ವಾಯುಗುಣ ಬದಲಾವಣೆ, ಮಾಲಿನ್ಯ, ಜೀವವೈವಿಧ್ಯದ ಅವನತಿ- ಇವು ಭೂಗ್ರಹ ಎದುರಿಸುತ್ತಿರುವ ತ್ರಿವಳಿ ಬಿಕ್ಕಟ್ಟುಗಳು. ಓಜೋನ್ ಪದರವು ನೆಲದಿಂದ 15- 50 ಕಿ.ಮೀ.ವರೆಗಿನ ಎತ್ತರದ ವ್ಯಾಪ್ತಿಯ ವಾಯು
ಮಂಡಲದಲ್ಲಿನ ಸ್ತರಗೋಳವೆಂಬ ಭಾಗದಲ್ಲಿ ಅತಿ ಹೆಚ್ಚಾಗಿ ದಟ್ಟೈಸಿದೆ. ವಾಯುಮಂಡಲದಲ್ಲಿ ಓಜೋನ್ ಪದರದ ಸರಾಸರಿ ದಪ್ಪ 3 ಮಿ.ಮೀ. ಅಂದರೆ, ಎರಡು ನಾಣ್ಯಗಳನ್ನು ಅಂಟಿಸಿ ಒಂದಾಗಿಸಿದಾಗಿನ ದಪ್ಪ.

ಒಂದುವೇಳೆ ಓಜೋನ್ ಪದರ ಇಲ್ಲದಿದ್ದರೆ ಕೋಟ್ಯಂತರ ಮಂದಿ ಚರ್ಮವ್ಯಾಧಿಯಿಂದ ಬಳಲ
ಬೇಕಾಗುತ್ತಿತ್ತು. ಬೆಳೆಗಳ ಇಳುವರಿಯೂ ಕಡಿಮೆಯಾ
ಗುತ್ತಿತ್ತು.

ಅಂದಹಾಗೆ ಬುಧ, ಗುರು, ಶನಿ, ಮತ್ತು ನೆಪ್ಚೂನ್ ಗ್ರಹಗಳಿಗೆ ಓಜೋನ್ ಪದರದ ಭಾಗ್ಯವಿಲ್ಲ. ಭೂಮಿಯ ಏಕೈಕ ಉಪಗ್ರಹ ಚಂದ್ರನಿಗೂ ಓಜೋನ್ ಚಾಮರದ ವರವಿಲ್ಲ. 1985ರಲ್ಲಿ ವಿಜ್ಞಾನಿಗಳು ಅಂಟಾರ್ಕ್ಟಿಕಾದ ಮೇಲೆ ಓಜೋನ್ ಪದರ ಸವೆದಿರುವ ಆಘಾತಕಾರಿ ಅಂಶವನ್ನು ಗುರುತಿಸಿದರು. ಪರಿಸರ ಹಾನಿ ಕುರಿತ ಅನೇಕ ಸಂಗತಿಗಳು ಹಾಗೂ ಅವುಗಳ ನಿವಾರಣೋಪಾಯ ಕುರಿತ ಗಂಭೀರ ಚರ್ಚೆಗೆ ಅದು ಗ್ರಾಸವಾಯಿತು. ವಾಸ್ತವವಾಗಿ ‘ಓಜೋನ್ ರಂಧ್ರ’ ಎಂಬುದು ರಂಧ್ರವಲ್ಲ. ಅದು ಓಜೋನ್ ಪದರ ತೆಳುವಾಗು
ತ್ತಿರುವ ವಲಯ.

1987ರ ಸೆಪ್ಟೆಂಬರ್ 16ರಂದು ಕೆನಡಾ ದೇಶದ ಮಾಂಟ್ರಿಯಲ್ ನಗರದಲ್ಲಿ ವಿಶ್ವದ 197 ದೇಶಗಳು ಭಾಗವಹಿಸಿದ್ದ ಐತಿಹಾಸಿಕ ಸಭೆ ಅದು. ಓಜೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳ ಉತ್ಪಾದನೆ, ಬಳಕೆ, ಆಮದನ್ನು ಸ್ಥಗಿತಗೊಳಿಸಲು ಒಪ್ಪಂದಕ್ಕೆ ಬರಲಾಯಿತು. ಪ್ರಕೃತಿದತ್ತ ರಕ್ಷಾ ಕೊಡೆಯನ್ನು ಜೋಪಾನವಾಗಿ ಕಾಯ್ದುಕೊಳ್ಳುವುದೇ ಗುರಿ. ‘ಮಾಂಟ್ರಿಯಲ್ ಪ್ರೊಟೊಕಾಲ್’ ಎಂದೇ ಮಹತ್ವ ಪಡೆದ ಇದು ಜಾಗತಿಕ ಮಟ್ಟದಲ್ಲೇ ಅತ್ಯಂತ ಯಶಸ್ವಿಯಾದ, ಪರಿಸರ ಕಾಪಿಡುವ ಶಿಷ್ಟಾಚಾರ ಸಂಹಿತೆ. ಓಜೋನ್ ಕೊಡೆಗೆ ಮಾರಕವಾಗುವ ಮಾಲಿನ್ಯಕಾರಕಗಳ ಬಿಡುಗಡೆಯ ಪ್ರಮಾಣ ಎರಡು ದಶಕಗಳಿಂದ ಈಚೆಗೆ ಸುದೈವದಿಂದ ಕ್ಷೀಣಿಸುತ್ತಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವೈಜ್ಞಾನಿಕ ಮೌಲ್ಯಮಾಪನ ಇದನ್ನು ದೃಢೀಕರಿಸಿದೆ.

ಸ್ಪ್ರೇಯರ್, ರೆಫ್ರಿಜಿರೇಟರ್, ಏರ್ಕಂಡೀಷನರ್ನಂತಹ ವಸ್ತುಗಳಲ್ಲಿ ಮನುಷ್ಯಕೃತ ಕ್ಲೋರೊಫ್ಲೂರೊ ಕಾರ್ಬನ್ಗಳೆಂಬ (ಸಿಎಫ್ಸಿ) ಸಂಯೋಜಿತ ರಾಸಾಯನಿಕ ಅನಿಲಗಳನ್ನು ಬಳಸಲಾಗುತ್ತದೆ. ಸೂರ್ಯನ ವಿಕಿರಣಗಳು ಇಂಗಾಲ- ಕ್ಲೋರಿನ್ ಬಂಧವನ್ನು ಬಿಡಿಸುತ್ತವೆ. ಓಜೋನ್ ಅಣುಗಳನ್ನು ಕ್ಲೋರಿನ್ ಹಾಳುಮಾಡುತ್ತದೆ. ಸಿಎಫ್ಸಿ ಅಣುಗಳು ವಾಯುಮಂಡಲ ತಲುಪಲು ಐದಾರು ವರ್ಷಗಳೇ ಬೇಕು. ಅವು ನೂರು ವರ್ಷಗಳ ತನಕ ಅಲ್ಲೇ ಉಳಿಯುತ್ತವೆ. ಒಂದೇ ಒಂದು ಸಿಎಫ್ಸಿ ಅಣು ಒಂದು ಲಕ್ಷ ಓಜೋನ್ ಅಣುಗಳನ್ನು ನಾಶಪಡಿಸಬಲ್ಲದು! ಸಿಎಫ್ಸಿ ಅಣುಗಳು ಗಾಳಿಗಿಂತ ಭಾರವೆ. ಆದರೆ ವಾಯುಮಂಡಲ ಚಲನಶೀಲವಾದ್ದರಿಂದ ಅದು ಅವನ್ನು ಹೊತ್ತೊಯ್ಯುತ್ತದೆ. ಎಂದಮೇಲೆ ಸಿಎಫ್ಸಿ ಬಳಕೆ ಹೆಚ್ಚಿದಷ್ಟೂ ಅತಿನೇರಳೆಗಳ ಕಾರುಬಾರು.

‘ನರಿ ಕೂಗು ಗಿರಿಗೆ ಕೇಳಿಸೀತೆ?’ ಎಂಬ ಆಡುನುಡಿಯಿದೆ. ‘ಭೂಮಿ ಒಂದೇ, ಓಜೋನ್ ರಕ್ಷಾ ಕವಚ ಒಂದೇ. ಅದನ್ನು ಕಳೆಯದಿರಿ’ ಎಂಬ, ವಿಜ್ಞಾನಿಗಳು, ಪರಿಸರವಾದಿಗಳ ಒಕ್ಕೊರಲಿನ ಮೊರೆ ಫಲ ನೀಡಿದೆ. ಅಂತೂ ಆ ಆಡುನುಡಿಯನ್ನು ಸುಳ್ಳಾಗಿಸುತ್ತಿದೆ. ಪ್ರಸ್ತುತ ಶತಮಾನದ ಮಧ್ಯದ ವೇಳೆಗೆ ಧರೆಗೆ ಸುಸ್ಥಿರ ಓಜೋನ್ ಕೊಡೆ ಮರುಲಭಿಸಲಿದೆ. 2000ದ ಸೆಪ್ಟೆಂಬರ್ನಲ್ಲಿ ಓಜೋನ್ ಪದರದ ಸವಕಳಿ ಬಹು ದೊಡ್ಡದಿತ್ತು. ಆಗ ಅದರ ವಿಸ್ತಾರ 2.8 ಕೋಟಿ ಚದರ ಕಿ.ಮೀ. ಅಂದರೆ ಇಡೀ ಯುರೋಪ್ ದೇಶಗಳ ಏಳು ಪಟ್ಟು ವಿಸ್ತೀರ್ಣ! ಆದರೆ 2005ರಲ್ಲಿ ಅಂಟಾರ್ಕ್ಟಿಕಾದಲ್ಲಿ ಗುರುತಿಸಲಾದ ಓಜೋನ್ ಪದರಕ್ಕೆ ಹೋಲಿಸಿದರೆ ಇಂದಿಗೆ ಶೇ 20ರಷ್ಟು ರಂಧ್ರ ಮುಚ್ಚಿದೆ. ಮಾಂಟ್ರಿಯಲ್ ಶಿಷ್ಟಸಂಹಿತೆಯ ಶಿಸ್ತುಪಾಲನೆ ಇದೇ ರೀತಿ ಮುಂದುವರಿದರೆ, 2066ರ ವೇಳೆಗೆ 1980ರಲ್ಲಿದ್ದ ವಿಸ್ತಾರಕ್ಕೇ ಓಜೋನ್ ರಂಧ್ರ ಮರಳುತ್ತದೆ. ಜಗತ್ತಿನ ಉಳಿದ ಪ್ರದೇಶಗಳಲ್ಲೂ ಇಂಥದ್ದೇ ಸುಧಾರಣೆಯನ್ನು ನಿರೀಕ್ಷಿಸಬಹುದು. 37 ವರ್ಷಗಳ ಹಿಂದೆ ಆದ ಒಪ್ಪಂದದ ಸತತ ಮತ್ತು ಕಟ್ಟುನಿಟ್ಟಿನ ಜಾರಿಯ ಫಲವಿದು.

ಪೂರ್ವ ಆಫ್ರಿಕಾದ ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ 2016ರ ಅಕ್ಟೋಬರ್ 15ರಂದು 28ನೇ ಸಭೆ ನಡೆಯಿತು. ಮಾಂಟ್ರಿಯಲ್ ಒಪ್ಪಂದಕ್ಕೆ ಅಲ್ಪ ತಿದ್ದುಪಡಿಯಾಗಿ ಜಾರಿಗೆ ಬಂದದ್ದೇ ‘ಕಿಗಾಲಿ ಒಪ್ಪಂದ’. ಅದರಂತೆ ಸಿಎಫ್ಸಿ ಬದಲು ಹೈಡ್ರೊಫ್ಲೂರೊಕಾರ್ಬನ್ಗಳನ್ನು (ಎಚ್ಎಫ್ಸಿ) ಉಪಯೋಗಿಸತೊಡಗಿದ್ದು ಉತ್ತಮ ಹೆಜ್ಜೆ. ಆದರೆ ಅವನ್ನು ಬಳಸುವುದರಿಂದ ಜಾಗತಿಕ ಉಷ್ಣತೆ ಏರುತ್ತದೆ ಎಂಬುದೇ ಸವಾಲು. ಭಾರತದಲ್ಲಿ ಎಚ್ಎಫ್ಸಿ ಬಳಕೆಗೂ ಕಡಿವಾಣ ಹಾಕಿ, 2030ರ ವೇಳೆಗೆ ಮಹತ್ತರ ಗುರಿ ತಲುಪುವ ಆಶಯವಿದೆ.

ಓಜೋನ್ ಪದರದ ಸವಕಳಿ ನಿಯಂತ್ರಣಕ್ಕೆ ಬಂದದ್ದು ಪರಿಸರದ ಇತಿಹಾಸದಲ್ಲಿ ಅನನ್ಯ ಮಜಲು. ಪ್ರಯತ್ನದಲ್ಲಿ ಏರಿಳಿತಗಳು ಸಹಜ. ವಿಜ್ಞಾನ ಮತ್ತು ರಾಜಕೀಯ ಇಚ್ಛಾಶಕ್ತಿ ಒಂದಾದರೆ ಜಗತ್ತನ್ನೇ ಸುಧಾರಿಸಬಹುದು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮಗಳ ಕಾರ್ಯದರ್ಶಿ ಮೆಗ್ ಸೆಕಿ ಹೇಳುತ್ತಾರೆ ‘ಸಾರ್ವತ್ರಿಕ ಕ್ರಿಯೆಗೆ ವಿಜ್ಞಾನವೇ ತಳಹದಿ. ಜಾಗತಿಕವಾಗಿ ಪರಿಸರ ಎದುರಿಸುವ, ಮೇಲ್ನೋಟಕ್ಕೆ ಪರಿಹಾರ ದುಸ್ತರವೆಂದು ತೋರುವ ಸಮಸ್ಯೆಯೂ ಅದಕ್ಕೆ ಮಣಿಯುತ್ತದೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.