‘ಕನ್ನಡದ ಕಸ್ತೂರಿಗೆ ಬೇಕಿದೆ ಹೊಸ ತುತ್ತೂರಿ’ (ಪ್ರ.ವಾ.,ಜೂನ್ 24) ಲೇಖನದಲ್ಲಿ ರಘುನಾಥ ಚ.ಹ. ಅವರು ‘ನೈತಿಕತೆಯ ಬೊಜ್ಜು ಮಕ್ಕಳ ಸಾಹಿತ್ಯದ ಅಪೌಷ್ಟಿಕತೆಗೆ ಕಾರಣ’ ಎಂದಿದ್ದಾರೆ.

ಇದು ನಿಜವೇ ಆಗಿದ್ದರೂ ಮಕ್ಕಳ ಸಾಹಿತ್ಯದ ಒಳಗೆ ನೈತಿಕತೆ ಸಹಜವಾಗಿಯೇ ಒಡಮೂಡಿ ಬಂದಿರುತ್ತದೆ ಎಂಬುವುದನ್ನೂ ಮರೆಯುವಂತಿಲ್ಲ. ಇದು ಮಕ್ಕಳ ಸಾಹಿತ್ಯದ ಒಂದು ಲಕ್ಷಣವೂ ಆಗಿದೆ. ಆದ್ದರಿಂದ ಮಕ್ಕಳ ಸಾಹಿತ್ಯದಲ್ಲಿ ನೈತಿಕತೆಯನ್ನು ಸಾರಾಸಗಟಾಗಿ ನಿರ್ಲಕ್ಷ್ಯ ಮಾಡುವಂತಿಲ್ಲ. ಆದರೆ ನೀತಿ ಹೇಳಬೇಕೆಂದೇ ರಚನೆಗೊಳ್ಳುವ ಮಕ್ಕಳ ಸಾಹಿತ್ಯದಲ್ಲಿ ನೀತಿಯೇ ಪ್ರಧಾನವಾಗಿ ಅದು ‘ನೀತಿ ಸಾಹಿತ್ಯ’ವಾಗುತ್ತದೆಯೇ ಹೊರತು ಮಕ್ಕಳ ಸಾಹಿತ್ಯವಾಗಲಾರದು.

ಹೀಗಾಗಿ, ಮಕ್ಕಳ ಸಾಹಿತ್ಯ ರಚಿಸುವವರು ತಾವು ನಿರೂಪಿಸುವ ಕಥೆ, ಕವಿತೆ, ನಾಟಕದಲ್ಲಿ ಮಕ್ಕಳದ್ದೇ ಪ್ರೀತಿಯ ಎದೆಭಾವಕ್ಕೆ ಇಳಿದು ಬರೆಯುವ ಅಭೀಪ್ಸೆ ಹೊಂದಿರಬೇಕಾಗುತ್ತದೆ. ಆಗ ಮಕ್ಕಳಿಗಾಗಿ ಸಾಹಿತ್ಯ ರಚಿಸಲು ಕಷ್ಟವಾಗಲಾರದು. ಅದನ್ನು ಓದುವ ಮಕ್ಕಳಿಗೆ ಕೂಡ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.