ಒರಿಸ್ಸಾ ಚಂಡಮಾರುತ ಸಾವಿರಾರು ಸಾವು

ಭುವನೇಶ್ವರ, ಅ. 30 (ಪಿಟಿಐ, ಯುಎನ್ಐ)– ಶುಕ್ರವಾರ ಒರಿಸ್ಸಾಕ್ಕೆ ಅಪ್ಪಳಿಸಿದ ಭಾರಿ ಚಂಡಮಾರುತಕ್ಕೆ ಸಾವಿರಾರು ಜನರು ಬಲಿಯಾಗಿದ್ದು, ಸುಮಾರು 15 ದಶಲಕ್ಷ ಜನರು ಮನೆ– ಮಠ ಕಳೆದುಕೊಂಡು ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಚಂಡಮಾರುತಕ್ಕೆ ಸಿಕ್ಕಿ ಕಣ್ಮರೆಯಾದ 400ಕ್ಕೂ ಹೆಚ್ಚು ಮಂದಿ ಮೀನುಗಾರರು ಪತ್ತೆಯಾಗಿಲ್ಲ. ಬಿರುಸಾದ ಗಾಳಿ ಮತ್ತು ಸತತ ಮಳೆ ಎರಡನೇ ದಿನವಾದ ಇಂದೂ ಮುಂದುವರಿದಿದ್ದು, ಪರಿಹಾರ ಕಾರ್ಯಾಚರಣೆ ತೀವ್ರ ಪ್ರತಿರೋಧವೊಡ್ಡಿವೆ.

ಪುಸ್ತಕ ಖರೀದಿಸದ ಗ್ರಂಥಾಲಯ ಇಲಾಖೆ

ಬೆಂಗಳೂರು, ಅ. 29– ಸಾರ್ವಜನಿಕ ಗ್ರಂಥಾಲಯ ಇಲಾಖೆ ಪ್ರಸ್ತುತ ಸಾಲಿನಲ್ಲಿ ಒಂದೇ ಒಂದು ಪುಸ್ತಕವನ್ನೂ ಖರೀದಿಸಿಲ್ಲ ಎಂಬ ಆರೋಪ ಪ್ರಕಾಶಕರ ವಲಯದಿಂದ ಕೇಳಿಬರುತ್ತಿದೆ.

ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿಯಾದರೂ ಪುಸ್ತಕಗಳನ್ನು ಖರೀದಿಸಬೇಕಾದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಈ ವರ್ಷ ಹತ್ತು ತಿಂಗಲು ಕಳೆದರೂ ಒಂದೇ ಒಂದು ಪುಸ್ತಕವನ್ನು ಖರೀದಿಸದೆ ಇರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ.

ನಿಯಮಾವಳಿಯ ಅನುಸಾರ ಆಯಾ ವರ್ಷ ಕೊಳ್ಳಬೇಕಾದ ಪುಸ್ತಕಗಳ ಕುರಿತು ನಿರ್ಧರಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುತ್ತದೆ. ಈ ವರ್ಷದ ಪುಸ್ತಕ ಆಯ್ಕೆ ಸಮಿತಿಗೆ ವಿಮರ್ಶಕ ಜಿ.ಎಚ್.ನಾಯಕ ಅವರು ಅಧ್ಯಕ್ಷರಾಗಿದ್ದಾರೆ.

ಪ್ರಸ್ತುತ ವರ್ಷದಲ್ಲಿ ಈ ಸಮಿತಿ ಹಲವಾರು ಬಾರಿ ಸಭೆ ಸೇರಿದ್ದು ಮಾತ್ರವಲ್ಲದೆ ಕೊಳ್ಳಬೇಕಾದ ಪುಸ್ತಕಗಳ ಪಟ್ಟಿಯನ್ನೂ ಇಲಾಖೆಗೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.