ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ಅಮೀರ್ ಅಹ್ಮದ್ ಎಂಬಾತ ಹಿಂದೆ ಸೈಕಲ್ ಪಂಕ್ಚರ್ ಅಂಗಡಿ ನಡೆಸುತ್ತಿದ್ದವ. ಈಗ ಪ್ರಶ್ನೆಪತ್ರಿಕೆ ಮಾರುವ ದಂಧೆಯ ಮೂಲಕವೇ ಕೋಟ್ಯಧಿಪತಿ ಆಗಿರುವ ಸುದ್ದಿ (ಪ್ರ.ವಾ., ಫೆ. 6) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಸಮೂಹಕ್ಕೆ ಆಘಾತ ಉಂಟುಮಾಡಿದೆ.

ಸರ್ಕಾರಿ ನೌಕರಿ ಹೊಂದುವುದು ಲಕ್ಷಾಂತರ ಅಭ್ಯರ್ಥಿಗಳ ಕನಸು. ಆದರೆ, ಅದು ನನಸಾಗುವ ಹಾದಿ ದಿನದಿಂದ ದಿನಕ್ಕೆ ಕಠಿಣವಾಗುತ್ತಿರುವ ಈ ಸ್ಪರ್ಧಾತ್ಮಕ ಯುಗದಲ್ಲಿ, ಗುರಿ ತಲುಪಲು ಹಗಲಿರುಳು ಶ್ರಮಿಸುವವರೂ ಇದ್ದಾರೆ. ಸರ್ಕಾರಿ ಉದ್ಯೋಗದ ಬೇಟೆಯಲ್ಲಿ ಕೆಲವರು ಅನುಸರಿಸುತ್ತಿರುವ ವಾಮಮಾರ್ಗಗಳು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಇಂತಹ ಎಷ್ಟೋ ಸ್ಪರ್ಧಾರ್ಥಿಗಳ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತವೆ.

ಪರೀಕ್ಷೆ ಹಾಗೂ ನೇಮಕಾತಿಯ ಸಂದರ್ಭದಲ್ಲಿ ಸರ್ಕಾರ ಇನ್ನೂ ಹೆಚ್ಚು ಎಚ್ಚರ ವಹಿಸಬೇಕು. ಇಂತಹ ಪ್ರಕರಣಗಳಿಗೆ ಕಾರಣರಾಗುವವರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಗಟ್ಟಿ ಸಂದೇಶ ರವಾನಿಸಬೇಕು. ಮುಂದೆ ಯಾರೂ ಆ ಹಾದಿ ತುಳಿಯದಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.