ಜಮ್ಮು-–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಭಾರತೀಯ ಸಂವಿಧಾನದ ೩೭೦ನೇ ವಿಧಿ ಬಗ್ಗೆ ಮುಕ್ತ ಚರ್ಚೆ ನಡೆಯಬೇಕು ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದನಿಯೆತ್ತಿದೆ. ೩೭೦ನೇ ವಿಧಿ ಪ್ರಕಾರ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂವಹನದಂತಹ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ ಕೇಂದ್ರ ಸರ್ಕಾರಕ್ಕೆ ಈ ರಾಜ್ಯದಲ್ಲಿ ಕ್ರಮ ಕೈಗೊಳ್ಳಲು ಅಧಿಕಾರ ಇದೆ. ಇವುಗಳನ್ನು ಹೊರತುಪಡಿಸಿ, ಕೇಂದ್ರದ ತೀರ್ಮಾನಗಳು ಕರ್ನಾಟಕದಂತಹ ಉಳಿದ ರಾಜ್ಯಗಳಿಗೆ ನೇರವಾಗಿ ಅನ್ವಯ ಆಗುವಂತೆ ಜಮ್ಮು–ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ.

ನಿಜಕ್ಕೂ ಎಲ್ಲ ರಾಜ್ಯಗಳಿಗೂ ಅನ್ವಯಿಸಬೇಕಾದ ಈ ೩೭೦ನೇ ವಿಧಿಯಿಂದ ಜಮ್ಮು-–ಕಾಶ್ಮೀರದ ಅಭಿವೃದ್ಧಿಗೆ ತೊಂದರೆಯಾಗಿದೆ ಎಂಬ ಮಾತು ಬಿಜೆಪಿಯಿಂದ ಕೇಳಿಬರುತ್ತಿದೆ. ಏಕೆ? ಆರ್ಥಿಕ ಬೆಳವಣಿಗೆಗೂ ೩೭೦ನೇ ವಿಧಿಗೂ ಇರುವ ನಂಟಾದರೂ ಏನು?

ಜಮ್ಮು-–ಕಾಶ್ಮೀರದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡ ೭೭ ಮತ್ತು ಹಿಂದೂಗಳ ಜನಸಂಖ್ಯೆ ಶೇಕಡ ೧೧ರಷ್ಟಿದೆ. ಹಿಂದೂ ರಾಷ್ಟ್ರವಾದಿಗಳಿಗೆ ಇದನ್ನು ಅರಗಿಸಿಕೊಳ್ಳಲಾಗುವುದಿಲ್ಲ. ೩೭೦ನೇ ವಿಧಿಯಿಂದಾಗಿ ಭಾರತದ ಇತರೆಡೆಗಳಿಂದ ಜನರು ವಲಸೆ ಹೋಗಿ ಆಸ್ತಿ ಮಾಡಿಕೊಳ್ಳಲು ಅವಕಾಶವಿಲ್ಲ ಎಂಬ ಪರಿಸ್ಥಿತಿ ಇರುವುದರಿಂದ ಈ ವಿಧಿಯನ್ನು ಸಂಘ ಪರಿವಾರದವರು ವಿರೋಧಿಸುವುದು ಅವರ ಮೂಲ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇದೆ. ಆದರೆ ಇದನ್ನೆಲ್ಲ ನೇರವಾಗಿ ಹೇಳುತ್ತಿಲ್ಲ, ಅಷ್ಟೆ.

ಹಾಗೆಯೇ, ೩೭೦ನೇ ವಿಧಿಗೂ ಪಾಕಿಸ್ತಾನದಿಂದ ಹೊಮ್ಮುವ ಭಯೋತ್ಪಾದನೆಯ ನಿಯಂತ್ರಣಕ್ಕೂ ನಂಟಿಲ್ಲ. ಮೇಲೆ ಹೇಳಿದಂತೆ ರಕ್ಷಣೆ ಈಗಲೂ ಕೇಂದ್ರ ಸರ್ಕಾರದ ಕೈಯಲ್ಲೇ ಇರುವುದರಿಂದ ಪಾಕಿಸ್ತಾನದ ಸಮಸ್ಯೆಯನ್ನು ಬಗೆಹರಿಸಲು ಬೇಕಾದುದೆಲ್ಲವೂ ಅದರ ಕೈಯಲ್ಲಿದೆ. ಇರುವ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡರೆ ಸಾಕಷ್ಟೆ.

ಹಾಗಾದರೆ ಇನ್ನಾವ ನೆಪವನ್ನು ಒಡ್ಡಿ ೩೭೦ನೇ ವಿಧಿಯನ್ನು ರದ್ದುಗೊಳಿಸಬೇಕೆಂಬ ವಾದಕ್ಕೆ ಬೆಂಬಲ ತರಬಹುದು? ಜಮ್ಮು–ಕಾಶ್ಮೀರದಲ್ಲಿ ಭ್ರಷ್ಟಾಚಾರ ಬಹಳವಿದೆ ಎಂಬ ನೆಪವನ್ನು ಒಡ್ಡುವ ಪ್ರಯತ್ನ ಕೆಲವು ಕಡೆ ನಡೆದಿದೆ. ಆದರೆ ಬಿಜೆಪಿಯ ಕೆಲವು ನಾಯಕರ ಮೇಲೂ ಭ್ರಷ್ಟಾಚಾರದ ಆರೋಪಗಳಿರುವುದರಿಂದ ಅದನ್ನು ಕೂಡ ಹೆಚ್ಚು ಬಳಸಿಕೊಳ್ಳಲು ಆಗುವುದಿಲ್ಲ.

ಆದ್ದರಿಂದಲೇ ಎಲ್ಲರನ್ನೂ ಮೋಡಿ ಮಾಡುವ ಅಭಿವೃದ್ಧಿ ಎಂಬ ಪದವನ್ನು ಬಳಸಲಾಗುತ್ತಿದೆ. ಜಮ್ಮು-–ಕಾಶ್ಮೀರ ಆರ್ಥಿಕವಾಗಿ ಹಿಂದುಳಿದಿದೆ ಎಂಬ ವಿಷಯವನ್ನು ಹಿಡಿದುಕೊಂಡು ೩೭೦ನೇ ವಿಧಿಯನ್ನು ರದ್ದು ಮಾಡಬೇಕೆಂದು ವಾದಿಸಲು ಸಾಧ್ಯವಾದರೆ ಒಳ್ಳೆಯದಲ್ಲವೇ?

‘೩೭೦ನೇ ವಿಧಿಯನ್ನು ರದ್ದು ಮಾಡುವ ವಿಷಯದಲ್ಲಿ ಮುಖ್ಯವಾದವರೆಲ್ಲರೊಡನೆ ಚರ್ಚಿಸುತ್ತಿದ್ದೇವೆ’ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಈ ಮುಖ್ಯವಾದವರು ಯಾರೆಂದು ರಾಜ್ಯದ ಮುಖ್ಯಮಂತ್ರಿಗೇ ಗೊತ್ತಿಲ್ಲ!

ನಿಮ್ಮ ಅಭಿವೃದ್ಧಿಗೆ ೩೭೦ನೇ ವಿಧಿಯೇ ಮುಳುವಾಗಿದೆ ಎಂದು ತೋರಿಸಲು ಸಾಧ್ಯವಾದರೆ ಅದರಿಂದ ನೇರವಾಗಿ ಲಾಭ ಪಡೆದ ಕಾಶ್ಮೀರಿಗಳೇ ತಮ್ಮ ಅಣ್ಣತಮ್ಮಂದಿರು -ಅಕ್ಕತಂಗಿಯರನ್ನು ಮರೆತು ಅದನ್ನು ರದ್ದುಮಾಡಿರೆಂದು ಮುಂದೆ ಬರುತ್ತಾರೆ! ಆದರೆ ಈ ಅಭಿವೃದ್ಧಿ ನಡೆಯುವುದಾದರೂ ಹೇಗೆ?

ಯೋಜನೆ ಕೊಂಚ ಹೀಗಿರಬಹುದು. ಅಭಿವೃದ್ಧಿ ತರುತ್ತವೆ ಎನ್ನಲಾದ ಉದ್ಯಮಗಳು ಉತ್ತರ ಭಾರತದ ಮೇಲ್ಜಾತಿಗಳ ಹಿಡಿತದಲ್ಲಿವೆ. ಇವುಗಳನ್ನು ಬೆಂಬಲಿಸಿ, ವಿದ್ಯೆ ಹೆಚ್ಚಿಸುತ್ತೇವೆ, ಕೆಲಸ ಕೊಡುತ್ತೇವೆ ಮುಂತಾದ ಬೆಳವಣಿಗೆಯ ನೆಪಗಳನ್ನು ಮಾಡಿಕೊಂಡು, ಉತ್ತರಪ್ರದೇಶ, ಬಿಹಾರ ಮುಂತಾದ ಹೆಚ್ಚಿನ ಜನದಟ್ಟಣೆಯ ರಾಜ್ಯಗಳಿಂದ ಹಿಂದೂಗಳನ್ನು ಜಮ್ಮು-– ಕಾಶ್ಮೀರಕ್ಕೆ ಹೋಗಿ ನೆಲೆಸುವಂತೆ ಮಾಡುವುದು. ಒಂದು ಕಡೆ ಅಭಿವೃದ್ಧಿ ನಡೆಯುತ್ತಿದೆ ಎಂದು ಅಂಕಿ-ಅಂಶಗಳನ್ನು ತೋರಿಸುವುದಕ್ಕೂ ನೆಲೆಯಾಯಿತು, ಮತ್ತೊಂದು ಕಡೆ ಒಳಗೊಳಗೇ ಹಿಂದಿ ನಾಡಿನಿಂದ ವಲಸೆಯೂ ಆಯಿತು. ಆದರೆ ಇದೆಲ್ಲ ನಡೆಯಬೇಕಾದರೆ ೩೭೦ನೇ ವಿಧಿ ರದ್ದಾಗಬೇಕು.

ಯಾರ ಅಭಿವೃದ್ಧಿ? ಎಂಬ ಪ್ರಶ್ನೆಯನ್ನು ಎತ್ತದಂತೆ ವಾದವನ್ನು ನಿರ್ದೇಶಿಸಲಾಗುತ್ತಿದೆ. ಈ ಪ್ರಶ್ನೆ ಎದ್ದರೆ ವಲಸೆ ಬರುವ ಹಿಂದೂಗಳ ಅಭಿವೃದ್ಧಿ ಎಂಬ ಉತ್ತರ ಅದರೊಡನೆಯೇ ಬರುತ್ತದೆ! ಆಕಸ್ಮಿಕವಾಗಿ ಈ ಪ್ರಶ್ನೆಯನ್ನು ಯಾರಾದರೂ ಕೇಳಿದರೂ ಭಾರತೀಯರದು ಎಂದುಬಿಟ್ಟರೆ ಕೆಲಸ ಮುಗಿಯಿತು; ಮೇಲ್ಜಾತಿ ಹಿಂದೂಗಳದು ಎಂದು ಉತ್ತರಿಸಿದರೆ, ‘ನೀವೇ ಕೋಮುವಾದಿಗಳು, ಜಾತಿವಾದಿಗಳು. ನಮಗೆ ಭಾರತೀಯರೆಲ್ಲ ಒಂದೇ’ ಎಂದು ಆರೋಪಿಸಿದರಾಯಿತು!

ಈ ಯೋಜನೆಯಿಂದ ಕಾಶ್ಮೀರಿಗಳಿಗೆ ಒಳಿತಾಗುತ್ತದೆ ಎಂದು ಹೇಳಲಾಗುತ್ತಿದೆ. ಇವೆಲ್ಲವೂ ಸಾಧ್ಯವಾಗಬೇಕಾದರೆ ೩೭೦ನೇ ವಿಧಿಯನ್ನು ರದ್ದುಗೊಳಿಸಬೇಕು ಎಂಬ ವಾದವನ್ನು ಇಡಲಾಗುತ್ತಿದೆ. ಆದರೆ ಈ ವಿಧಿಯೇನಾದರೂ ರದ್ದಾದರೆ ಕಾಶ್ಮೀರಿಗಳಿಗೇ ನಷ್ಟ.- ಮಿಕ್ಕವರಿಗೆಲ್ಲ ಲಾಭವೇ! ಈ ನಷ್ಟವಾಗಲಿ ಲಾಭವಾಗಲಿ ಬಹಳ ಬೇಗ ಆಗುವಂಥದ್ದಲ್ಲ. ಆದರೆ ಕಾರ್ಯಸೂಚಿ ಮುಂದಕ್ಕೆ ಸಾಗಬೇಕಷ್ಟೆ.

ಯಾರಿಗೂ ಗೊತ್ತಾಗದಷ್ಟು ನಿಧಾನವಾಗಿ ಸಾಗಿ, ಯಾರೊಬ್ಬರನ್ನೂ ಈ ಕಾರ್ಯಸೂಚಿಗೆ ಜವಾಬ್ದಾರರನ್ನಾಗಿ ಬೊಟ್ಟು ಮಾಡಿ ತೋರಿಸಲು ಆಗದಂತೆ ಮಾಡಿದರೆ ಇನ್ನೂ ಒಳ್ಳೆಯದು. ಎಲ್ಲರಿಗೂ ಒಳ್ಳೆಯದಾಗುತ್ತಿದೆಯೆಂಬ ವಾತಾವರಣವನ್ನು ಸೃಷ್ಟಿಸಿದರೆ ಕೆಲಸ ಮುಗಿಯಿತು.

ವಾಸ್ತವವಾಗಿ ಭಾರತೀಯರೆಲ್ಲರ ಒಳಿತಿಗಾಗಿ ೩೭೦ನೇ ವಿಧಿಯನ್ನು ರದ್ದುಗೊಳಿಸುವುದಲ್ಲ, ಎಲ್ಲಾ ರಾಜ್ಯಗಳಿಗೂ ಅನ್ವಯಿಸುವಂತೆ ಮಾಡಿ ಅದನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಕರ್ನಾಟಕದ ಮಟ್ಟಕ್ಕೆ ಹೇಳುವುದಾದರೆ, ಉತ್ತರ ಭಾರತದ ಮೇಲ್ಜಾತಿಗಳು ಇಲ್ಲಿಯ ನಗರಗಳಲ್ಲಿ ಉದ್ಯಮಗಳ ಮೇಲೆ ಹೆಚ್ಚು-ಕಡಿಮೆ ಸಂಪೂರ್ಣ ಹಿಡಿತ ಸಾಧಿಸಿವೆ. ಅವರ ಉದ್ಯಮಗಳಲ್ಲಿ ಕೆಲಸ ಮಾಡುವುದಕ್ಕೂ ಅಲ್ಲಿಂದಲೇ ಜನರು ವಲಸೆ ಬರುತ್ತಿದ್ದಾರೆ.

ಅವರು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂಬ ಆಶಯದಲ್ಲಿ ಅರ್ಥವೇ ಉಳಿದಿಲ್ಲ. ಇಲ್ಲಿ ಅಭಿವೃದ್ಧಿಯಾಗುತ್ತಿದೆ, ಆದರೆ ಕನ್ನಡಿಗರ ಅಭಿವೃದ್ಧಿ ಆಗುತ್ತಿಲ್ಲ, ಬರೀ ಕರ್ನಾಟಕದ ಅಭಿವೃದ್ಧಿಯಾಗುತ್ತಿದೆ. ಎಲ್ಲರೂ ಭಾರತೀಯರೆಂಬ ಮೋಡಿಮಂತ್ರಕ್ಕೆ ಸಿಲುಕಿ ಕನ್ನಡಿಗರು ಉತ್ತರ ಭಾರತೀಯರಿಗೆ ತಮ್ಮದೆಲ್ಲವನ್ನೂ ನಿಧಾನವಾಗಿ ನೀಗುತ್ತಿದ್ದಾರೆ.

ಇದನ್ನೆಲ್ಲ ತಡೆಯಲು ಯಾವುದೇ ಸಾಂವಿಧಾನಿಕ ವಿಧಾನಗಳಿಲ್ಲ, ಉತ್ತೇಜಿಸಲು ಸಾಕಷ್ಟಿವೆ; ಆ ವಿಧಾನಗಳನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳಬಲ್ಲ ರಾಷ್ಟ್ರೀಯ ಪಕ್ಷವೂ ಸ್ಪಷ್ಟ ಬಹುಮತದಿಂದ ಆಡಳಿತಕ್ಕೆ ಬಂದಿದೆ. ಸಂವಿಧಾನದ ೩೭೦ನೇ ವಿಧಿ ನಮಗೂ ಅನ್ವಯಿಸುವಂತಾಗಬೇಕು ಎಂದು ಕನ್ನಡಿಗರು ಅರಿತುಕೊಳ್ಳಬೇಕು, ಎಚ್ಚೆತ್ತುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.