ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಅಧ್ಯಾತ್ಮ, ಶಿಕ್ಷಣ, ದಾಸೋಹದಿಂದ ಜನಮಾನಸದಲ್ಲಿ ನೂರ್ಕಾಲ ಹಸಿರಾಗಿರುವಂತಹ ನಿಸ್ವಾರ್ಥ ಸೇವೆಯನ್ನು ತಮ್ಮ ಶತಕಕ್ಕೂ ದೀರ್ಘಕಾಲದ ಬದುಕಿನಲ್ಲಿ ಉಣಬಡಿಸಿ ಮಾದರಿಯಾದವರು.

ಇಂಥ ಪೂಜನೀಯರಿಗೆ ‘ಮರಣೋತ್ತರ ಭಾರತರತ್ನ’ ಪ್ರಶಸ್ತಿಯ ಅಗತ್ಯವಿದೆಯೇ? ಅದನ್ನೆಲ್ಲ ಮೀರಿದವರು ಸ್ವಾಮೀಜಿ. ಕ್ರಿಕೆಟ್‌ನಲ್ಲಿ ಶತಕಗಳ ಶತಕಕ್ಕೆ 40 ವರ್ಷಕ್ಕೇ ಹುಡುಕಿಕೊಂಡು ಬಂದಿತು ‘ಭಾರತರತ್ನ’.

ಆದರೆ, ಅನ್ನ, ನೀರು, ಸೂರು ನೀಡಿ ಲಕ್ಷಾಂತರ ಕುಟುಂಬಗಳ ಬಡತನದ ಸೀಮಾರೇಖೆಯನ್ನು ದಾಟಿಸಿದ ಮೇರು ವ್ಯಕ್ತಿತ್ವ, ಸೇವೆ ಸಲ್ಲಿಸುತ್ತಲೇ 111 ವರ್ಷಗಳ ಕಾಲ ಬದುಕಿದ್ದಾಗ ದೊರೆಯದೇ ಹೋದುದು ವಿಪರ್ಯಾಸ.

ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಿ ಎಂದು ಒತ್ತಾಯಿಸುವುದಕ್ಕಿಂತ ಭಾರತರತ್ನಕ್ಕೆ ಸರಿಸಮಾನವಾದ ಪ್ರಶಸ್ತಿಯನ್ನು ಶ್ರೀಗಳ ಹೆಸರಿನಲ್ಲಿ ಪ್ರತಿಷ್ಠಾಪಿಸಿ ‘ಅಧ್ಯಾತ್ಮ, ಶಿಕ್ಷಣ, ದಾಸೋಹ’ದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ, ಸಂಘ–ಸಂಸ್ಥೆಗಳಿಗೆ ಶ್ರೀಗಳ ಜನ್ಮದಿನದಂದು ನೀಡುವುದು ಹೆಚ್ಚು ಸೂಕ್ತ. ಸಂಬಂಧಿಸಿದವರು ಈ ನಿಟ್ಟಿನಲ್ಲಿ ಆಲೋಚಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.