‘ತಮಿಳುನಾಡೂ ನಮ್ಮ ಸಂಕಷ್ಟ ಹಂಚಿಕೊಳ್ಳಲಿ’

ಬೆಂಗಳೂರು, ಸೆ. 17– ಕಾವೇರಿ ಕಣಿವೆಯಲ್ಲಿ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಜಲಾಶಯಗಳಲ್ಲಿ ನೀರು ಸಂಗ್ರಹಣೆ ಪ್ರಮಾಣ ಕಡಿಮೆಯಾಗಿರುವ ಹಾಲಿ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲವೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಸ್ಪಷ್ಟಪಡಿಸಿದೆ.

ಈ ಬಾರಿ ಸಾಕಷ್ಟು ಮಳೆಯಾಗದೆ ನಿರ್ಮಾಣವಾಗಿರುವ ಸಂಕಷ್ಟವನ್ನು ಎರಡೂ ರಾಜ್ಯಗಳು ಸಮಾನವಾಗಿ ಹಂಚಿಕೊಳ್ಳುವುದು ಅನಿವಾರ್ಯವಾಗಿದೆ ಎಂದೂ ತಿಳಿಸಿದೆ.

ತವರಿಗೆ ಮರಳಿದ ಬಂಧಿತ ಸೈನಿಕರು

ಇಸ್ಲಾಮಾಬಾದ್, ಸೆ. 17 – ಪಾಕಿಸ್ತಾನದ ಸೆರೆಯಿಂದ 17 ದಿನಗಳ ಬಳಿಕ ಮುಕ್ತವಾದ ಭಾರತದ ಇಬ್ಬರು ಸೈನಿಕರನ್ನು ವಾಘಾ ಗಡಿಯಲ್ಲಿ ಭಾರತೀಯ ಸೇನಾಧಿಕಾರಿಗಳಿಗೆ ಪಾಕಿಸ್ತಾನ ಹಸ್ತಾಂತರಿಸಿತು.

ಪಾಕಿಸ್ತಾನದಿಂದ ನಿರ್ಗಮನ ಪ್ರಮಾಣ ಪತ್ರ ಪಡೆದ ಭಾರತದ ಲ್ಯಾನ್ಸ್ ನಾಯಕ್ ರಾಮ್ ಸಿಂಗ್ ಮತ್ತು ಸಿಪಾಯಿ ಬಜಿಂದರ್ ಸಿಂಗ್ ಅವರು ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.