ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಡಕುಟುಂಬಗಳಿಗೆ ವಾರ್ಷಿಕ ₹ 72,000 ನೀಡುವ ಕನಿಷ್ಠ ಆದಾಯ ಖಾತರಿ ಯೋಜನೆಯನ್ನು ಜಾರಿಗೆ ತರುವುದಾಗಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆ ರೂಪಿಸಿ, ಬಡ ರೈತರಿಗೆ ವರ್ಷಕ್ಕೆ ನೇರವಾಗಿ₹ 6,000 ನೀಡುವ ಯೋಜನೆಯನ್ನು ಘೋಷಿಸಿದಾಗ ರಾಹುಲ್ ಅದನ್ನು ಟೀಕಿಸಿದ್ದರು. ಈಗ ಅವರೇ ಅದರ ಹಲವು ಪಟ್ಟು ಹೆಚ್ಚು ಮೊತ್ತವನ್ನು ಬಡವರಿಗೆ ನೀಡುವುದಾಗಿ ಹೇಳಿದ್ದಾರೆ.

ಸುಮಾರು 45 ವರ್ಷಗಳ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಗರೀಬಿ ಹಠಾವೊ ಯೋಜನೆ ಜಾರಿಗೆ ತಂದಿದ್ದರು. ನಂತರ ರಾಜೀವ್ ಗಾಂಧಿ ಕೂಡ ಇದೇ ಯೋಜನೆಯನ್ನು ಮುಂದುವರಿಸಿ ಮತಬ್ಯಾಂಕ್‍ಗೆ ಲಗ್ಗೆ ಇಟ್ಟಿದ್ದರು. ಈಗ ರಾಹುಲ್ ಇಂತಹುದೇ
ಮತ್ತೊಂದು ಯೋಜನೆ ಘೋಷಿಸಿ ಮತ ಸೆಳೆಯಲು ಯತ್ನಿಸುತ್ತಿದ್ದಾರೆ. ಗರೀಬಿ ಹಠಾವೊ ಯೋಜನೆ ಘೋಷಣೆಯಾದ ನಂತರ ದಶಕಗಳೇ ಕಳೆದರೂ ಬಡವರು ಬಡತನದ ರೇಖೆಗಿಂತ ಮೇಲೆ ಬರಲು ಸಾಧ್ಯವಾಗಿಲ್ಲ. ಶ್ರಮರಹಿತ ಆದಾಯದಿಂದ ಯಾರೂ ಉದ್ಧಾರವಾಗಲು ಸಾಧ್ಯವಿಲ್ಲ. ಬದಲಾಗಿ, ಅವಲಂಬಿತರು ಕೆಟ್ಟದ್ದರವ್ಯಸನಿಗಳಾಗುತ್ತಾರೆ. ಇದರಿಂದ ದೇಶ ಅಭ್ಯುದಯವಾಗುವುದಿಲ್ಲ. ಬಡವರು ದುಡಿದು, ನಿರ್ದಿಷ್ಟ ಆದಾಯಗಳಿಸಿ ಸ್ವಾವಲಂಬಿಗಳಾಗುವಂತಹ ಯೋಜನೆಗಳ ಬಗ್ಗೆ ವಿಚಾರ ಮಾಡಲಿ. ಒಂದು ವೇಳೆ ಈ ಯೋಜನೆ ಜಾರಿಗೊಳಿಸಿದರೆ ದೇಶದ ಆರ್ಥಿಕ ಸ್ಥಿತಿ ಏರುಪೇರಾಗುತ್ತದೆ. ಈ ಅವಾಸ್ತವಿಕವಾದ ಯೋಜನೆಯ ವಿಚಾರವನ್ನು ರಾಹುಲ್
ಕೈಬಿಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.