ಎರಡನೆಯ ವಿಶ್ವಯುದ್ಧದಲ್ಲಿ ಅಮೆರಿಕವು ಜಪಾನಿನ ಮೇಲೆ ಅಣುಬಾಂಬ್ ಪ್ರಯೋಗಿಸಿತು. ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೆ ಜಪಾನೀಯರು ಇನ್ನಿಲ್ಲವಾದರು, ಜಪಾನ್ ಸೋಲೊಪ್ಪಿ ಯುದ್ಧವು ಕೊನೆಗೊಂಡಿತು. ಅಮೆರಿಕವು ಜಗತ್ತಿನ ದೊಡ್ಡಣ್ಣನಂತೆ ಬಿಂಬಿಸಿಕೊಳ್ಳುವಲ್ಲಿ ಆ ಅಣುಬಾಂಬ್ ತನ್ನದೇ ಕೊಡುಗೆ ನೀಡಿತು. ಹೀಗೆ, ಒಂದು ತಂತ್ರಜ್ಞಾನವು ಜಗತ್ತಿನ ರಾಜಕಾರಣದ 100 ವರ್ಷಗಳ ದಿಕ್ಕನ್ನು ಪ್ರಭಾವಿಸಿದ್ದನ್ನು ನಾವು ಕಂಡೆವು.

ಈಗ ಆರ್ಟಿಫಿಶಿಯಲ್ ಇಂಟೆಲಿಜನ್ಸ್ (ಎ.ಐ) ಅನ್ನುವ, ಕೃತಕವಾಗಿ ಕಟ್ಟಲಾದ ಜಾಣ್ಮೆಯ ತಂತ್ರಜ್ಞಾನ ಮತ್ತು ಅದು ದಿನದಿಂದ ದಿನಕ್ಕೆ ಪಡೆದುಕೊಳ್ಳುತ್ತಿರುವ ಶಕ್ತಿಯನ್ನು ಗಮನಿಸಿದಾಗ, ಈ ಶತಮಾನದ ಜಾಗತಿಕ ರಾಜಕಾರಣದ ಸ್ವರೂಪವನ್ನು ಪ್ರಭಾವಿಸುವ ಅತಿ ದೊಡ್ಡ ಶಕ್ತಿಯಾಗಿ ಇದು ಹೊರಹೊಮ್ಮಲಿದೆ ಅನ್ನುವ ಬಗ್ಗೆ ಈಗ ಚಿಂತಕರಲ್ಲಿ, ನೀತಿ ನಿರೂಪಕರಲ್ಲಿ ಒಮ್ಮತ ಮೂಡುತ್ತಿದೆ.

ಒಂದು ಸಣ್ಣ ಐ.ಸಿ ಚಿಪ್ವೊಂದರಲ್ಲಿ ಕೂರಿಸಬಹುದಾದ ಟ್ರಾನ್ಸಿಸ್ಟರುಗಳ ಎಣಿಕೆ ಪ್ರತಿ 2 ವರ್ಷಕ್ಕೊಮ್ಮೆ ದುಪ್ಪಟ್ಟಾಗುತ್ತದೆ ಎಂದು ಇಂಟೆಲ್ ಸಂಸ್ಥೆಯವರಾಗಿದ್ದ ಮೂರ್ 1965ರಲ್ಲಿ ಭವಿಷ್ಯ ನುಡಿದರು. ಟ್ರಾನ್ಸಿಸ್ಟರುಗಳ ಎಣಿಕೆ ಈ ಪ್ರಮಾಣದಲ್ಲಿ ಹೆಚ್ಚಿದಂತೆ ಕಂಪ್ಯೂಟರುಗಳ ವಿಶ್ಲೇಷಣೆಯ ಶಕ್ತಿಯೂ ವರ್ಷದಿಂದ ವರ್ಷಕ್ಕೆ ಹೆಚ್ಚಿತು. ಕಂಪ್ಯೂಟರ್ ಬಲದ ಮೇಲೆ ನಡೆಯುವ ಇಂದಿನ ಆಧುನಿಕ ಪ್ರಪಂಚ ಸಾಧ್ಯವಾಗಿದ್ದು ಸೆಮಿಕಂಡಕ್ಟರ್ ವಲಯದಲ್ಲಿ ಮನುಕುಲ ಸಾಧಿಸಿದ ಪ್ರಗತಿಯಿಂದ ಮತ್ತು ಸೆಮಿಕಂಡಕ್ಟರ್ ವಲಯದಲ್ಲಿ ಕಂಪ್ಯೂಟರುಗಳು ಭವಿಷ್ಯದಲ್ಲಿ ಪಡೆಯಬಹುದಾದ ವಿಶ್ಲೇಷಣಾ ಶಕ್ತಿಯ ಬಗ್ಗೆ ದಾರಿದೀಪದಂತೆ ಕೆಲಸ ಮಾಡಿದ್ದು ಮೂರ್ ಅವರ ಇದೇ ನಿಯಮ.

ಕಂಪ್ಯೂಟರಿನ ವಿಶ್ಲೇಷಣೆಯ ಶಕ್ತಿಯಲ್ಲಿ ವರ್ಷದಿಂದ ವರ್ಷಕ್ಕೆ ಸಾಧ್ಯವಾದ ದಾಪುಗಾಲಿನ ಪ್ರಗತಿಯು ನಮ್ಮೆದುರು ತಂದಿರುವ ಹೊಸ ಸಾಧ್ಯತೆಯೇ ಎ.ಐ ತಂತ್ರಜ್ಞಾನ ಎನ್ನಬಹುದು. ಇದು ಎಣಿಕೆಯಿಲ್ಲದಷ್ಟು ಹೊಸ ಸಾಧ್ಯತೆಗಳನ್ನು, ಹೊಸ ಬಿಕ್ಕಟ್ಟುಗಳನ್ನು ಮನುಕುಲದ ಮುಂದೆ ಒಮ್ಮೆಲೇ ತಂದು ನಿಲ್ಲಿಸುತ್ತಿದೆ.

30 ವರ್ಷಗಳಲ್ಲಿ ಬದುಕಿನ ಎಲ್ಲ ಅಂಗಗಳು ಕಂಪ್ಯೂಟರ್ ಬಳಕೆಯ ವ್ಯಾಪ್ತಿಗೆ ಸೇರಿದಂತೆ, ಮನುಕುಲ ಕಂಡುಕೊಂಡಿರುವ ಜ್ಞಾನದ ಎಲ್ಲ ಸಾಧ್ಯತೆಗಳು ಡಿಜಿಟಲ್ ರೂಪದಲ್ಲಿ ದಾಖಲಾಗುತ್ತ ಬಂದಿವೆ. ಇಂತಹ ಅಗಾಧ ಮಾಹಿತಿಯ ಕಣಜವನ್ನು ಕಂಪ್ಯೂಟರ್ ವ್ಯವಸ್ಥೆಯೊಂದಕ್ಕೆ ತರಬೇತಿ ನೀಡಲು ಬಳಸಿದರೆ, ಆಗ ಕೋಟಿಗಟ್ಟಲೆ ಜನರ ನಡೆ-ನುಡಿ, ಜ್ಞಾನದ ತಿರುಳನ್ನೆಲ್ಲ ಅರಗಿಸಿಕೊಂಡಿರುವ ಜಾಣ ಕಂಪ್ಯೂಟರ್ ಒಂದು ನಮ್ಮೆದುರು ನಿಲ್ಲುತ್ತದೆ. ಇದನ್ನೇ ಎ.ಐ ಅನ್ನಬಹುದು.

ಎರಡು ವರ್ಷದ ಹಿಂದೆ ‘ಚಾಟ್ ಜಿಪಿಟಿ’ ಅನ್ನುವ ಹೆಸರಿನಲ್ಲಿ ಓಪನ್ ಎ.ಐ ಸಂಸ್ಥೆ ಇಂತಹದ್ದೊಂದು ಎ.ಐ ಮಾದರಿಯನ್ನು ಜನಬಳಕೆಗೆ ತಂದು ನಿಲ್ಲಿಸಿದಾಗ, ಹಲವು ಕ್ಷೇತ್ರಗಳಲ್ಲಿ ಅದಕ್ಕಿದ್ದ ಶಕ್ತಿಯನ್ನು ಕಂಡು ಹಲವರು ನಿಬ್ಬೆರಗಾದರೆ, ಇನ್ನು ಹಲವು ಕ್ಷೇತ್ರಗಳಲ್ಲಿ ಅದಕ್ಕಿದ್ದ ಕೊರತೆಯನ್ನು ಕಂಡು ಹಲವರು ಆಡಿಕೊಂಡರು. ಆದರೆ ಅಲ್ಲಿಂದ ಎರಡೇ ವರ್ಷಗಳಲ್ಲಿ ಇಡೀ ಎ.ಐ ವಲಯದಲ್ಲಿನ ಕೆಲಸಗಳ ವೇಗ ಮತ್ತು ಹೊರ ಬರುತ್ತಿರುವ ತಾಂತ್ರಿಕ ಸಾಧ್ಯತೆಗಳನ್ನು ಗಮನಿಸಿದಾಗ, 18ನೇ ಶತಮಾನದಲ್ಲಿ ಔದ್ಯಮಿಕ ಕ್ರಾಂತಿ ಹೇಗೆ ಜಗತ್ತನ್ನು ಬದಲಾಯಿಸಿತೋ ಹಾಗೆಯೇ, ಇನ್ನೂ ಕಡಿಮೆ ಅವಧಿಯಲ್ಲಿ ಜಗತ್ತನ್ನು ಬದಲಾಯಿಸುವ ಶಕ್ತಿ ಈ ತಂತ್ರಜ್ಞಾನಕ್ಕೆ ಇರಲಿದೆ ಅನ್ನುವುದು ಈಗ ಎಲ್ಲರಿಗೂ ಮನವರಿಕೆಯಾಗುತ್ತಿದೆ.

ಇಂದು ಯಾವೆಲ್ಲ ಬಗೆಯ ಕೆಲಸಗಳು ಹೆಚ್ಚು ಬುದ್ಧಿಶಕ್ತಿಯನ್ನು ಬೇಡುವುದಿಲ್ಲವೋ ಅವುಗಳನ್ನು ಎ.ಐ ತಂತ್ರಜ್ಞಾನ ಸುಲಭದಲ್ಲಿ ಮಾಡಬಲ್ಲದು. ಹಲವು ಕಾರ್ಖಾನೆಗಳಲ್ಲಿನ ಕೆಲಸ, ಗ್ರಾಹಕ ಸೇವೆ, ಡೇಟಾ ಎಂಟ್ರಿ, ಕಲೆ, ಬರವಣಿಗೆ, ಕಾನೂನು ಸೇವೆ, ಆರೋಗ್ಯ ಸೇವೆಯಂತಹ ಕ್ಷೇತ್ರಗಳಲ್ಲಿನ ಕೆಲ ಬಗೆಯ ಕೆಲಸಗಳನ್ನು ಎ.ಐ ಕಳೆಯಲಿದೆ. ಆದರೆ ಈ ಎಲ್ಲ ಕ್ಷೇತ್ರಗಳಲ್ಲೂ ಹೊಸ ಮಾದರಿಯ ಕೆಲಸಗಳನ್ನೂ ಎ.ಐ ಸೃಷ್ಟಿಸಲಿದೆ. ಈಗಾಗಲೇ ದೊಡ್ಡ ತಂತ್ರಜ್ಞಾನ ಸಂಸ್ಥೆಗಳಿಂದ ಹಿಡಿದು ಸಾವಿರಾರು ಸ್ಟಾರ್ಟ್ಅಪ್ ಸಂಸ್ಥೆಗಳು ಎ.ಐ ಬಳಸಿ ಆರೋಗ್ಯ, ಕೃಷಿ, ಪರಿಸರ ಸಂರಕ್ಷಣೆ, ಶಿಕ್ಷಣ, ಹೂಡಿಕೆ, ಸಾರಿಗೆಯಂತಹ ಕ್ಷೇತ್ರಗಳಲ್ಲಿನ ಗಂಭೀರವಾದ ಹಲವಾರು ತೊಂದರೆಗಳನ್ನು ಬಗೆಹರಿಸುವಂತಹ ಪರಿಹಾರಗಳನ್ನು ರೂಪಿಸುವತ್ತ ತೊಡಗಿಕೊಂಡಿವೆ.

20 ವರ್ಷಗಳ ಹಿಂದೆ ಜಗತ್ತಿನಲ್ಲಿ ಇಂದಿರುವ 50 ಪ್ರತಿಶತಕ್ಕೂ ಹೆಚ್ಚಿನ ಬಗೆಯ ಕೆಲಸಗಳು ಇರಲಿಲ್ಲ. ತಂತ್ರಜ್ಞಾನವು ಆ ಕೆಲಸಗಳನ್ನು ಸೃಷ್ಟಿಸಿದ ರೀತಿಯಲ್ಲೇ ಎ.ಐ ಕೂಡ ಹಲವಾರು ಬಗೆಯ ಹೊಸ ಉದ್ಯೋಗಗಳನ್ನು ಹುಟ್ಟುಹಾಕಲಿದೆ. ಕಳೆದು, ಕೂಡುವ ಈ ಲೆಕ್ಕಾಚಾರಕ್ಕೆ ಸಜ್ಜಾಗುವಂತೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಮೂಲಭೂತವಾದ ಬದಲಾವಣೆ ಆಗಬೇಕಿದೆ. ಬಾಯಿಪಾಠ ಕೇಂದ್ರಿತ ಇಂದಿನ ಕಲಿಕಾ ವ್ಯವಸ್ಥೆಯು ಎ.ಐ- ಉತ್ತರದ ಕಾಲಕ್ಕೆ ನಮ್ಮ ಮಕ್ಕಳನ್ನು ಸಜ್ಜಾಗಿಸುವುದಿಲ್ಲ. ಎ.ಐ ಕಟ್ಟುವ ಹೊಸ ಆರ್ಥಿಕತೆಗೆ ಸಜ್ಜಾಗುವುದು ಈ ಚರ್ಚೆಯ ಒಂದು ಆಯಾಮ ಅನ್ನೋಣ.

ಇನ್ನೊಂದು ಆಯಾಮವೆಂದರೆ, ಎ.ಐ ತಂತ್ರಜ್ಞಾನವು ಮಿಲಿಟರಿ ಸಾಮರ್ಥ್ಯ, ಗೂಢಚಾರಿಕೆ, ಮಾಹಿತಿ ಯುದ್ಧ, ಕಣ್ಗಾವಲು ತರಹದ ಭದ್ರತೆಯ ವಿಚಾರದಲ್ಲಿ ಪಡೆದುಕೊಳ್ಳುತ್ತಿರುವ ಶಕ್ತಿಯ ಕುರಿತಾದದ್ದು. ಇದು ಇಂದು ಹಲವು ದೇಶಗಳ ನಿದ್ದೆಗೆಡಿಸುತ್ತಿದೆ. ಉದಾಹರಣೆಗೆ, ಉಕ್ರೇನಿನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಬಾಂಬು ಹೊತ್ತ ಡ್ರೋನ್ಗಳು ಎ.ಐ ತಂತ್ರಜ್ಞಾನವನ್ನು ಬಳಸಿಕೊಂಡು, ಯಾರ ನೆರವೂ ಇಲ್ಲದೆ ಶತ್ರುವಿನ ಮೇಲೆ ಎರಗಿ, ಯಶಸ್ವಿಯಾಗಿ ದಾಳಿ ನಡೆಸಿ ಸ್ವಸ್ಥಾನಕ್ಕೆ ಮರಳುತ್ತಿವೆ!

ಇನ್ನೊಂದೆಡೆ, ಅಮೆರಿಕದ ಚುನಾವಣೆಯಲ್ಲಿ ಎ.ಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಸುಳ್ಳು ಸುದ್ದಿಗಳು ಹಿಂದಿನ ನೂರು ವರ್ಷಗಳಲ್ಲೇ ಅತ್ಯಂತ ಧ್ರುವೀಕೃತವಾದ ಚುನಾವಣೆಗೆ ಕೊಡುಗೆ ನೀಡಿದವು. ಇವು, ಪ್ರಜಾಪ್ರಭುತ್ವವನ್ನು ಪಾಲಿಸುವ ದೇಶಗಳ ಚುನಾವಣಾ ವ್ಯವಸ್ಥೆಯನ್ನು ಹಾಳುಗೆಡಹುವ, ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡಿಸುವ ಎಲ್ಲ ಶಕ್ತಿಯನ್ನೂ ಹೊಂದಿವೆ. ಶತ್ರುದೇಶವೊಂದರ ಮೇಲೆ ದೊಡ್ಡ ಪ್ರಮಾಣದ ಮಾಹಿತಿ ಯುದ್ಧ ಕೈಗೊಳ್ಳಲು ಆ ದೇಶದ ಜನರ ನಡೆ-ನುಡಿ ಅರಿತುಕೊಳ್ಳುವುದು ಮುಖ್ಯವಾಗುತ್ತದೆ ಮತ್ತು ಅಂತಹ ಮಾಹಿತಿಯನ್ನೇ ಬಸಿದು ಕಟ್ಟಲಾಗಿರುವ ಎ.ಐ ತಂತ್ರಜ್ಞಾನಕ್ಕೆ ಅದು ಚಿಟಿಕೆ ಹೊಡೆದಷ್ಟು ಸಲೀಸು. ಈ ಕಾರಣದಿಂದಲೇ ಎ.ಐ ಇಂದು ಅಮೆರಿಕ ಮತ್ತು ಚೀನಾದ ನಡುವಿನ ಹೊಸ ರಣಾಂಗಣವಾಗುತ್ತಿದೆ.

ಎ.ಐ ಕೆಲಸ ಮಾಡಲು ಬೇಕಿರುವ ಅಗಾಧ ಮಾಹಿತಿಯನ್ನು ವಿಶ್ಲೇಷಿಸುವ ಸಾಮರ್ಥ್ಯವುಳ್ಳ ಐ.ಸಿ ಚಿಪ್ ತಯಾರಿಕೆಯ ಎಲ್ಲ ಹಂತಗಳನ್ನು ನಿಯಂತ್ರಿಸಲು ಅಮೆರಿಕ ಮತ್ತು ಚೀನಾ ನಡುವೆ ಇಂದು ತೀವ್ರ ಪೈಪೋಟಿಯಿದೆ. ಇಂತಹ ಚಿಪ್ ತಯಾರಿಕೆಯ ಒಂದು ಮುಖ್ಯ ನೆಲೆಯಾದ ತೈವಾನ್ ಅನ್ನು ತನ್ನ ವಶಕ್ಕೆ ಪಡೆಯಬೇಕು ಅನ್ನುವ ಚೀನಾದ ಹಟದ ಹಿಂದಿರುವುದು ಇದೇ ಪೈಪೋಟಿ.

ಜಾಗತಿಕವಾಗಿ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಬಹುತೇಕ ದೇಶಗಳು ಬಂದ ರೀತಿಯಲ್ಲೇ ಎ.ಐ ತಂತ್ರಜ್ಞಾನವನ್ನು ನಿಯಂತ್ರಣಕ್ಕೆ ಒಳಪಡಿಸಬೇಕು ಅನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಈ ತಂತ್ರಜ್ಞಾನದ ಬೆಳವಣಿಗೆ ಅತ್ಯಂತ ವಿಕೇಂದ್ರೀಕೃತವಾದ ರೂಪದಲ್ಲಿ ನಡೆಯುತ್ತಿರುವುದರಿಂದ ಆ ರೀತಿಯಲ್ಲಿ ನಿಯಂತ್ರಿಸುವುದು ಸಾಧ್ಯವಿಲ್ಲ.

ಕಂಪ್ಯೂಟಿಂಗ್ ಶಕ್ತಿ ಹೆಚ್ಚಿದಂತೆ, ಎ.ಐಗೆ ತರಬೇತಿ ನೀಡುವ ಮಾಹಿತಿಯ ಮಾದರಿಗಳು ಹೆಚ್ಚೆಚ್ಚು ಗುಣಮಟ್ಟ ಹೊಂದುತ್ತಿದ್ದಂತೆ, ಎ.ಐ ಬಳಸಿ ಮನುಕುಲದ ಪರವಾದ ಹತ್ತಾರು ಹೊಸ ಆವಿಷ್ಕಾರಗಳು ಹೊರಹೊಮ್ಮಿ, ಈ ಶತಮಾನದ ಹಲವು ತೊಂದರೆಗಳನ್ನು ಬಗೆಹರಿಸುವ ದಿನಗಳು ನಮ್ಮೆದುರು ಬರಬಹುದು. ಇದೇ ಹೊತ್ತಿನಲ್ಲಿ, ಈ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಮಾಹಿತಿ ಯುದ್ಧ, ///////////ಹೊಸ ಸಾಂಕ್ರಾಮಿಕ ಕಾಯಿಲೆಗಳ ಸೃಷ್ಟಿ, ಈ ತಂತ್ರಜ್ಞಾನದ ಮೇಲೆ ಹಿಡಿತ ಹೊಂದಿದ ದೇಶಗಳು ಉಳಿದ ದೇಶಗಳ ಮೇಲೆ ದಬ್ಬಾಳಿಕೆ ಮಾಡುವ ಬೆಳವಣಿಗೆಗಳೂ ನಡೆಯಬಹುದು. ಇದನ್ನು ಸರಿಯಾದ ದಿಕ್ಕಿನಲ್ಲಿ ಬಳಸಲ್ಪಡುವ ತಂತ್ರಜ್ಞಾನವನ್ನಾಗಿಸುವಲ್ಲಿ ಬೇಕಿರುವ ಜಾಗತಿಕ ಸಹಕಾರವನ್ನು ರೂಪಿಸುವ ನಾಯಕತ್ವವನ್ನು ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಡುವರೇ ಅನ್ನುವುದು ಈ ಹೊತ್ತಿನ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.