ಫೆಬ್ರುವರಿ ತಿಂಗಳಿನಲ್ಲಿ ಮೋಟೊರೋಲ ಮೋಟೊ-ಜಿ ಫೋನ್ ಬಿಡುಗಡೆ ಮಾಡಿದಾಗ ಅದು ತುಂಬ ಸುದ್ದಿ ಮಾಡಿತ್ತು. ಮಧ್ಯಮ ಬೆಲೆಯಲ್ಲಿ ದುಬಾರಿ ಫೋನ್‌ಗಳು ನೀಡುವ ಬಹುತೇಕ ಗುಣವೈಶಿಷ್ಟ್ಯಗಳನ್ನು ನೀಡುವ ಫೋನ್ ಅದಾಗಿತ್ತು. ಸಹಜವಾಗಿಯೇ ಅದು ಬಿಸಿ ದೋಸೆಯಂತೆ ಮಾರಾಟವಾಗಿತ್ತು. ಫ್ಲಿಪ್‌ಕಾರ್ಟ್ ಜಾಲತಾಣದ ಮೂಲಕ ಮಾತ್ರ ಮಾರಾಟವಾಗುತ್ತಿದ್ದ ಅದು ಘೋಷಣೆಯಾದ ಎರಡು ಗಂಟೆಗಳಲ್ಲೇ ಅದರ ಪ್ರಥಮ ದಾಸ್ತಾನು ಮುಗಿದಿತ್ತು. ಈಗ ಅದೇ ಕಂಪೆನಿಯಿಂದ ಇನ್ನೂ ಕಡಿಮೆ ಬೆಲೆಗೆ ಒಂದು ಉತ್ತಮ ಶುದ್ಧ ಆಂಡ್ರಾಯಿಡ್ ಫೋನ್ ಬಂದಿದೆ. ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
1.2 ಗಿಗಾಹರ್ಟ್ಸ್ ವೇಗದ ಎರಡು ಹೃದಯಗಳ ಪ್ರೊಸೆಸರ್. ಪ್ರತ್ಯೇಕ ಗ್ರಾಫಿಕ್ಸ್ ಪ್ರೊಸೆಸರ್, 1 + 4 ಗಿಗಾಬೈಟ್ ಮೆಮೊರಿ, ಹೆಚ್ಚಿಗೆ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 540 x 960 ಪಿಕ್ಸೆಲ್ ರೆಸೊಲೂಶನ್‌ನ 4.3 ಇಂಚು ಗಾತ್ರದ ಪರದೆ, ಗೊರಿಲ್ಲ ಗಾಜು, 2ಜಿ/3ಜಿ, 2 ಸಿಮ್, 5 ಮೆಗಾಪಿಕ್ಸೆಲ್ ಕ್ಯಾಮೆರಾ, ಇನ್ನೊಂದು ಕ್ಯಾಮೆರಾ ಮತ್ತು ಫ್ಲಾಶ್ ಇಲ್ಲ, ವಿಡಿಯೊ ಚಿತ್ರೀಕರಣ ಸೌಲಭ್ಯ (ಹೈಡೆಫಿನಿಶನ್ ಅಲ್ಲ), ವೈಫೈ, ಬ್ಲೂಟೂತ್, ಜಿಪಿಎಸ್, ಎಫ್‌ಎಂ ರೇಡಿಯೊ, ಆಂಡ್ರಾಯಿಡ್

4.4.2 (ಕಿಟ್‌ಕ್ಯಾಟ್), 124.8 x 64.8 x 12.3 ಮಿ.ಮೀ. ಗಾತ್ರ, 142 ಗ್ರಾಂ ತೂಕ, 1980 mAh ಬ್ಯಾಟರಿ ಇತ್ಯಾದಿ. ಬೆಲೆ ₹6,999. ಖ್ಯಾತ ಕಂಪೆನಿಯ

ಮಧ್ಯಮ ಬೆಲೆಯ, ಅಂದರೆ ಸುಮಾರು ₹15 ರಿಂದ 20 ಸಾವಿರ ಬೆಲೆಯ ಫೋನ್‌ಗಳ ಗುಣವೈಶಿಷ್ಟ್ಯಗಳು ಇದರಲ್ಲಿವೆ. ಸದ್ಯಕ್ಕೆ ಇದು flipkart.com ಜಾಲತಾಣದ ಮೂಲಕ ಮಾತ್ರ ಲಭ್ಯ.

ಈ ವಿಮರ್ಶೆಯನ್ನು ಇದರ ಬೆಲೆ ಕೇವಲ ₹6,999 ಎಂಬುದನ್ನು ಗಮನದಲ್ಲಿಟ್ಟುಕೊಂಡು ಬರೆಯಲಾಗಿದೆ. ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ಕೈಯಲ್ಲಿ ಹಿಡಿಯುವ ಅನುಭವ ಪರವಾಗಿಲ್ಲ. ಕಡಿಮೆ ಬೆಲೆಯ ಫೋನ್ ಎಂದು ಅನ್ನಿಸುವುದಿಲ್ಲ.

ಕಡಿಮೆ ಬೆಲೆಯ ಫೋನ್ ಆದುದರಿಂದ ಕೆಲಸ ಮಾಡುವ ವೇಗ ಕಡಿಮೆ ಇರಬಹುದು ಎಂದು ಅನ್ನಿಸಿದರೂ ಇದನ್ನು ಬಳಸಿದಾಗ ಹಾಗೆ ಅನ್ನಿಸಲಿಲ್ಲ. ಟೆಂಪಲ್ ರನ್ ಆಟ ಆಡುವ ಅನುಭವ ತೃಪ್ತಿದಾಯಕವಾಗಿಯೇ ಇತ್ತು. ಪರದೆಯಲ್ಲಿ ಐಕಾನ್‌ಗಳನ್ನು ಜಾರಿಸುವಾಗ ನಿಧಾನ ಅನ್ನಿಸಲಿಲ್ಲ. ವಿಡಿಯೊ ವೀಕ್ಷಿಸುವ ಅನುಭವ ಪರವಾಗಿಲ್ಲ. ಹೈಡೆಫಿನಿಶನ್ ವಿಡಿಯೊ ಕೂಡ ಸರಾಗವಾಗಿ ಪ್ಲೇ ಆಗುತ್ತದೆ.

ಇದು ಬಳಸುವುದು ಶುದ್ಧ ಆಂಡ್ರಾಯಿಡ್. ಅಂದರೆ ಇದರ ಮೇಲೆ ಕೆಲವು ಕಂಪೆನಿಗಳವರು ತಮ್ಮದೇ ಹೆಚ್ಚಿಗೆ ತಂತ್ರಾಂಶಗಳನ್ನು ಹೇರುವಂತೆ ಇವರೇನೂ ಹೇರಿಲ್ಲ. ಗೂಗ್ಲ್‌ನವರದೇ ಆಂಡ್ರಾಯಿಡ್ ಇದರಲ್ಲಿರುವುದು. ಇತ್ತೀಚೆಗಿನ ಆವೃತ್ತಿಯಾದ ಕಿಟ್‌ಕ್ಯಾಟ್ (4.4.2) ಇದರಲ್ಲಿರುವುದು. ಬಹುಶಃ ಇದರ ಕೆಲಸ ಮಾಡುವ ವೇಗದಲ್ಲಿ ಏನೂ ಕೊರತೆ ಕಾಣಿಸದಿರುವುದು ಇದೇ ಕಾರಣದಿಂದಿರಬಹುದು.

ಆಡಿಯೊ ಗುಣಮಟ್ಟ ಹೇಳಿಕೊಳ್ಳುವಂತೇನೂ ಇಲ್ಲ. ಹೈಫೈ ಆಡಿಯೊ ಖಂಡಿತ ಅಲ್ಲ. ಬ್ಯಾಟರಿ ಶಕ್ತಿಶಾಲಿಯಾಗಿದೆ. ಎರಡು ಸಿಮ್ ಹಾಕಬಹುದು. ಆದರೆ ಎರಡೂ ಮೈಕ್ರೋಸಿಮ್ ಆಗಿರಬೇಕು. 4ಜಿ ಸಂಪರ್ಕ ಸೌಲಭ್ಯ ಹಾಗೂ ಎನ್‌ಎಫ್‌ಸಿ ಇಲ್ಲ ಎನ್ನುವುದೂ ಕೊರತೆ ಎನಿಸಬಹುದು. ಆದರೆ ಇವುಗಳ ಉಪಯೋಗ ಸದ್ಯಕ್ಕೆ ಭಾರತದಲ್ಲಿ ಅಷ್ಟಕ್ಕಷ್ಟೆ.

ಇದರ ಎರಡು ಪ್ರಮುಖ ಕೊರತೆಗಳೆಂದರೆ ಎದುರುಗಡೆಯ (ಎರಡನೆಯ) ಇನ್ನೊಂದು ಕ್ಯಾಮೆರಾ ಮತ್ತು ಕ್ಯಾಮೆರಾಗೆ ಫ್ಲಾಶ್ ಇಲ್ಲ ಎನ್ನುವುದು. ಇರುವ ಕ್ಯಾಮೆರಾದ ಗುಣಮಟ್ಟವೂ ಹೇಳಿಕೊಳ್ಳುವಂತೇನೂ ಇಲ್ಲ.

ಅಂದರೆ ಉತ್ತಮ ಆಡಿಯೊ ಮತ್ಯು ಉತ್ತಮ ಕ್ಯಾಮೆರಾಗಳು ಬೇಕಿದ್ದಲ್ಲಿ ಈ ಫೋನ್ ನಿಮಗಲ್ಲ. ಇದೇ ಅಂಕಣದಲ್ಲಿ ಮೋಟೊ-ಜಿ ಫೋನ್ ಬಗ್ಗೆ ಬರೆದ ಈ ಮಾತುಗಳು ಈ ಫೋನಿಗೂ ಅನ್ವಯವಾಗುತ್ತವೆ - ಇದು ಖಂಡಿತವಾಗಿಯೂ ಒಂದು ಉತ್ತಮ ಬ್ಯುಸಿನೆಸ್ ಬಳಕೆಯ ಫೋನ್ ಹೌದು. ಎಲ್ಲ ಆಂಡ್ರಾಯಿಡ್‌ಗಳಂತೆ ಅಂತರಜಾಲ ವೀಕ್ಷಣೆ, ಇಮೇಲ್, ವಾಟ್ಸ್‌ಆಪ್, ಟ್ವಿಟ್ಟರ್, ಫೇಸ್‌ಬುಕ್, ಉಪಯುಕ್ತ ಆಪ್‌ಗಳು –ಎಲ್ಲ ಬಳಸಹುದು. ಈ ಬೆಲೆಯ ವ್ಯಾಪ್ತಿಯಲ್ಲಿ ಇದಕ್ಕೆ ಸರಿಗಟ್ಟುವ ಗುಣವೈಶಿಷ್ಟ್ಯಗಳನ್ನು ನೀಡುವ ದೊಡ್ಡ ಬ್ರ್ಯಾಂಡಿನ ಫೋನ್ ಯಾವುದೂ ಇಲ್ಲ. ಕಡಿಮೆ ಬೆಲೆಯ ಮಾರುಕಟ್ಟೆಯಲ್ಲಿ ಇದು ನಿಜಕ್ಕೂ ಉತ್ತಮ ಖರೀದಿ ಎನ್ನಬಹುದು.

ಈ ಫೋನಿನಲ್ಲಿ ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಕನ್ನಡದ ಕೀಲಿಮಣೆ ಹಾಕಿಕೊಂಡರೆ ಎಲ್ಲ ಕಡೆ ಕನ್ನಡದ ಬಳಕೆ ಮಾಡಬಹುದು.

ವಾರದ ಆಪ್ (app)
ಎಂಪಿ3 ಕಟ್ಟರ್ ಮತ್ತು ರಿಂಗ್‌ಟೋನ್ ಮೇಕರ್ ನಿಮ್ಮ ಫೋನಿನಲ್ಲಿರುವ ರಿಂಗ್‌ಟೋನ್‌ಗಳು ನಿಮಗಿಷ್ಟವಾಗಿಲ್ಲವೇ? ನಿಮ್ಮ ಫೋನಿನಲ್ಲೇ ಹಲವು ಎಂಪಿ3

ಹಾಡುಗಳ ಸಂಗ್ರಹ ಇದೆ ತಾನೆ? ಅದರಲ್ಲೇ ಒಂದು ಹಾಡಿನ ಭಾಗವೊಂದನ್ನು ರಿಂಗ್‌ಟೋನ್ ಮಾಡಿದರೆ ಚೆನ್ನಾಗಿರುತ್ತದಲ್ಲವೇ? ಇದಕ್ಕಾಗಿ ಹಲವು ಕಿರುತಂತ್ರಾಂಶಗಳು (ಆಪ್) ಲಭ್ಯವಿವೆ.

ಅಂತಹ ಒಂದು ಕಿರುತಂತ್ರಾಂಶ ಎಂಪಿ3 ಕಟ್ಟರ್ ಮತ್ತು ರಿಂಗ್‌ಟೋನ್ ಮೇಕರ್ (MP3 Cutter and Ringtone Maker) . ಇದು ನೀವು ಈಗಾಗಲೇ ಊಹಿಸಿದಂತೆ ಆಂಡ್ರಾಯಿಡ್‌ನಲ್ಲಿ ಕೆಲಸ ಮಾಡುತ್ತದೆ. ಇದನ್ನು ಬಳಸಿ ನಿಮ್ಮ ಫೋನಿನಲ್ಲಿ ಇರುವ ಎಂಪಿ3 ಹಾಡೊಂದನ್ನು ನಿಮಗೆ ಬೇಕಾದಲ್ಲಿ ಕತ್ತರಿಸಿ ರಿಂಗ್‌ಟೋನ್ ಮಾಡಬಹುದು. ನಿಮ್ಮ ಫೋನನ್ನು ಬಳಸಿ ಧ್ವನಿಯೊಂದನ್ನು ರೆಕಾರ್ಡ್ ಮಾಡಿಕೊಂಡು ಅದನ್ನೇ ರಿಂಗ್‌ಟೋನ್ ಆಗಿ ಆಯ್ಕೆ ಮಾಡಿಕೊಳ್ಳುವ ಸವಲತ್ತೂ ಇದೆ.

ಗ್ಯಾಜೆಟ್ ಸುದ್ದಿ
ಏರ್‌ಸೆಲ್ ಬಳಸುವವರಿಗೆ ಉಚಿತ ವಿಕಿಪೀಡಿಯ

ಮೊಬೈಲ್ ಫೋನ್ ಸೇವೆ ನೀಡುವ ಏರ್‌ಸೆಲ್ ಕಂಪೆನಿ ಮತ್ತು ವಿಕಿಪೀಡಿಯವನ್ನು ನಡೆಸುವ ವಿಕಿಮೀಡಿಯ ಫೌಂಡೇಶನ್ ಜೊತೆಗೂಡಿದ್ದಾರೆ. ಏರ್‌ಸೆಲ್ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವಿಕಿಪೀಡಿಯವನ್ನು ಬಳಸಿದರೆ ಅವರು ಅಂತರಜಾಲ ಬಳಕೆಗೆ ಹಣ ನೀಡಬೇಕಾಗಿರುವುದಿಲ್ಲ. ಇದು ವಿಕಿಪೀಡಿಯ ಬಳಸುವವರಿಗೆ ಒಳ್ಳೆಯ ಸುದ್ದಿ. ವಿಕಿಪೀಡಿಯ ಝೀರೊ ಎಂಬುದು ಆಫ್ರಿಕದಲ್ಲಿ ಪ್ರಾರಂಭವಾದ ಯೋಜನೆ.

ಇದರ ಪ್ರಕಾರ ಮೊಬೈಲ್ ಸೇವೆ ನೀಡುವ ಕಂಪೆನಿ ತಮ್ಮ ಗ್ರಾಹಕರು ವಿಕಿಪೀಡಿಯ ವೀಕ್ಷಿಸಿದರೆ ಮಾಹಿತಿ ಪ್ರವಾಹಕ್ಕೆ (ಡಾಟಾ) ಹಣ ನೀಡಬೇಕಾಗಿರುವುದಿಲ್ಲ. ಭಾರತದಲ್ಲಿ ಈ ವಿಕಿಪೀಡಿಯ ಝೀರೊ ಯೋಜನೆಯಲ್ಲಿ ಸದ್ಯಕ್ಕೆ ಏರ್‌ಸೆಲ್ ಮಾತ್ರ ಭಾಗಿಯಾಗಿದೆ. ಇಂಗ್ಲಿಷ್ ಮಾತ್ರವಲ್ಲದೆ ಇತರೆ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ ಬಳಸುವವರಿಗೆ ಇದು ಒಳ್ಳೆಯ ಸುದ್ದಿ.

ಗ್ಯಾಜೆಟ್ ತರ್ಲೆ
ಪ್ರತಿಯೊಬ್ಬ ಅಪಯಶಸ್ವಿ ವ್ಯಕ್ತಿಯ ಹಿಂದೆ ಫೇಸ್‌ಬುಕ್, ಟ್ವಿಟ್ಟರ್ ಮತ್ತು ವಾಟ್ಸ್‌ಆಪ್‌ಗಳಿರುತ್ತವೆ. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಂದು ಅಳಿಸಲ್ಪಟ್ಟ ಫೇಸ್‌ಬುಕ್ ಖಾತೆ ಇರುತ್ತದೆ.

ಗ್ಯಾಜೆಟ್ ಸಲಹೆ
ಬಾಲಕೃಷ್ಣ ವಿ ಉಪಾಧ್ಯ ಅವರ ಪ್ರಶ್ನೆ: ನಾನು ಸ್ಯಾಮಸಂಗ್ ಆಂಡ್ರಾಯಿಡ್ ಮೊಬೈಲ್ ಉಪಯೋಗಿಸುತ್ತಿದ್ದೇನೆ. ಅದರಲ್ಲಿ ಕನ್ನಡ ಬರೆಯುವುದು ನನಗೆ ತುಂಬಾ ಅವಶ್ಯವಾಗಿತ್ತು. ನೀವು ದಿನಾಂಕ 19-06-2014 ರ ಸಂಚಿಕೆಯಲ್ಲಿ ನೀಡಿರುವ ಮಾಹಿತಿ ತುಂಬಾ ಉಪಯುಕ್ತವಾಗಿತ್ತು. ಅದೇ ರೀತಿ ಈಗ ನಾನು ಕನ್ನಡದಲ್ಲಿ ಬರೆಯುವುದನ್ನು ಕಲಿತಿದ್ದೇನೆ.

ಆದರೆ ಈಗ ನನಗೆ ಎಂಎಸ್ ಆಫೀಸಿನ ಅವಶ್ಯಕತೆ ಇದೆ. ಅದನ್ನು ನಾನು ನನ್ನ ಆಂಡ್ರಾಯಿಡ್‌ನಲ್ಲಿ ಉಪಯೋಗಿಸಬಹುದಾ ? ಉಪಯೋಗಿಸಬಹುದಾದಲ್ಲಿ ಅದನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು ? ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು?

ಉ: ನೀವು ಮಾರ್ಚ್ 13, 2014 ದಿನಾಂಕದ ಗ್ಯಾಜೆಟ್‌ಲೋಕ ಅಂಕಣದಲ್ಲಿ ಪರಿಚಯಿಸಿದ ಕಿಂಗ್‌ಸಾಫ್ಟ್ ಆಫೀಸ್ (Kingsoft Office) ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.