪೊಲೀಸರು ಬಂಧಿಸಿದ್ದು, ಅದರಲ್ಲಿ ಒಬ್ಬ ಆರೋಪಿಯು ಇರಾಕ್ನಿಂದ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

‘ಸಂಭವನೀಯ ದಾಳಿಯ ಕುರಿತು ಅಕ್ಟೋಬರ್ 7ರಂದು ಮಾಹಿತಿ ದೊರೆತಿದ್ದು, ದಾಳಿಯನ್ನು ತಡೆಯಲು ಎರಡು ವಾರಗಳಿಂದ ದಕ್ಷಿಣ ಕರಾವಳಿ ಮತ್ತು ಆಗ್ನೇಯ ರೆಸಾರ್ಟ್ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅರುಗಮ್ ಕೊಲ್ಲಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುವ ಮಾಹಿತಿ ದೊರೆತಿದ್ದು, ಪ್ರಜೆಗಳು ಎಚ್ಚರಿಕೆಯಿಂದ ಇರುವಂತೆ ಮತ್ತು ಮುಂದಿನ ಆದೇಶದವರೆಗೆ ಈ ಜಾಗಕ್ಕೆ ಪ್ರವಾಸಿಗರು ಭೇಟಿ ನೀಡಬಾರದು’ ಎಂದು ಬುಧವಾರ ಕೊಲಂಬೊದಲ್ಲಿರುವ ಯುಎಸ್ ರಾಯಭಾರ ಕಚೇರಿ ಮತ್ತು ಬ್ರಿಟಿಷ್ ಹೈ ಕಮಿಷನ್ ಹೇಳಿಕೆಯನ್ನು ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.