ಕರುಣಾನಿಧಿ ಮತ್ತು ಕರ್ನಾಟಕದ ಸಂಬಂಧಗಳನ್ನು ಕುರಿತ ವರದಿ (ಪ್ರ.ವಾ., ಆ. 8) ಓದಿದಾಗ ಕೆಲವು ವಿಚಾರಗಳು ನೆನಪಾದವು.

ಸುದೀರ್ಘ ರಾಜಕೀಯ ಜೀವನದಲ್ಲಿ ಕರುಣಾನಿಧಿ ಅವರು ಕೆಲವು ತಪ್ಪು ಹೆಜ್ಜೆಗಳನ್ನೂ ಇಟ್ಟಿದ್ದರು. ಅವರುಅಧಿಕಾರದಲ್ಲಿದ್ದಾಗ ಎಲ್ಟಿಟಿಇಗೆ ಬೆಂಬಲ ಕೊಟ್ಟಿದ್ದರು. ಎಲ್ಟಿಟಿಇಯ ಕೆಲವು ನಾಯಕರು ಚೆನ್ನೈನ ಐಷಾರಾಮಿ
ಬಂಗಲೆಗಳಲ್ಲಿದ್ದರಂತೆ. ವಿಧಾನಸಭೆಯಲ್ಲೊಮ್ಮೆ ಜಯಲಲಿತಾ ಅವರನ್ನು ಹೀನಾಯವಾಗಿ ನಡೆಸಿಕೊಂಡದ್ದು ಅವರು ಮಾಡಿದ ಇನ್ನೊಂದು ತಪ್ಪು. ಮೀಸಲಾತಿಯಲ್ಲಿ ಆರ್ಥಿಕವಾಗಿ ಸಶಕ್ತರು (ಕ್ರೀಮಿ ಲೇಯರ್) ಎಂಬ ಕಲ್ಪನೆ
ಯನ್ನೇ ತರಬಾರದು ಎಂಬುದು ಅವರ ನಿಲುವಾಗಿತ್ತು.

ದಕ್ಷಿಣದ ರಾಜ್ಯಗಳಲ್ಲಿ ಹಲವು ದಶಕಗಳ ಕಾಲ ತಮಿಳುನಾಡು ದೊಡ್ಡಣ್ಣನಾಗಿತ್ತು. ಇದಕ್ಕೆ ಕಾರಣವೆಂದರೆ, ಇಲ್ಲಿನ ಪ್ರಾದೇಶಿಕ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷಕ್ಕೆ ಬೆಂಬಲ ನೀಡುವ ತಂತ್ರ ಅನುಸರಿಸಿದ್ದು.

ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಮಾತ್ರ, ‘ಕರುಣಾನಿಧಿಯು ಜಯಲಲಿತಾ ಅವರಿಗಿಂತ ಸ್ವಲ್ಪ ವಾಸಿ’ ಎಂಬ ಉತ್ತರವು ರಾಜ್ಯದ ಜನರಿಂದ ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.