ವಿಶ್ವ ಸುದ್ದಿ ದಿನ: ಸುಳ್ಳಿನ ಸಾಗರ ಮತ್ತು ಸತ್ಯದ ಹಾಯಿದೋಣಿ
-ಕ್ಯಾತಿ ಇಂಗ್ಲಿಷ್
Published : 28 ಸೆಪ್ಟೆಂಬರ್ 2024, 2:31 IST
Last Updated : 28 ಸೆಪ್ಟೆಂಬರ್ 2024, 2:31 IST
ಫಾಲೋ ಮಾಡಿ
Comments
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸೃಷ್ಟಿಸುತ್ತಿರುವ ಡಿಜಿಟಲ್ ಮಾಹಿತಿಯ ಈ ಯುಗದಲ್ಲಿ ಸುಳ್ಳುಗಳೇ ಸತ್ಯವಾಗುತ್ತಿವೆ. ದ್ವೇಷ ಕಾರುವ, ದುರುದ್ದೇಶಪೂರಿತ ತಪ್ಪು ಮಾಹಿತಿಯನ್ನು ಹರಡುವವರೂ ಇಲ್ಲಿದ್ದಾರೆ. ಹೀಗಿರುವಾಗ, ನಿಜವಾದ ಸುದ್ದಿಗಳು ಮತ್ತು ವದಂತಿಗಳ ನಡುವೆ ವ್ಯತ್ಯಾಸ ಗುರುತಿಸುವುದು ಜನರ ಮುಂದಿರುವ ಬಹುದೊಡ್ಡ ಸವಾಲು. ಇಂತಹ ಸನ್ನಿವೇಶದಲ್ಲಿ ವಾಸ್ತವ ಸಂಗತಿಗಳನ್ನು ಕೂಲಂಕಷವಾಗಿ ದೃಢೀಕರಿಸಿ ಸತ್ಯವಾದ ಮಾಹಿತಿಯನ್ನು ಜನರ ಮುಂದಿಡುವ ಪತ್ರಕರ್ತರ ಜವಾಬ್ದಾರಿ ಈಗ ಎರಡು ಪಟ್ಟು ಹೆಚ್ಚಿದೆ.