ನ್ಯೂಯಾರ್ಕ್(ಪಿಟಿಐ): ಮೈಕ್ರೊಸಾಫ್ಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಭಾರತ ಮೂಲದ ಸತ್ಯ ನಾದೆಲ್ಲ (47) ಅವರ ವಾರ್ಷಿಕ ವೇತನ ಮತ್ತು ಭತ್ಯೆಯ ಒಟ್ಟು ಮೊತ್ತ 8.43 ಕೋಟಿ ಡಾಲರ್‌ಗಳಷ್ಟು (ಅಂದಾಜು 515 ಕೋಟಿ) ಇದೆ.
ಅಂದರೆ, ನಾದೆಲ್ಲ ಅವರ ದಿನದ ವೇತನ ಸುಮಾರು 1.4 ಕೋಟಿಗಳಷ್ಟಿದೆ.

ಅಮೆರಿಕದ ಷೇರು ಮತ್ತು ವಿನಿಮಯ ಆಯೋಗಕ್ಕೆ ಮೈಕ್ರೊಸಾಫ್ಟ್ ಕಂಪೆನಿ ಇತ್ತೀಚೆಗೆ ಸಲ್ಲಿಸಿರುವ ಲೆಕ್ಕಪತ್ರ ವಿವರ ಪ್ರಕಾರ, ನಾದೆಲ್ಲ ಅವರು 2014ರ ಜೂನ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ವೇತನ, ಭತ್ಯೆ, ಇತರೆ ಸವಲತ್ತು ಸೇರಿದಂತೆ ಒಟ್ಟಾರೆಯಾಗಿ 843 ಲಕ್ಷ ಡಾಲರ್‌ಗಳನ್ನು ಪಡೆದುಕೊಂಡಿದ್ದಾರೆ. 2013ರಲ್ಲಿ ಅವರು ಕೇವಲ 76.60 ಲಕ್ಷ ಡಾಲರ್ (47.11 ಕೋಟಿ) ಪಡೆದಿದ್ದರು.
ಇತ್ತೀಚೆಗೆ ಅವರು, ‘ಮಹಿಳಾ ಸಿಬ್ಬಂದಿ ವೇತನ ಹೆಚ್ಚಳಕ್ಕಾಗಿ ಒತ್ತಾಯಿಸಬಾರದು. ಕೆಲಸವನ್ನು ಒಂದು ಉತ್ತಮ ಕರ್ಮ ಎಂದುಕೊಂಡು ಸೇವೆ ಸಲ್ಲಿಸಬೇಕು’ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದರು. ಆನಂತರ ಅವರ ವೇತನ, ಭತ್ಯೆ ಮೊದಲಾದ ಗಳಿಕೆಗಳತ್ತ ಬಹಳಷ್ಟು ಮಂದಿಯ ಕಣ್ಣು ನೆಟ್ಟಿತ್ತು. ಅವರೆಲ್ಲರಿಗೂ ಈಗ ಮಾಹಿತಿ ಸಿಕ್ಕಂತಾಗಿದೆ.

2013ನೇ ಹಣಕಾಸು ವರ್ಷದಲ್ಲಿನ ನಾದೆಲ್ಲ ಅವರ ಗಳಿಕೆಗೆ ಹೋಲಿಸಿದರೆ 2014ನೇ ಹಣಕಾಸು ವರ್ಷದಲ್ಲಿ 766.40 ಲಕ್ಷ ಡಾಲರ್ (471.33 ಕೋಟಿ) ಹೆಚ್ಚಿಗೆ ವೇತನ – ಭತ್ಯೆ ಪಡೆದುಕೊಂಡಂತಾಗಿದೆ. ಒಂದೇ ವರ್ಷದಲ್ಲಿ ಅಕ್ಷರಶಃ 10 ಪಟ್ಟು ಅಧಿಕ ವೇತನ, ಭತ್ಯೆ ಸ್ವೀಕರಿಸಿದಂತಾಗಿದೆ!. ನಾದೆಲ್ಲ ಅವರ 2014ನೇ ಹಣಕಾಸು ವರ್ಷದ ಗಳಿಕೆಯಲ್ಲಿ 9,18,917 ಡಾಲರ್ (5.65 ಕೋಟಿ) ವೇತನ, 36 ಲಕ್ಷ ಡಾಲರ್ (22.14 ಕೋಟಿ) ಬೋನಸ್, 797.70 ಲಕ್ಷ ಡಾಲರ್‌ಗಳಷ್ಟು (490.58 ಕೋಟಿ) ಷೇರುಪಾಲು ಗಳಿಕೆ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.