ರಾಜ್ಯ ಸರ್ಕಾರವು ಆರಂಭಿಸಹೊರಟಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಬಹುತೇಕವು ಬಹುಶಃ ಗ್ರಾಮೀಣ ಪರಿಸರದಲ್ಲಿ ಬಂದಾವು. ಇಂತಹ ಶಾಲೆಗಳಲ್ಲಿ ಬೋಧಕರನ್ನು ವಿಶೇಷ ರೀತಿಯಲ್ಲಿ ಆಯ್ಕೆ ಮಾಡಬೇಕಾಗುತ್ತದೆ. ಹಳ್ಳಿಯ ಮಕ್ಕಳು, ಗ್ರಾಮೀಣ ಪರಿಸರ, ಸ್ಥಳೀಯ ಸಮಸ್ಯೆಗಳ ಪರಿಜ್ಞಾನ ಹೊಂದಿದವರನ್ನು ಈ ಶಾಲೆಗಳಿಗೆ ಶಿಕ್ಷಕರನ್ನಾಗಿ ನೇಮಿಸಬೇಕು.

ಅಭ್ಯರ್ಥಿಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಹೊಂದಿದವರಾಗಿದ್ದಲ್ಲಿ ಇಂತಹ ಶಾಲೆಗಳಲ್ಲಿ ಸಮರ್ಪಕವಾಗಿ ಕಲಿಸಿಯಾರು. ಏಕೆಂದರೆ, ತಾವು ಇಂಗ್ಲಿಷ್ ಭಾಷೆಯನ್ನು ಕಲಿತುಕೊಳ್ಳುವಾಗ ಎದುರಿಸಿದ ತೊಡಕುಗಳ ಅರಿವು ಅವರಿಗೆ ಇರುತ್ತದೆ. ಆರಂಭದ ಶಿಕ್ಷಣದಲ್ಲಿ ಇಂಗ್ಲಿಷ್ನ ಸೋಂಕೇ ಇಲ್ಲದೆ, ತರುವಾಯ ಅದನ್ನು ಅಭ್ಯಾಸ ಮಾಡಿದಂತಹ ಶಿಕ್ಷಕರಿಗೆ, ಹೇಗೆ ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕು ಎಂಬುದುತಿಳಿದಿರುತ್ತದೆ.

– ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.