ವಿಶ್ವ ಸುದ್ದಿ ದಿನ: ‘ಅಲ್ಲಿ’ ನಿಂತು, ‘ಇಲ್ಲಿ’ಯ ಸುದ್ದಿ ಹೆಕ್ಕಿ
ದೇಶದಿಂದ ಹೊರದೂಡಲಾದ ಪತ್ರಿಕೋದ್ಯಮದ ಸವಾಲುಗಳು
–ಕಾರ್ಲೋಸ್ ಎಫ್.ಚಾಮರೊಮ್
Published : 28 ಸೆಪ್ಟೆಂಬರ್ 2024, 2:30 IST
Last Updated : 28 ಸೆಪ್ಟೆಂಬರ್ 2024, 2:30 IST
ಫಾಲೋ ಮಾಡಿ
Comments
ಕ್ಯೂಬಾ ಮತ್ತು ವೆನೆಜುವೆಲಾದಲ್ಲಿ ಇತಿಹಾಸ ಪುನರಾವರ್ತನೆಯಾಗುತ್ತಿದೆ. ದೇಶದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿರುವ ಸ್ವತಂತ್ರ ಪತ್ರಿಕೋದ್ಯಮವು, ಲ್ಯಾಟಿನ್ ಅಮೆರಿಕದಲ್ಲಿ ಮಾಧ್ಯಮಗಳಿಗೆ ಬೆದರಿಕೆ ಒಡ್ಡುವ ನಿರಂಕುಶ ಪ್ರಭುತ್ವಗಳ ನಡವಳಿಕೆಯನ್ನು, ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಅತ್ಯುತ್ತಮ ಪತ್ರಿಕೋದ್ಯಮ ಚೇತರಿಸಿಕೊಳ್ಳುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆಯೂ ಹೌದು. ಕಾನೂನು ಸುವ್ಯವಸ್ಥೆ ಕುಸಿದಿದಿರುವ, ನಾಗರಿಕ ಸಮಾಜ ದಿಗ್ಬಂಧನ ಎದುರಿಸುತ್ತಿರುವ ಅಥವಾ ಅಳಿವಿನ ಅಂಚಿನಲ್ಲಿರುವ ಕಡೆಗಳಲ್ಲಿ ಸ್ವತಂತ್ರ ಮಾಧ್ಯಮಗಳ ರಕ್ಷಣೆಗೆ ಇರುವ ಏಕೈಕ ಅಸ್ತ್ರ ಎಂದರೆ ಅವುಗಳ ವಿಶ್ವಾಸಾರ್ಹತೆ.