ನಮ್ಮ ಅಧಿಕಾರ ರಾಜಕಾರಣ ಮತ್ತು ಆಡಳಿತ ಕೇಂದ್ರಗಳಲ್ಲಿ ಉತ್ತರದಾಯಿತ್ವ ಬಹುಮಟ್ಟಿಗೆ ಮರೆಯಾಗಿದೆ. ಪ್ರಧಾನಿಯಿಂದ ಹಿಡಿದು ಪಂಚಾಯಿತಿ ಅಧ್ಯಕ್ಷರವರೆಗೆ ಚುನಾಯಿತ ಪ್ರತಿನಿಧಿಗಳು ಯಾವುದೇ ರೀತಿಯ ನೈತಿಕ ಜವಾಬ್ದಾರಿಯನ್ನು ಒಪ್ಪಿಕೊಳ್ಳುವ ಒಂದು ಉದಾತ್ತ ಸಂಸ್ಕೃತಿಯಿಂದ ವಿಮುಖರಾಗಿರು
ವುದು ಅಧಿಕಾರ ರಾಜಕಾರಣದ ಬಹುದೊಡ್ಡ ಕೊರತೆಯಾಗಿ ಪರಿಣಮಿಸಿದೆ.

ದೇಶದ ಸಮಸ್ತ ಜನಕೋಟಿಯನ್ನು ಪ್ರಭಾವಿಸುವಂತಹ ಮಸೂದೆಗಳನ್ನು ಸದನದಲ್ಲಿ ಚರ್ಚೆಗೆ ಒಳಪಡಿಸದೆಯೇ ಅವುಗಳಿಗೆ ಅನುಮೋದನೆ ಪಡೆಯುವ ಹೊಸ ಪರಂಪರೆಯು ಕೇಂದ್ರದಲ್ಲಿ ಶುರುವಾಗಿದೆ. ಮತ್ತೊಂದೆಡೆ, ದೇಶದಲ್ಲಿ ಸಂಭವಿಸುತ್ತಿರುವ ಸಾವು– ನೋವು, ಅಪಘಾತ, ಅವಘಡ, ಮಾನವನಿರ್ಮಿತ ದುರಂತಗಳು, ಕಳಪೆ ಕಾಮಗಾರಿಗಳು, ಬ್ರಹ್ಮಾಂಡ ಭ್ರಷ್ಟಾಚಾರಗಳಿಗೆ ಆಡಳಿತಾತ್ಮಕವಾಗಿ ಯಾರೂ ನೈತಿಕವಾಗಿ ಜವಾಬ್ದಾರರಲ್ಲ ಎಂಬ ಸಂದೇಶವು ದೇಶದಾದ್ಯಂತ ರವಾನೆಯಾಗತೊಡಗಿದೆ. ಇದಕ್ಕೆ ಬಲಿಯಾಗಿರುವುದು ‘ಸದನ’ ಎಂಬ ಮಹತ್ವದ ವೇದಿಕೆ ಮತ್ತು ‘ಕಲಾಪ’ ಎಂಬ ಮೌಲ್ಯಯುತ ಮಾತು ಹಾಗೂ ನಡವಳಿಕೆ.

ತಮ್ಮ ಖಾತೆಗೆ ಸಂಬಂಧಿಸಿದ ಪ್ರಶ್ನೆಗಳು, ಗೊತ್ತುವಳಿಗಳು ಏನಾದರೂ ಇದ್ದರೆ ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿ, ಪ್ರಧಾನಮಂತ್ರಿಯೂ ಸೇರಿದಂತೆ ನಿರ್ಣಾಯಕ ಸ್ಥಾನದಲ್ಲಿ ಇರುವವರು ಸದನದ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರುತ್ತಿದ್ದ ಕಾಲವೂ ಒಂದಿತ್ತು. ಬಹುಶಃ ಈಗಿನ ಸಮಾಜಕ್ಕೆ ಇದು ಕಾಗಕ್ಕ ಗೂಬಕ್ಕನ ಕತೆಯ ಹಾಗೆ ಕಾಣಬಹುದು. ಏಕೆಂದರೆ ಶಾಸನಸಭೆಗಳಲ್ಲಿ ಪ್ರಶ್ನಿಸಲು ಇರುವ ಅವಕಾಶವೇ ಮೊಟಕುಗೊಂಡಿದೆ. ಅರ್ಥಪೂರ್ಣ ಚರ್ಚೆಗಳಿಗೆ ತಾವಿಲ್ಲದಂತಾಗಿದೆ. ವಿರೋಧ ಪಕ್ಷಗಳ ಸದಸ್ಯರನ್ನು ಹೊರಹಾಕುವ ಪರಿಪಾಟವು ದಿನೇ ದಿನೇ ಹೆಚ್ಚು ಬಲ ಪಡೆಯತೊಡಗಿದೆ. ಈ ಮಾತು ವಿಧಾನಸಭೆಗಳಿಗೂ ಅನ್ವಯಿಸುತ್ತದೆ, ಸಂಸತ್ತಿಗೂ ಅನ್ವಯಿಸುತ್ತದೆ.

ಆಡಳಿತ ಪಕ್ಷವಾಗಲೀ ವಿರೋಧ ಪಕ್ಷಗಳಾಗಲೀ ಮೂಲತಃ ಪ್ರತಿನಿಧಿಸುವುದು ಜನರನ್ನು. ಹಾಗಾಗಿ, ಸದನದಲ್ಲಿ ಕೇಳಿಬರುವ ಪ್ರಶ್ನೆಗಳು, ಆರೋಪಗಳು ಏನೇ ಇದ್ದರೂ ಅವನ್ನು ಜನಸಾಮಾನ್ಯರ ಪ್ರಶ್ನೆಗಳು ಎಂದೇ ಪರಿಗಣಿಸಬೇಕಲ್ಲವೇ? ಈ ಜವಾಬ್ದಾರಿಯುತ ಕರ್ತವ್ಯವನ್ನು ನಮ್ಮ ರಾಜಕಾರಣಿಗಳು ಸಂಪೂರ್ಣವಾಗಿ ಮರೆತಂತೆ ತೋರುತ್ತಿದೆ. ಇದೀಗ ನಡೆಯುತ್ತಿರುವ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಸಚಿವರ ಗೈರುಹಾಜರಿಯ ಬಗ್ಗೆ ಸ್ಪೀಕರ್ ಅವರೇ ಬೇಸರ ವ್ಯಕ್ತಪಡಿಸಿ
ದ್ದಾರೆ. ಇದು ಅವರ ಪ್ರಜಾಸತ್ತಾತ್ಮಕ ಕಾಳಜಿಯನ್ನು ತೋರುತ್ತದೆ.

ಸದನಕ್ಕೆ ಹಾಜರಾಗದ ಜನಪ್ರತಿನಿಧಿಗಳು ಏನೇ ಕಾರಣ ನೀಡಿದರೂ ಅದು ಒಪ್ಪುವಂಥದ್ದಲ್ಲ. ಯಾವುದೇ ಹಗರಣದಲ್ಲಿ ಸಂಬಂಧಿಸಿದ ಸಚಿವರು ನೇರವಾಗಿ ಭಾಗಿಯಾಗದಿದ್ದರೂ ನೈತಿಕ ಹೊಣೆಗಾರಿಕೆಯಿಂದ ಅವರು ನುಣುಚಿಕೊಳ್ಳಲು ಆಗುವುದಿಲ್ಲ. ಜನರಲ್ಲಿ ಮೂಡಿರಬಹುದಾದ ಪ್ರಶ್ನೆ, ಶಂಕೆ ನಿವಾರಿಸಬೇಕಾದುದು ಅವರ ಕರ್ತವ್ಯ. ಇದಕ್ಕೆ ಬಹುಮುಖ್ಯವಾಗಿ ಇರಬೇಕಾದದ್ದು ಉತ್ತರದಾಯಿತ್ವದ ಪ್ರಜ್ಞೆ. ಭಾರತದ ಪ್ರಜಾತಂತ್ರ ಕಳೆದುಕೊಂಡಿರುವುದು ಈ ಅಮೂಲ್ಯವಾದ ಗುಣವನ್ನು.

ಯಾವುದಾದರೂ ಜನೋಪಯೋಗಿ ಕೆಲಸ ಮಾಡಿದರೆ ಅದರ ಶ್ರೇಯ ಮುಡಿಗೇರಿಸಿಕೊಳ್ಳುವುದು ತಪ್ಪಲ್ಲ. ಆ ಬಗ್ಗೆ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ಚುನಾಯಿತ ಜನಪ್ರತಿನಿಧಿಗಳಿಗೆ, ತಮ್ಮ ವೈಫಲ್ಯಗಳನ್ನೂ ಒಪ್ಪಿಕೊಳ್ಳುವ ಮತ್ತು ಸರಿಪಡಿಸಿಕೊಳ್ಳುವ ನೈತಿಕತೆ ಇರಬೇಕಲ್ಲವೇ? ಅದು ಯಾವ ಹಂತದಲ್ಲೂ ಈಗ ಕಾಣಸಿಗುತ್ತಿಲ್ಲ.

ಕರ್ನಾಟಕದ ಪ್ರಸಕ್ತ ಅಧಿವೇಶನವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸ್ಪಷ್ಟವಾಗುವ ಒಂದು ಅಂಶ ಎಂದರೆ, ಆಡಳಿತ ವ್ಯವಸ್ಥೆಯ ಉದ್ದಗಲಕ್ಕೂ ಹರಡಿ, ಮೇಲಿನಿಂದ ಕೆಳಗಿನವರೆಗೆ ವ್ಯಾಪಿಸಿರುವ ಭ್ರಷ್ಟಾಚಾರದ ಸತ್ಯಾಸತ್ಯತೆಯನ್ನು ತಿಳಿಯಲು ಜನರಿಗೆ ಯಾವುದೇ ತನಿಖೆ, ವಿಚಾರಣೆಯೂ ಅಗತ್ಯ ಎನಿಸುವುದಿಲ್ಲ. ಏಕೆಂದರೆ ‘ನೀನಾ- ನಾನಾ’ ಎಂಬ ಪ್ರಮೇಯವನ್ನು ಬಳಸುತ್ತಾ, ‘ನಾನು ನಿನಗಿಂತಲೂ ಮೇಲು’ ಎಂಬ ಆತ್ಮರತಿಯಲ್ಲಿ ತೇಲುತ್ತಾ, ‘ನಾವು ನಿಮ್ಮಷ್ಟು ಭ್ರಷ್ಟರಲ್ಲ’ ಎಂದು ತಮ್ಮನ್ನು ತಾವೇ ಪ್ರಮಾಣೀಕರಿಸಿಕೊಳ್ಳುವ ಮೂಲಕ, ಪರಿಮಾಣಾತ್ಮಕವಾಗಿ ಆಡಳಿತ ಭ್ರಷ್ಟಾಚಾರದ ಒಳಹೊರಗು
ಗಳನ್ನು ಜನಪ್ರತಿನಿಧಿಗಳೇ ಹೊರಹಾಕುತ್ತಿದ್ದಾರೆ.

ಎಲ್ಲರೂ ಭ್ರಷ್ಟರೇ, ಪ್ರಮಾಣ ಮತ್ತು ಹರವಿನಲ್ಲಿ ಮಾತ್ರವೇ ವ್ಯತ್ಯಾಸವಿರುತ್ತದೆ ಎಂಬ ಸರಳ ಸತ್ಯವನ್ನು ಕಲಾಪದ ವಾದ- ಪ್ರತಿವಾದಗಳು ಸ್ಪಷ್ಟವಾಗಿ ನಿರೂಪಿಸುತ್ತಿವೆ. ಜನರ ಪಾಲಿಗೆ ಎಲ್ಲರೂ ಭ್ರಷ್ಟರೆ ಎಂಬ ವಾಸ್ತವವನ್ನೂ ತಿಳಿಸಿಕೊಡುತ್ತಿವೆ. ಇದಕ್ಕಾಗಿ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಅಭಿನಂದನಾರ್ಹರು.

ಇಲ್ಲಿ ಪ್ರಜಾಪ್ರಭುತ್ವ ಕಳೆದುಕೊಳ್ಳುತ್ತಿರುವುದು ಏನನ್ನು? ಉತ್ತಮ ಜನಪರ ಆಳ್ವಿಕೆಗೆ ಅತ್ಯವಶ್ಯವಾದ ಸಾಂವಿಧಾನಿಕ ನೈತಿಕತೆ ಮತ್ತು ಆಡಳಿತಾತ್ಮಕ ಉತ್ತರದಾಯಿತ್ವವನ್ನು ಅಲ್ಲವೇ? ಚುನಾಯಿತ ಪ್ರತಿನಿಧಿಗಳು ಯಾರಿಗೆ ಉತ್ತರದಾಯಿಗಳಾಗಿ ಇರಬೇಕು? ಸಂವಿಧಾನಕ್ಕೋ ಅಥವಾ ಮತದಾರರಿಗೋ ಅಥವಾ ಸಮಸ್ತ ಜನರಿಗೋ? ಈ ಪ್ರಶ್ನೆಗಳಿಗೆ ಎಲ್ಲ ರಾಜಕಾರಣಿಗಳೂ ಉತ್ತರ ನೀಡಬೇಕಿದೆ.

ರಾಜ್ಯದ ಜನರಿಗೆ ಬೇಕಿರುವುದು ಯಾರು ಹೆಚ್ಚು ಭ್ರಷ್ಟರು ಅಥವಾ ಯಾರು ಕಡಿಮೆ ಭ್ರಷ್ಟರು ಎನ್ನುವ ಬಗೆಗಿನ ನಿಷ್ಕರ್ಷೆಯಲ್ಲ. ಶ್ರೀಸಾಮಾನ್ಯನಿಗೆ ಬೇಕಿರುವುದು ಪ್ರಾಮಾಣಿಕ, ಪಾರದರ್ಶಕ, ಸಂವಿಧಾನಬದ್ಧ ಹಾಗೂ ಉತ್ತರದಾಯಿತ್ವವುಳ್ಳ ಆಡಳಿತ ಮಾತ್ರ. ಕಲಾಪದಲ್ಲಿ ತಾವಾಡುವ ಪ್ರತಿ ಮಾತೂ ಸದನದ ಗೌರವವನ್ನು ಉಳಿಸುವಂತೆ ಇರಬೇಕು ಎಂಬ ಕನಿಷ್ಠ ವಿವೇಕ, ವಿವೇಚನೆ ನಮ್ಮ ಜನಪ್ರತಿನಿಧಿಗಳಲ್ಲಿ ಇರಬೇಕಲ್ಲವೇ? ಇವು ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.