ನ್ಯೂಯಾರ್ಕ್/ ಟೆಲ್ಅವೀವ್: 10ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಭಾಗವಾಗಿ ವಿಶ್ವದಾದ್ಯಂತ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ದಿನಪೂರ್ತಿ ಯೋಗಾಸನ ಮಾಡಿದರು.

ನ್ಯೂಯಾರ್ಕ್ನಲ್ಲಿರುವ ಟೈಮ್ಸ್ ಸ್ಕ್ವೇರ್ನಲ್ಲಿ ಭಾರತದ ರಾಯಭಾರ ಕಚೇರಿ ಹಾಗೂ ಟೈಮ್ಸ್ ಸ್ಕ್ವೇರ್ ಅಲಯನ್ಸ್ ಜಂಟಿಯಾಗಿ ವಿಶೇಷ ಯೋಗಾಸನವನ್ನು ಹಮ್ಮಿಕೊಂಡಿದ್ದವು. ನ್ಯೂಯಾರ್ಕ್ನಲ್ಲಿ 33.8 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನವಿದ್ದು, ಜನಸಾಮಾನ್ಯರು ಗುರುವಾರ ಬೆಳ್ಳಂಬೆಳಗ್ಗೆ ಯೋಗ ಮಾಡಲು ಮ್ಯಾಟ್ಗಳನ್ನು ಹಿಡಿದು ನಗರದತ್ತ ಬಂದರು.

ಯೋಗ ತರಬೇತಿ ಮತ್ತು ಧ್ಯಾನದಲ್ಲಿ ಎರಡು ದಶಕಗಳ ಅನುಭವ ಇರುವ ರಿಚಾ ಧೆಕ್ನೆ ಅವರ ನೇತೃತ್ವದಲ್ಲಿ ಯೋಗಾಸನ ಮತ್ತು ಧ್ಯಾನ ನಡೆಯಿತು. ಅಲ್ಲದೆ, ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಹಲವು ಯೋಗ ಶಿಕ್ಷಕರು ಭಾಗವಹಿಸಿದ್ದರು.

ಭಾರತದ ಉಪ ರಾಯಭಾರ ಅಧಿಕಾರಿ ಶ್ರೀಪ್ರಿಯಾ ರಂಗನಾಥನ್ ನೇತೃತ್ವದಲ್ಲಿ ವಾಷಿಂಗ್ಟನ್ನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ನೂರಾರು ಮಂದಿ ಪಾಲ್ಗೊಂಡು, ಯೋಗಾಸನಗಳನ್ನು ಮಾಡಿದರು.

ಇಸ್ರೇಲ್ನ ಟೆಲ್ ಅವೀವ್ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಕಾರ್ಯಕ್ರಮದಲ್ಲಿ ಇಸ್ರೇಲ್ನ ಮುನ್ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು. ಗುರುವಾರ ನಡೆದ ಮೊದಲ ದಿನದ ಯೋಗ ಕಾರ್ಯಕ್ರಮದಲ್ಲಿ ಮೊದಲ ಮಹಿಳೆ ಮಿಚಲ್ ಹೆರ್ಜಾಗ್ ಅವರು ಮುಖ್ಯ ಅತಿಥಿಯಾಗಿದ್ದರು. ಅಲ್ಲದೆ, ಇಸ್ರೇಲ್ನಲ್ಲಿರುವ ಭಾರತದ ರಾಯಭಾರ ಕಚೇರಿ ನೇತೃತ್ವದಲ್ಲಿ ದೇಶದಾದ್ಯಂತ ಹಲವು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಈ ವೇಳೆ ಮಿಚಲ್ ಹೆರ್ಜಾಗ್ ಅವರು ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯದ ಬಗ್ಗೆ ಭಾಷಣ ಮಾಡಿದರು. ಸಿಂಗಪುರ, ನೇಪಾಳ, ಶ್ರೀಲಂಕಾ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
.ಯೋಗ – ಜಾಗತಿಕ ಕ್ಷೇಮದ ಪ್ರಬಲ ರಾಯಭಾರಿ: ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.