ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಗಾಂಧೀಜಿ ಬರೆದಿದ್ದ ಅಪ್ರಕಟಿತ ಪತ್ರಗಳು ₹21 ಸಾವಿರಕ್ಕೆ ಮಾರಾಟ

Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
ಅಕ್ಷರ ಗಾತ್ರ

ಗಾಂಧೀಜಿ ಬರೆದಿದ್ದ 30 ಅಪ್ರಕಟಿತ ಪತ್ರಗಳು 21 ಸಾವಿರ ರೂ.ಗೆ ಮಾರಾಟ

ಲಂಡನ್, ಜೂನ್ 30– ಮಹಾತ್ಮಗಾಂಧಿ ಅವರು ತಮ್ಮ ಆಪ್ತ ಮಿತ್ರ ಕಲ್ಲೆನ್‌ಬಾಷ್ ಅವರಿಗೆ ಬರೆದಿದ್ದ 30 ಅಪ್ರಕಟಿತ ಪತ್ರಗಳ ಸರಣಿಯೊಂದನ್ನು ಲಂಡನ್ನಿನ ಖ್ಯಾತ ಹರಾಜು ಮಾರಾಟಗಾರರಾದ ಸೋಥಬೀಸ್ ಸಂಸ್ಥೆಯವರು ಈ ವಾರ 1200 ಪೌಂಡುಗಳಿಗೆ (21,600) ಮಾರಾಟ ಮಾಡಿದ್ದಾರೆ.

ಅಪರೂಪದ ಪುಸ್ತಕಗಳ ಸಂಗ್ರಹಣೆಗೆ ಹೆಸರಾದ ಮ್ಯಾಗ್ಸ್ ಸಂಸ್ಥೆಯವರು ಕೊಂಡ ಈ ಪತ್ರಗಳಲ್ಲಿ ಎರಡಕ್ಕೆ ಗಾಂಧಿ ಅವರು ‘ಎಂ.ಕೆ.ಜಿ.’ ಎಂದೂ, ಉಳಿದವಕ್ಕೆ ‘ಹಳೇ ಮಿತ್ರ’ ಎಂದೂ ಸಹಿ ಹಾಕಿದ್ದಾರೆ.

ವಿಶಿಷ್ಟ ಶಿಕ್ಷೆ

ನ್ಯೂಯಾರ್ಕ್, ಜೂನ್ 20– ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಕೊಲೆ ಮಾಡಿದ ಅಪರಾಧಕ್ಕಾಗಿ ವೈದ್ಯರೊಬ್ಬರಿಗೆ ಎರಡು ವರ್ಷ ಕಾಲ ಜೈಲಿನಲ್ಲಿ ವೈದ್ಯನಾಗಿ ದುಡಿಯುವ ವಿಶಿಷ್ಟ ಶಿಕ್ಷೆಯನ್ನು ವಿಧಿಸಲಾಗಿದೆ.

ಜೈಲಿನಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವೈದ್ಯನಾಗಿ ದುಡಿಯುವ ಈ ಶಿಕ್ಷೆ ನೀಡಿಕೆಯಿಂದ ನ್ಯಾಯಕ್ಕೆ ಹಾಗೂ ಮಾನವೀಯತೆಗೆ ಸೂಕ್ತ ಪುರಸ್ಕಾರ ನೀಡಿದಂತಾಗಿದೆ ಎಂದು ಬ್ರಾಂಕ್ಸ್‌ ಜಿಲ್ಲಾ ಅಟಾರ್ನಿ ಮಾರಿಯೋ ಮರೋಲಾ ತಿಳಿಸಿದ್ದಾರೆ.

ಅಪರಾಧಿಯನ್ನು ‍ಪ್ರತೀಕಾರ ದೃಷ್ಟಿಯಿಂದ ಶಿಕ್ಷಿಸುವ ಬದಲು, ಸೂಕ್ತ ಶಿಕ್ಷೆಯ ಜತೆಗೆ ಆತ ನಿಗೆ ಮರುವಸತಿ ಕಲ್ಪಿಸಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದೂ ಅವರು ತಿಳಿಸಿದ್ದಾರೆ. ಅವರ ಶಿಫಾರಸು ಮೇರೆಗೆ 50 ವರ್ಷ ವಯಸ್ಸಿನ ಡಾ. ಮಾರಿಸ್ ಹೆಲ್ಟರ್‌ಗೆ ಮಾಮೂಲಾಗಿ ಏಳು ವರ್ಷ ಜೈಲು ವಾಸದ ಬದಲು ಈ ಅಪರೂಪದ ಶಿಕ್ಷೆಯನ್ನು ಕೋರ್ಟು ವಿಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT