ವಿವಿಧ ಊರುಗಳಿಂದ ರಾತ್ರಿಯಿಡೀ ಪ್ರಯಾಣಿಸಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದವರು ಶೌಚಾಲಯಗಳಿಗೆ ಮುತ್ತಿಗೆ ಹಾಕುವುದನ್ನು ನೋಡಬೇಕು. ಚೊಕ್ಕಟ ಶೌಚಾಲಯವುಳ್ಳ ನೆಂಟರಿಷ್ಟರು ಯಾರಾದರೂ ತಮ್ಮನ್ನು ಮನೆಗೆ ಆಹ್ವಾನಿಸ ಬಾರದಿತ್ತೇ ಅಂತ ಅವರಿಗೆ ಅನ್ನಿಸಿಯೇ ತೀರುತ್ತದೆ. ಶೌಚಾಲಯವು ದೈಹಿಕ ಬಾಧೆ ನಿವಾರಿಸಿ ನಿರಾಳವನ್ನು ತರುವ ಆಲಯವೇ ಹೌದು. ಎಲ್ಲೂ ದಕ್ಕದ ಹೊಳಹುಗಳು ಅಲ್ಲಿನ ಏಕಾಂತದಲ್ಲಿ ದೊರೆಯುತ್ತವೆ.

ವಿಶ್ವಸಂಸ್ಥೆ ಪ್ರತಿವರ್ಷ ನವೆಂಬರ್ 19ರಂದು ‘ಅಂತರರಾಷ್ಟ್ರೀಯ ಶೌಚಾಲಯ ದಿನ’ ಆಚರಣೆಗೆ ಕರೆಯಿತ್ತಿರುವ ಉದ್ದೇಶ ಸ್ಪಷ್ಟವಿದೆ. ಈ ಬಾರಿಯ ಧ್ಯೇಯವಾಕ್ಯ ವಿಶಿಷ್ಟವಾಗಿದೆ: ‘ಶೌಚಾಲಯ, ನೆಮ್ಮದಿಯ ಸ್ಥಳ’. ಐದು ಮಂದಿಗೆ ಒಂದಾದರೂ ಶೌಚಾಲಯ ಇರುವುದು ಅಗತ್ಯ. ಜಗತ್ತಿನ ಒಟ್ಟು ಜನಸಂಖ್ಯೆ 850 ಕೋಟಿ. ಇಂದಿಗೂ ಸುಮಾರು 350 ಕೋಟಿ ಮಂದಿಗೆ ಸಮರ್ಪಕ ನಿರ್ವಹಣೆಯ ಶೌಚಾಲಯಗಳಿಲ್ಲ. 42 ಕೋಟಿ ಜನರ ಪಾಲಿಗೆ ಬಯಲೇ ಶೌಚಾಲಯ. 2030ರ ವೇಳೆಗೆ ಎಲ್ಲರಿಗೂ ಶೌಚಾಲಯ ಎನ್ನುವ ಗುರಿಯೇನೊ ವಿಶ್ವಸಂಸ್ಥೆಗೆ ಇದೆ. ಜಗತ್ತಿನ ಎಲ್ಲ ಸರ್ಕಾರಗಳಿಂದಲೂ ಅದು ಸಹಕಾರ ಬಯಸಿದೆ. ಆದರೆ ಇನ್ನು ಆರೇ ವರ್ಷಗಳಲ್ಲಿ ಅದು ಕೈಗೂಡುವುದು ಸಾಧ್ಯವೇ?

ಒಂದು ಮನೆಯ ಪರಿಶುದ್ಧತೆ ಅದರ ಶೌಚಾಲಯದಿಂದಲೇ ಆರಂಭವಾಗಬೇಕು. ಶೌಚಾಲಯ ಮತ್ತು ಶುಚಿತ್ವ ಒಂದೇ ನಾಣ್ಯದ ಮುಖಗಳಾಗಬೇಕು. ಅಮೆರಿಕ, ಜಪಾನ್, ಡೆನ್ಮಾರ್ಕ್, ಸಿಂಗಪುರ, ಬ್ರಿಟನ್ನಂತಹ ದೇಶಗಳಲ್ಲಿ ಶೌಚಾಲಯಗಳಿಗೆ ಬಹು ಮಹತ್ವ ನೀಡಲಾಗುತ್ತದೆ. ಕನ್ನಡಿಯಂಥ ಪರಿಮಳಭರಿತ ಶೌಚಾಲಯದಲ್ಲಿ ಪುಟ್ಟ ಹೂಕುಂಡಗಳು, ಓದಲು ದಿನಪತ್ರಿಕೆ, ಕಿರು ಹೊತ್ತಿಗೆಗಳು ಇರುತ್ತವೆ. ಮನೆಯಿರಲಿ ಅಥವಾ ಸಾರ್ವಜನಿಕವಿರಲಿ ಶೌಚಾಲಯ ಸೇವೆಗೆ ಭಂಗವಾದರೆ ಮಾರಕ ಪರಿಣಾಮಗಳು ಗೊತ್ತೇ ಇದೆ. ಮನುಷ್ಯನ ಮಲಮೂತ್ರಗಳು ಪರಿಸರದಲ್ಲಿ ಬೆರೆತು ಕಾಲರಾ, ಟೈಫಾಯಿಡ್ನಂತಹ ರೋಗಗಳು ಹರಡಲು ಆಸ್ಪದವಾಗುತ್ತದೆ. ಕೊಳಕು ಶೌಚಾಲಯವು ರೋಗವನ್ನು ಹರಡುವ ಕ್ರಿಮಿಕೀಟಗಳು ಹಾಗೂ
ಸೂಕ್ಷ್ಮಜೀವಿಗಳ ಸಂತಾನವೃದ್ಧಿಗೆ ಆವಾಸವಾಗುತ್ತದೆ.

ಒಂದು ಸಾಧಾರಣ ಕುಟುಂಬವಿರುವ ಮನೆಯ ಶೌಚಾಲಯದ ನಾಜೂಕಿನ ನಿರ್ವಹಣೆಗೆ ದಿನಕ್ಕೆ ಸರಾಸರಿ 75 ಲೀಟರುಗಳಷ್ಟು ನೀರು ಅಗತ್ಯ. ನೈರ್ಮಲ್ಯವು ಆರೋಗ್ಯಕ್ಕೆ ಮಾತ್ರವಲ್ಲ, ಖಾಸಗಿತನ, ಘನತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ್ದು. ಶೌಚಾಲಯ ಹಾಗೂ ಅಗತ್ಯ ಪ್ರಮಾಣದ ನೀರು ಹೊಂದುವುದು ಮಾನವ ಹಕ್ಕು. ನೈರ್ಮಲ್ಯಕ್ಕೆ ಆದ್ಯತೆ ನೀಡುವುದರಿಂದ ಎಲ್ಲರಿಗೂ ಉತ್ತಮ ಮತ್ತು ಶಾಂತಿಯುತ ಬದುಕನ್ನು ಕಲ್ಪಿಸಿ ಕೊಟ್ಟಂತೆ ಆಗುತ್ತದೆ. ಸ್ವಚ್ಛವಲ್ಲದ ಶೌಚಾಲಯಗಳು ಪ್ರವಾಸೋದ್ಯಮದ ಮೇಲೂ ಮಾರಕ ಪರಿಣಾಮ ಬೀರುವುದು ಕಟ್ಟಿಟ್ಟ ಬುತ್ತಿ.

ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲ ಎಂಬ ಕಾರಣಕ್ಕೆ ಹೆಣ್ಣುಮಕ್ಕಳು ಶಾಲೆಗೆ ಪ್ರವೇಶ ಪಡೆಯಲು ಹಿಂಜರಿಯುವುದಿದೆ. ಮಹಿಳೆಯರು ತಾವು ಉದ್ಯೋಗದಲ್ಲಿರುವ ಕಡೆ ಕನಿಷ್ಠತಮ ಶೌಚಾಲಯ ಸೌಲಭ್ಯ ಇರದಿದ್ದರೆ ಎದುರಿಸುವ ಸವಾಲುಗಳು ಹೇಳತೀರದು. ಇದು ಉತ್ಪಾದನೆ ಮತ್ತು ಆರ್ಥಿಕ ಸ್ಥಿತಿಗತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ಒಂದು ಸಂಸ್ಥೆಯಲ್ಲಿ 20 ಮಂದಿಗೆ ಒಂದರಂತೆ ಶೌಚಾಲಯ ಇರುವುದು ಅಪೇಕ್ಷಣೀಯ. ಹಾನಿಯಾದ ಮತ್ತು ಸುರಕ್ಷಿತವಲ್ಲದ ಶೌಚಾಲಯಗಳಿಂದ ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಐದು ವರ್ಷಕ್ಕೂ ಕಡಿಮೆ ವಯಸ್ಸಿನ 1,000 ಮಕ್ಕಳು ಅಸುನೀಗುತ್ತಿದ್ದಾರೆ. ಜನಪದದಲ್ಲಿ ‘ಮುದ್ದೆ, ನಿದ್ದೆ, ಲದ್ದಿ’ ಎಂಬ ಆರೋಗ್ಯ ಸೂತ್ರವಿದೆ.

ನೈರ್ಮಲ್ಯವು ಸಿರಿತನವೂ ಅಲ್ಲ, ಅನುಕೂಲಕ್ಕೂ ಅಲ್ಲ, ಬದುಕುಳಿಯಲು ಅದು ಅನಿವಾರ್ಯ. ಸುಸ್ಥಿರ ಶೌಚಾಲಯ ವ್ಯವಸ್ಥೆಗೆ ಮುಖ್ಯ ಅಡೆತಡೆಗಳೆಂದರೆ ವ್ಯಾಜ್ಯ, ಹವಾಗುಣ ಬದಲಾವಣೆ, ಪ್ರಾಕೃತಿಕ ಪ್ರಕೋಪಗಳು. ಇವೆಲ್ಲವನ್ನೂ ಮೀರಿಸಿದಂತೆ ನೈರ್ಮಲ್ಯವು ಎದುರಿಸುವ ಬಿಕ್ಕಟ್ಟೆಂದರೆ ಮನುಷ್ಯನ ನಿರ್ಲಕ್ಷ್ಯ.

ಮನೆಗಿಂತ ತಾಣವಿಲ್ಲ, ನಮ್ಮದೇ ಶೌಚಾಲಯಕ್ಕಿಂತ ಇನ್ನೊಂದಿಲ್ಲ ಎಂಬ ನುಡಿಯಿದೆ. ಮಹಾತ್ಮ ಗಾಂಧಿ ಸ್ವಾತಂತ್ರ್ಯಕ್ಕಿಂತಲೂ ನೈರ್ಮಲ್ಯವೇ ಹೆಚ್ಚು ಪ್ರಧಾನ ಎಂದರು. ನೈರ್ಮಲ್ಯ ಮತ್ತು ಶುಚಿತ್ವ ಅವರ ಬದುಕಿನ ಅವಿಭಾಜ್ಯ ಭಾಗಗಳೇ ಆಗಿದ್ದವು. ಭಾರತದಲ್ಲಿ ಶೇಕಡ 50ರಷ್ಟು ಮನೆಗಳಿಗೆ ತಕ್ಕ ಶೌಚಾಲಯದ ವ್ಯವಸ್ಥೆ ಇಲ್ಲ. ಜನಸಂಖ್ಯೆಯ ಮೂರನೇ ಒಂದರಷ್ಟು ಮಂದಿ ತೆರೆದ ಬಯಲನ್ನೇ ನಂಬಿದ್ದಾರೆ. ಕ್ರಿ.ಪೂ. 2800ರ ಸುಮಾರಿನಲ್ಲಿ ವಾಯವ್ಯ ಭಾರತದಲ್ಲಿ ನಳನಳಿಸಿದ್ದ ಸಿಂಧೂ ಕಣಿವೆ ನಾಗರಿಕತೆಯಲ್ಲಿ ಜಗತ್ತಿನಲ್ಲೇ ಮೊದಲ ಒಳಚರಂಡಿ ಸಂಪರ್ಕದ ಶೌಚಾಲಯಗಳಿದ್ದವು. ಹರಪ್ಪ ಮತ್ತು ಮೊಹೆಂಜೊದಾರೊ ನಗರಗಳಲ್ಲಿ ‘ನುಗ್ಗು ನೀರಿನ’ (flush out) ಶೌಚಾಲಯಗಳು ಇದ್ದುದು ತಿಳಿದುಬಂದಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವೆಡೆ ಬಯಲು ಮಲವಿಸರ್ಜನೆ ಆರೋಗ್ಯಯುತ ಎಂಬ ಮೌಢ್ಯವುಂಟು. ಕೆಲವೆಡೆ ಮನೆಯಲ್ಲಿ ಶೌಚಾಲಯ ಕಟ್ಟಿಸಿದ್ದರೂ ಮಲಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸುವುದಿದೆ. ಅಂದಹಾಗೆ ಕಮೋಡ್ ಬಳಕೆಯೇ ಹೊಲಸೆಂಬ ಭಾವನೆಯೂ ಅನೇಕರಲ್ಲಿದೆ. ಜನ ಇವೆಲ್ಲ ಅಂಧಶ್ರದ್ಧೆಗಳಿಂದ ಹೊರಬಂದು ‘ಸ್ವಚ್ಛ ಭಾರತ’ ನಿರ್ಮಲೀಕರಣದ ಆಂದೋಲನಕ್ಕೆ ಕೈಜೋಡಿಸಬೇಕು. 2018ರ ನವೆಂಬರ್ 19ರಂದು ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶಗಳು ‘ಬಯಲು ಶೌಚಾಲಯಮುಕ್ತ’ ಎಂದು ಘೋಷಿಸಿತು. ಸರಳ ಶಿಸ್ತು, ಸಂಕಲ್ಪಗಳೇ ವಿಶ್ವ ಶೌಚಾಲಯ ದಿನವನ್ನು ಅರ್ಥಪೂರ್ಣಗೊಳಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.