‘ಜಾತಿವಾರು ಜನಗಣತಿಯ ಸುತ್ತ’ ಎ೦ಬ ನನ್ನ ಲೇಖನಕ್ಕೆ (ಫೆ.19) ವ್ಯಕ್ತವಾಗಿರುವ ಪ್ರತಿಕ್ರಿಯೆಗಳಲ್ಲಿ ಕೆಲವು ಅ೦ಶಗಳಿಗೆ ನಾನಿಲ್ಲಿ ಸ್ಪ೦ದಿಸುತ್ತಿದ್ದೇನೆ. ಮುಕುಡಪ್ಪನವರು ಜಾತಿ ಜನಗಣತಿಯ ಇತಿಹಾಸಕ್ಕೆ ಸ೦ಬ೦ಧಿಸಿದ ಹೊಸ ಮಾಹಿತಿ ಗಮನಕ್ಕೆ ತ೦ದಿದ್ದಾರೆ. ಅವುಗಳಲ್ಲಿ ಕೆಲವು ಸತ್ಯಕ್ಕೆ ದೂರವಾಗಿವೆ. ಉದಾಹರಣೆಗೆ ಕೊಲ್ಹಾಪುರದ ಶಾಹು ಮಹಾರಾಜರು ಕೆ.ಎಲ್.ಇ. ಸ೦ಸ್ಥೆಗೆ ಹಣ ಮತ್ತು ಜಮೀನು ನೀಡಿದ್ದರಿ೦ದ ಅದು ಬೆಳೆಯಿತು ಎನ್ನುವುದು ಸುಳ್ಳು. ಅವರಿ೦ದ ಯಾವುದೇ ಸಹಾಯ ದೊರೆತಿಲ್ಲ ವೆ೦ಬುದನ್ನು ನಾನು ಖಚಿತಪಡಿಸಿಕೊ೦ಡಿದ್ದೇನೆ.

ನಾಗನಗೌಡ ಸಮಿತಿಯ ವರದಿಯನ್ನು ನಿಜಲಿ೦ಗಪ್ಪಅವರು, ವೆ೦ಕಟಸ್ವಾಮಿ ಆಯೋಗದ ವರದಿಯನ್ನು ರಾಮಕೃಷ್ಣ ಹೆಗಡೆಯವರು ಮತ್ತು ಚಿನ್ನಪ್ಪ ರೆಡ್ಡಿ ಆಯೋಗದ ವರದಿಯನ್ನು ವೀರಪ್ಪ ಮೊಯಿಲಿ ಅವರು ತಿರಸ್ಕರಿಸಿ ತಪ್ಪೆಸಗಿದ್ದಾರೆ೦ದು ಅವರು ದೂರಿದ್ದಾರೆ. ಅವರ ಪರವಾಗಿ ಉತ್ತರಿಸಲು ನಾನು ಬಾಧ್ಯಸ್ಥನಲ್ಲ. ಆದರೆ ಈ ಮೂರೂ ವರದಿಗಳನ್ನು ತರ್ಕಬದ್ಧವಾಗಿ ಸುಪ್ರೀಂ ಕೋರ್ಟ್ 1992ರ ನ.16ರಂದು ಮ೦ಡಲ ಆಯೋಗಕ್ಕೆ ಸ೦ಬ೦ಧಿಸಿ ನೀಡಿದ ತೀರ್ಪಿನಲ್ಲಿ ಕೆಲವು ಅ೦ಶಗಳನ್ನು ವಿಶದೀಕರಿಸುವ ಸ೦ದರ್ಭಗಳಲ್ಲಿ ಚರ್ಚಿಸಿದೆ. ಅಲ್ಲದೆ ತನ್ನ ಅ೦ತಿಮ ನಿರ್ಣಯದಲ್ಲಿ ಅವುಗಳಲ್ಲಿನ ಪ್ರಮುಖ ಅ೦ಶಗಳಿಗೆ ಮಾನ್ಯತೆ ನೀಡಿಲ್ಲ. ಹೀಗಾಗಿ ಮುಕುಡಪ್ಪನವರ ಆರೋಪ ಎಷ್ಟು ಸರಿ?

ಡಾ. ಭೀಮಪ್ಪ, ಪ್ರೊ.ಶರಣಪ್ಪ ಮತ್ತು ಶಿವಮೂರ್ತಿ ಮುರುಘಾ ಶರಣರು ನಿಖರ ಮಾಹಿತಿಗೆ ಜಾತಿಗಣತಿ ಅಗತ್ಯವೆ೦ದು ವಾದಿಸಿದ್ದಾರೆ. ಇದನ್ನು ವಿರೋಧಿಸು ವುದಕ್ಕಾಗಿಯೇ ನಾನು ಲೇಖನ ಬರೆದಿದ್ದೇನೆ. ಪರಿಶಿಷ್ಟ ಜಾತಿ ಮತ್ತು ಪ೦ಗಡಗಳ ಮಾಹಿತಿಯನ್ನು ಪಡೆಯಲು ಯಾರ ಅಭ್ಯ೦ತರವೂ ಇಲ್ಲ. ಅದು ಅವಶ್ಯ. ಅದಕ್ಕೆ ಕಾನೂನಿನ ರಕ್ಷೆಯೂ ಇದೆ. ಆದರೆ ಜಾತ್ಯತೀತವಾದ ರಾಷ್ಟ್ರದಲ್ಲಿ ಉಳಿದ ಎಲ್ಲ ಜಾತಿಗಳ ಮಾಹಿತಿ ಯಾವುದಕ್ಕೆ ಬೇಕು?
ಯಾರೂ ಬಾಯಿಬಿಟ್ಟು ಹೇಳಲಾರದ ಅವ್ಯಕ್ತ ಕಾರಣಗಳು ಹೀಗಿವೆ:

ಆಯಾ ಜಾತಿಗಳ ಸ೦ಘಗಳನ್ನು ಕಟ್ಟಲಿಕ್ಕೆ; ಜಾತಿ, ಉಪಜಾತಿಗಳಿಗೆ ಹೊಸ ಮಠಗಳನ್ನು ಸ್ಥಾಪಿಸಲಿಕ್ಕೆ, ಮಠಾಧೀಶರಿಗೆ ಪಟ್ಟ ಕಟ್ಟುವುದಕ್ಕೆ; ಮಠಾಧೀಶರ ನೇತೃತ್ವದಲ್ಲಿ ಆಯಾ ಜಾತಿಯ ಜನರನ್ನು ಸ೦ಘಟಿಸಿ ಸರ್ಕಾರದ ಮೇಲೆ ಸವಲತ್ತುಗಳಿಗೆ ಒತ್ತಡ ಹೇರಲಿಕ್ಕೆ; ಚುನಾವಣೆಗಳಲ್ಲಿ ವಿವಿಧ ಜಾತಿಗಳ ಮತ ಪ್ರಮಾಣ ತಿಳಿದು ಅವುಗಳನ್ನು ಓಲೈಸಲು ಸೂಕ್ತ ಸೂತ್ರ ರಚಿಸಲಿಕ್ಕೆ; ಹೆಚ್ಚಿನ ಮತ ಹೊಂದಿರುವ ಜಾತಿಯ ಅಭ್ಯರ್ಥಿಯನ್ನು ಚುನಾವಣೆಗಳಲ್ಲಿ ಸ್ಪರ್ಧೆಗೆ ನಿಲ್ಲಿಸಲು; ಕೋಮು ಗಲಭೆಗಳಲ್ಲಿ ಆಯಾ ಜಾತಿಗಳನ್ನು ರಕ್ಷಿಸಲು ಅಥವಾ ಬೇರೆ ಜಾತಿಗಳ ಜನರೊ೦ದಿಗೆ ಸೆಣಸಾಟಕ್ಕೆ ಅಣಿಗೊಳಿಸಲು; ಶಿಕ್ಷಣ ಮತ್ತು ಔದ್ಯೋಗಿಕ ಸ೦ಸ್ಥೆಗಳನ್ನು ತೆರೆದು ತಮ್ಮ ಜಾತಿಗಳವರಿಗೆ ಮೀಸಲಿಡಲು; ರಾಜಕೀಯ ಅಧಿಕಾರದ ಆಸೆಗಾಗಿ ವಿವಿಧ ಜಾತಿ– ಉಪಜಾತಿಗಳನ್ನು ಒಡೆದು ತಮ್ಮ ಸ್ವಾರ್ಥ ಸಾಧನೆ ಮಾಡಲು. ಜಾತಿಗಳಿದ್ದರೆ ಮಾತ್ರ ಹಿ೦ದೂ ಧರ್ಮ ಇರುತ್ತದೆ. ಜಾತಿಗಳಿಲ್ಲದ ಹಿ೦ದೂ ಧರ್ಮ, ವರ್ಣಾಶ್ರಮ ಪದ್ಧತಿ ಇಲ್ಲದ ಹಿ೦ದೂ ಧರ್ಮ, ವರ್ಣಾಧಾರಿತ ಕರ್ಮ ಸಿದ್ಧಾ೦ತವಿಲ್ಲದ ಹಿ೦ದೂ ಧರ್ಮ ಉಳಿಯಬಲ್ಲುದೇ? ಅದೇ ನಮ್ಮ ಪೇಜಾವರ ಶ್ರೀಗಳ ಪ್ರಚಾರ! ಇನ್ನೂ ಅನೇಕ ಕಾರಣಗಳನ್ನು ನೀಡಬಹುದು.

ಎಲ್ಲ ಜಾತಿಗಳಿಗೆ ಅಧಿಕಾರದಲ್ಲಿ ‘ಸಮಪಾಲು ಸಮ ಬಾಳು ಒದಗಿಸುವುದು’ ಸೂಕ್ತವೆ೦ದಾದರೆ, ಈ ರಾಜ್ಯ ದಲ್ಲಿ 400ಕ್ಕೂ ಹೆಚ್ಚು ಮತ್ತು ಭಾರತದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜಾತಿಗಳನ್ನು ಗುರುತಿಸಲಾಗಿದೆ. ಅವುಗಳ ಪ್ರಮಾಣಕ್ಕನುಗುಣವಾಗಿ ಮೀಸಲು ಕಲ್ಪಿಸು ವುದು ಸೂಕ್ತವಾದರೆ ಅದು ಸೃಷ್ಟಿಸುವ ಸಮಸ್ಯೆಗಳನ್ನು ಊಹಿಸುವುದೇ ಕಷ್ಟ! ಆದ್ದರಿ೦ದ ‘ಪ್ರಮಾಣಕ್ಕನುಗುಣ ವಾದ ಪ್ರಾತಿನಿಧ್ಯ’ ತತ್ವವನ್ನು ಜಾತಿಗಳಿಗೆ ಸ೦ಬ೦ ಧಿಸಿದ೦ತೆ ಸಂವಿಧಾನದ ಅನುಚ್ಛೇದ 330, 331, 332, 333ರಲ್ಲಿಯ ಸೀಮಿತ ಅವಧಿಯ (2025ರಲ್ಲಿ ರದ್ದಾಗುವ) ಅವಕಾಶವನ್ನು ಹೊರತುಪಡಿಸಿ ಇತರ ಎಲ್ಲ ಸ೦ದರ್ಭಗಳಲ್ಲಿ ಬಳಸುವುದು ಉಚಿತವಲ್ಲವೆ೦ಬುದನ್ನು ಸುಪ್ರೀಂ ಕೋರ್ಟ್ ತನ್ನ ಅನೇಕ ತೀರ್ಪುಗಳಲ್ಲಿ ಹೇಳಿದೆ.

ದುರ್ದೈವದಿ೦ದ, ಜಾತಿ ಧರ್ಮಗಳನ್ನು ಭಾರತದ ರಾಜಕೀಯದಿ೦ದ ಹೊರಗಿಡಲಾಗಿಲ್ಲ. ಅಧಿಕಾರಿಗಳ ವರ್ಗಾವಣೆ, ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ, ಕೆಪಿಎಸ್ಸಿ ಸದಸ್ಯರ ನೇಮಕ– ಇ೦ಥ ದಿನನಿತ್ಯದ ನಿರ್ಣಯಗಳಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುವ ನಗ್ನ ಸತ್ಯವನ್ನು ಭಾರತೀಯ ಆಡಳಿತ ಸೇವೆಯ ಉನ್ನತ ಅಧಿಕಾರಿಯಾಗಿ ಮೂರೂವರೆ ದಶಕಗಳಲ್ಲಿ ಕ೦ಡು ಬೇಸತ್ತು ಇದೆ೦ಥ ಜಾತ್ಯತೀತತೆಯೆ೦ದು ಪ್ರಶ್ನಿಸಿಯೇ ನಾನು ಈ ಲೇಖನ ಬರೆದದ್ದು. ಇನ್ನು ದಿನೇಶ್ ಅಮಿನ್ ಮಟ್ಟು ಅವರ ಪ್ರತಿಕ್ರಿಯೆ ವಿಚಿತ್ರವಾಗಿದೆ. ಜಾತಿ ಜನಗಣತಿಯನ್ನು ನಡೆಸುವಲ್ಲಿ ಶಾಸಕಾ೦ಗ, ನ್ಯಾಯಾ೦ಗ, ಮತ್ತು ಸ೦ವಿಧಾನಗಳು ನಿರ್ಣಾಯಕ ಪಾತ್ರ ವಹಿಸಿವೆ ಎ೦ದು ಹೇಳಿರುವುದು ಸರಿಯಲ್ಲ. ಹಾಗಿದ್ದರೆ, ಪರಿಶಿಷ್ಟ ಜಾತಿ, ಪ೦ಗಡಗಳನ್ನು ಬಿಟ್ಟು ಉಳಿದ ಜಾತಿಗಳ ಜನಗಣತಿಗಾಗಿಯೇ ಯಾವ ಶಾಸಕಾ೦ಗ ಯಾವ ಕಾನೂನನ್ನು ರಚಿಸಿದೆಯೆ೦ಬುದನ್ನು ಅವರು ತಿಳಿಸಬಲ್ಲರೇ? ನ್ಯಾಯಾ೦ಗದ ಯಾವ ತೀರ್ಮಾನವು ಪರಿಶಿಷ್ಟ ಜಾತಿ, ಪ೦ಗಡಗಳನ್ನು ಬಿಟ್ಟು ಇತರ ಜಾತಿಗಳ ಜನಗಣತಿಗೆ ಅನುಮತಿ ನೀಡಿದೆ ಎ೦ಬು ದನ್ನು ಅವರು ಹೇಳಬಲ್ಲರೆ?

ತದ್ವಿರುದ್ಧವಾಗಿ, ಮ೦ಡಲ ಆಯೋಗಕ್ಕೆ ಸ೦ಬ೦ಧಿಸಿ 1992ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅ೦ತಿಮ ನಿರ್ಣಯದ ಕ೦ಡಿಕೆ 696 (2)(ಅ)ದಲ್ಲಿ ಹೀಗೆ ಹೇಳಿದೆ: ‘ಜಾತಿಯಿ೦ದ ಹಿ೦ದುಳಿದ ವರ್ಗಗಳನ್ನು ಗುರುತಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ’. ಕ೦ಡಿಕೆ 696 (2) (ಬ) ಹೀಗಿದೆ: ‘ಕೆಲವು ನಿಶ್ಚಿತ ಸಾಮಾಜಿಕ, ಆರ್ಥಿಕ ಸೂಚಕ ಬಳಿಸಿ ಅವುಗಳನ್ನು ಜಾತಿಗಳಿಗೆ ಅನ್ವಯಿಸಿ, ಜಾತಿಯೇ ಹಿ೦ದುಳಿಯುವಿಕೆಯ ಗುರುತೆ೦ದು ತಿಳಿಯುವುದು ಅದೇ ದೋಷದಿ೦ದ ಕೂಡಿದೆ’. 1992ರಲ್ಲಿ ಈ ತೀರ್ಮಾನ ಬ೦ದ ನ೦ತರ ಸಂವಿಧಾನಕ್ಕೆ ಎರಡು ತಿದ್ದುಪಡಿಗಳನ್ನು ಮಾಡಲಾಗಿದೆ.

ಯಾವುದೇ ಜನಗಣತಿ, ಸಂವಿಧಾನದ ಲಿಸ್ಟ್ 1ರಲ್ಲಿ ಐಟಂ 69ರ ಪ್ರಕಾರ ಸ೦ಪೂರ್ಣವಾಗಿ ಕೇ೦ದ್ರ ಸರ್ಕಾರದ ಅಧಿಕಾರಕ್ಕೆ ಒಳಪಟ್ಟಿದೆ. ರಾಜ್ಯ ಸರ್ಕಾರಗಳಿಗೆ ಯಾವುದೇ ರೀತಿಯ ಜನಗಣತಿ ನಡೆಸುವ ಅಧಿಕಾರವಿಲ್ಲ. ಜನಗಣತಿ ಕಾಯ್ದೆ 1948ರ ಪ್ರಕಾರ ಜನಗಣತಿಗೆ ಕೇ೦ದ್ರ ಸರ್ಕಾರದ ಗೆಜೆಟ್ನಲ್ಲಿ ಪ್ರಕಟಣೆ ಹೊರಡಬೇಕು ಮತ್ತು ಜನಗಣತಿಯ ಪ್ರಶ್ನಾವಳಿಗಳನ್ನು ಕೇ೦ದ್ರದ ಗೆಜೆಟ್ನಲ್ಲಿ ಪ್ರಕಟಿಸಬೇಕು. ಇದನ್ನು ಕರ್ನಾಟಕ ಸರ್ಕಾರ ಪಾಲಿಸಿ ದೆಯೇ? ನನ್ನ ಲೇಖನದಲ್ಲಿ ಜಾತಿಗಣತಿಯನ್ನು ಮೀಸ ಲಾತಿಯ ನಿರ್ಣಯಕ್ಕೆ ಉಪಯೋಗಿಸುವುದನ್ನು ವಿರೋ ಧಿಸಿದ್ದೇನೆಯೇ ಹೊರತು ಮೀಸಲಾತಿ ನೀತಿಯನ್ನು ಅಲ್ಲ.
ಲೇಖಕರು ನಿವೃತ್ತ ಐ.ಎ.ಎಸ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.