ಬೆನಜೀರ್ ಕರೆಯಂತೆ ಕಾಶ್ಮೀರ ಬಂದ್ ಪಾಕ್ ವಿರುದ್ಧ ಭಾರಿ ಪ್ರದರ್ಶನ

ಶ್ರೀನಗರ, ಫೆ. 5 (ಯುಎನ್‌ಐ, ಪಿಟಿಐ)– ಕಾಶ್ಮೀರದಲ್ಲಿ ಜನಮತಗಣನೆಗೆ ಒತ್ತಾಯಿಸಿಪಾಕಿಸ್ತಾನ ಸರ್ಕಾರ, ಹರಿಯತ್ ಕಾನ್ಫರೆನ್ಸ್ ಹಾಗೂ ಇತರ ಉಗ್ರಗಾಮಿ ಸಂಘಟನೆಗಳು ಇಂದು ಬಂದ್ ಆಚರಿಸಲು ನೀಡಿದ್ದ ಕರೆಯಿಂದಾಗಿ ಕಾಶ್ಮೀರ ಕಣಿವೆ ಯಲ್ಲಿ ಜನಜೀವನ ಸ್ತಬ್ಧವಾಗಿತ್ತು.

ಕಾಶ್ಮೀರದಲ್ಲಿ ಬಂದ್ ಶಾಂತಿಯುತವಾಗಿತ್ತು. ಆದರೆ ಜಮ್ಮು , ಲಡಾಖ್ ಪ್ರದೇಶಗಳಲ್ಲಿ ಸಾವಿರಾರು ಜನರು ಪಾಕಿಸ್ತಾನ ವಿರೋಧಿ ಮೆರವಣಿಗೆಗಳನ್ನು ನಡೆಸಿದರು. ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಮೆರವಣಿಗೆಯಲ್ಲಿ ಭಾಗವಹಿಸಿದ ಯುವಕರು ಘೋಷಣೆಗಳನ್ನು ಕೂಗಿದರು.

ಚಳಿಯಿಂದಲೂ ಲಾಭ

ಬೀಜಿಂಗ್, ಫೆ. 5 (ರಾಯಿಟರ್)– ಆಕಸ್ಮಿಕ ದುರ್ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬನ ಕೈಬೆರಳು ಕತ್ತರಿಸಿ, ಬೇರ್ಪಟ್ಟಿತು. ಸಾರಿಗೆ ವ್ಯವಸ್ಥೆ ಅಸಮರ್ಪಕವಾಗಿದ್ದ ಕಾರಣ ಆತನಿಗೆ ತನ್ನ ಕುಗ್ರಾಮದಿಂದ ಆಸ್ಪತ್ರೆಗೆ ಹೋಗಲು ವಾರ ಕಳೆದರೂ ಆಗಲಿಲ್ಲ.

ಆದರೆ ಆತ ಬುದ್ಧಿ ಉಪಯೋಗಿಸಿದ. ಬೆರಳಿನ ತುಂಡನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿ ಮನೆಯ ಹೊರಗಿಟ್ಟ. ಹೊರಗೋ ಅಸಾಧ್ಯ ಚಳಿ. ಶೂನ್ಯಕ್ಕಿಂತ 20 ಡಿಗ್ರಿ ಕಡಿಮೆ. ಹಾಗಾಗಿ ವಾರವಾದರೂ ಅದಕ್ಕೇ ನೂ ಆಗಲಿಲ್ಲ. ಬಳಿಕ ಅದನ್ನು ಹಿಡಿದು ಆಸ್ಪತ್ರೆಗೆ ಹೋದ. ವೈದ್ಯರು ಬೆರಳಿನ ತುಂಡನ್ನು ಯಶಸ್ವಿಯಾಗಿ ಜೋಡಿಸಿದರು. ಇದು ನಡೆದದ್ದು ಚೀನದ ಪಶ್ಚಿಮದ ಜಿಂಜಿಯಾಂಗ್ ಪ್ರಾಂತದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.