ಲಂಡನ್: ಜಾಗತಿಕ ಶಾಂತಿ ಸೂಚ್ಯಂಕದ 2017ರ ಪಟ್ಟಿಯಲ್ಲಿ ಭಾರತ 137ನೇ ಸ್ಥಾನಕ್ಕೆ ಏರಿದೆ.

‘ಕಾನೂನು ಸುವ್ಯವಸ್ಥೆ ಬಲಪಡಿಸಿರುವುದರಿಂದ ಹಿಂಸಾತ್ಮಕ ಅಪರಾಧಗಳ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ, 141ನೇ ಸ್ಥಾನದಲ್ಲಿದ್ದ ಭಾರತ ನಾಲ್ಕು ಸ್ಥಾನಗಳ ಸುಧಾರಣೆ ಕಂಡಿದೆ’ ಎಂದು ಆಸ್ಟ್ರೇಲಿಯಾದ ಚಿಂತನ ಚಾವಡಿ ಹೇಳಿದೆ.

ಐಸ್ಲ್ಯಾಂಡ್ ವಿಶ್ವದಲ್ಲಿಯೇ ಅತ್ಯಂತ ಶಾಂತಿಯುತ ರಾಷ್ಟ್ರವಾಗಿದ್ದು, 2008ರಿಂದಲೂ ಇದೇ ಸ್ಥಾನ ಕಾಪಾಡಿಕೊಂಡಿದೆ. ನ್ಯೂಜಿಲೆಂಡ್, ಆಸ್ಟ್ರಿಯಾ, ಪೋರ್ಚುಗಲ್ ಹಾಗೂ ಡೆನ್ಮಾರ್ಕ್ ನಂತರದ ಸ್ಥಾನಗಳಲ್ಲಿವೆ.

ಶಾಂತಿ ಕಾಯ್ದುಕೊಳ್ಳುವಲ್ಲಿ ಅತ್ಯಂತ ಕೆಳಗಿರುವ ಸಿರಿಯಾ, ಕಳೆದ ಐದು ವರ್ಷಗಳಿಂದಲೂ ಇದೇ ಸ್ಥಾನದಲ್ಲಿದೆ. ನಂತರದ ನಾಲ್ಕು ಸ್ಥಾನಗಳಲ್ಲಿ ಕ್ರಮವಾಗಿ ಅಫ್ಗಾನಿಸ್ತಾನ, ದಕ್ಷಿಣ ಸೂಡಾನ್, ಇರಾಕ್ ಮತ್ತು ಸೊಮಾಲಿಯಾ ಇವೆ.

ಕಳೆದ 30 ವರ್ಷಗಳಲ್ಲಿ, ಭಾರಿ ಶಸ್ತ್ರಾಸ್ತ್ರ ಸಂಗ್ರಹ ಸಾಮರ್ಥ್ಯ ವೃದ್ಧಿಸಿಕೊಂಡಿರುವ ರಾಷ್ಟ್ರಗಳ ಪೈಕಿ ಭಾರತ, ಪಾಕಿಸ್ತಾನ ಸಹ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.