ಬೆಂಗಳೂರು, ಅ. 17– ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸಂಪುಟದ ಸದಸ್ಯರಾಗಿ ಒಟ್ಟು 42 ಮಂದಿ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನಸೌಧದ ಮುಖ್ಯ ದ್ವಾರದ ಎದುರು ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಸಂಪುಟ ದರ್ಜೆಯ 24 ಸಚಿವರು, ಸ್ವತಂತ್ರ ನಿರ್ವಹಣೆಯ 9 ಮಂದಿ ರಾಜ್ಯ ಸಚಿವರು ಮತ್ತು 9 ಜನ ರಾಜ್ಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಇದರಿಂದಾಗಿ ಗಜಗಾತ್ರದ ಸಂಪುಟ ಮತ್ತೊಮ್ಮೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಂತಾಯಿತು.

ಭಾರತದ ಗಡಿಯಿಂದ ಪಾಕ್ ಸೇನೆ ವಾಪಸ್: ಮುಷರಫ್

ಇಸ್ಲಾಮಾಬಾದ್, ಅ. 17 (ಪಿಟಿಐ)–ಭಾರತ–ಪಾಕಿಸ್ತಾನ ಗಡಿಯುದ್ದಕ್ಕೂ ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡು ಉದ್ರಿಕ್ತತೆಯನ್ನು ಶಮನಗೊಳಿಸುವುದಾಗಿ ಪಾಕಿಸ್ತಾನದ ಸೇನಾ ಆಡಳಿತದ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಇಂದು ಪ್ರಕಟಿಸಿದರು.

ಅವರು ದೇಶವನ್ನುದ್ದೇಶಿಸಿ ಪ್ರಸಾರ ಭಾಷಣ ಮಾಡುತ್ತ, ಭಾರತದೊಡನೆ ಎಲ್ಲ ವಿಷಯಗಳ ಬಗೆಗೂ ‘ಫಲಿತಾಂಶ ಸಾಧ್ಯ’ವಾಗುವ ಮಾತುಕತೆಗಳನ್ನು ನಡೆಸಲು ತಮ್ಮ ಸರ್ಕಾರ ಸಿದ್ಧ ಎಂದು ಪ್ರಕಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.