‘ಪ್ರಜಾವಾಣಿ’ಯ ಫೋನ್ ಇನ್ ಕಾರ್ಯಕ್ರಮದ ಮೂಲಕ (ಸೆ. 8) ಶಿಕ್ಷಕರ ಬವಣೆ ಆಲಿಸಿದ ಶಿಕ್ಷಣ ಸಚಿವರಿಗೆ ಧನ್ಯವಾದ. ಶಿಕ್ಷಕಸ್ನೇಹಿ ವರ್ಗಾವಣೆ, ವಿದ್ಯಾರ್ಥಿಸ್ನೇಹಿ ವಾತಾವರಣಕ್ಕೆ ಸಂಬಂಧಿಸಿದ ಅವರ ಕಲ್ಪನೆ ಚೆನ್ನಾಗಿದೆ. ಬವಣೆಯನ್ನು ನೀಗಿಸುವ ಕ್ರಮ ಕಾರ್ಯಗತ ಆದಾಗ ಅದಕ್ಕೆ ಬೆಲೆ. ಭ್ರಷ್ಟಾಚಾರವನ್ನು ಯಾರು ಬಂದರೂ ತಡೆಯಲಾಗದು. ಸೇವಾ ಮನೋಭಾವದ ಅರಿವಾದಾಗ ಮಾತ್ರ ಅದು ನಿಲ್ಲುತ್ತದೆ.

ದೈಹಿಕ ಶಿಕ್ಷಣ ಶಿಕ್ಷಕರ ವಿಷಯದಲ್ಲಿ ‘ಫಿಟ್ ಇಂಡಿಯಾ’ ಅನ್‌ಫಿಟ್ ಆಗುತ್ತಿದೆ. ನಾವೆಲ್ಲ 33 ವರ್ಷ ಗಳಿಂದಲೂ ಇದೇ ಸ್ಥಿತಿಯನ್ನು ನೋಡುತ್ತಲೇ ನಿವೃತ್ತಿ ಆಗಿಬಿಟ್ಟೆವು. ರಂಗ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮರೀಚಿಕೆಯಾಗಿದೆ. ಶಿಕ್ಷಕರ ಕಲ್ಯಾಣ ನಿಧಿ ಕೆಲವರಿಗಷ್ಟೇ ಸೀಮಿತವಾಗಿದೆ. ವೈದ್ಯನಾಥನ್ ವರದಿ ಸಲ್ಲಿಕೆಯಾಗಿ ಹಲವು ವರ್ಷಗಳಾಗಿದ್ದರೂ ಇನ್ನೂ ಜಾರಿಯಾಗಿಲ್ಲ. ಇದಕ್ಕೆ ನಮ್ಮ ನಿವೃತ್ತಿಯೇ ಸಾಕ್ಷಿ! ವರ್ಗಾವಣೆಯು ಸಿಕ್ಕವರಿಗೆ ಸೀರುಂಡೆ. ಒಟ್ಟಿನಲ್ಲಿ ಎಲ್ಲಾ ಸಮಸ್ಯೆಗಳೂ ಪರಿಹಾರ ಆಗಬೇಕು. ಕಾದು ನೋಡೋಣ.

-ಅ.ಮೃತ್ಯುಂಜಯ,ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.