ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಇಂದಿರಾ ನಿವಾಸಕ್ಕೆ ಐವತ್ತು ಸಹಸ್ರ ಜನರ ಬೃಹತ್ ಮೆರವಣಿಗೆ

Published : 6 ಅಕ್ಟೋಬರ್ 2024, 23:30 IST
Last Updated : 6 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ನವದೆಹಲಿ, ಅ. 6– ರಾಷ್ಟ್ರದ ಕಾಂಗ್ರೆಸ್ ದುರಾಡಳಿತದ ವಿರುದ್ಧ ಕಮ್ಯುನಿಸ್ಟೇತರ ವಿರೋಧ ಪಕ್ಷಗಳು ಆರಂಭಿಸಿರುವ ಚಳವಳಿ  ಪ್ರಾರಂಭದ ಸಂಕೇತವಾಗಿ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾದ ಜೆ.ಬಿ.ಕೃಪಲಾನಿ ಅವರು ಇಂದು ಇಲ್ಲಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ನಿವಾಸಕ್ಕೆ ಭಾರಿ ಮೆರವಣಿಗೆ ಕೊಂಡೊಯ್ದರು.

ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್‌ ಅವರ 50 ಸಾವಿರ ಮಂದಿ ಬೆಂಬಲಿಗರ ಮೆರವಣಿಗೆಯು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ  ರಾಮಲೀಲಾ ಮೈದಾನದಿಂದ ಆರಂಭವಾಯಿತು.

ಚಿನ್ನ: ಕೋಟಿಗಟ್ಟಲೆ ಕಪ್ಪುಹಣದ ಮೂಲ

ಮುಂಬಯಿ, ಅ. 6– ಈ ವರ್ಷದ ಆದಿಯವರೆಗೆ ಕಳ್ಳಸಾಗಾಣಿಕೆದಾರರು ಬಂಗಾರದ ಕಳ್ಳಸಾಗಾಣಿಕೆ ಒಂದರಿಂದಲೇ ವರ್ಷಕ್ಕೆ ನೂರು ಕೋಟಿ ರೂಪಾಯಿ ಕಪ್ಪುಹಣ ಸಂಪಾದಿಸುತ್ತಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ವರ್ಷದ ಆದಿಯಲ್ಲಿ ಸುಮಾರು ಎಪ್ಪತ್ತು ಸಾವಿರ ಕೆ.ಜಿ ಚಿನ್ನವನ್ನು ಅಕ್ರಮವಾಗಿ ತರಲಾಗಿದೆ ಎಂದು ಸರ್ಕಾರಕ್ಕೆ ಬಂದಿರುವ ರಹಸ್ಯ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT