ಮದುವೆಯಾಗಲು ಹೆಣ್ಣು ಸಿಗದೇ ರೋಸಿಹೋದ ಕುಂದಗೋಳದ ಯುವಕರು, ಅವಿವಾಹಿತ ಯುವಕರಿಗೆ ಹೆಣ್ಣುಕೊಡಲು ಹೆಣ್ಣು ಮಕ್ಕಳ ಪೋಷಕರ ಮನವೊಲಿಸುವಂತೆ ಅಲ್ಲಿನ ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ. ಕಳೆದ ವಾರ ಚುಂಚನಗಿರಿಯಲ್ಲಿ ವಧು– ವರರ ಸಂಪರ್ಕ ಸಭೆ ಏರ್ಪಡಿಸಲಾಗಿತ್ತು. ಅಲ್ಲಿ ಯುವಕರ ಜಾತ್ರೆಯೇ ನಡೆದಿತ್ತು. ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಹಿಂದಿನ ವರ್ಷ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಅವರಿಗೂ ಯುವಕರು ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣಗಳನ್ನು ಗಮನಿಸಿದಾಗ, ನಿಗದಿತ ವಯೋಮಾನದ ಮಿತಿಯಲ್ಲಿ ಯುವಕರು ಮದುವೆಯಾಗಲು ಹೆಣ್ಣು ಸಿಗದೇ ಪರದಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಮದುವೆ ವಯಸ್ಸಿನ ಯುವಕ ಯುವತಿಯರಲ್ಲಿನ ಲಿಂಗಾನುಪಾತದ ಅಸಮತೋಲನವೇ ಈ ಸಮಸ್ಯೆಗೆ ಕಾರಣ. ಉದಾಹರಣೆಗೆ, ತುಮಕೂರು ಜಿಲ್ಲೆಯಲ್ಲಿ ಒಂದರಿಂದ ಆರನೇ ವಯಸ್ಸಿನ ಮಕ್ಕಳ ಲಿಂಗಾನುಪಾತದಲ್ಲಿ ಒಂದು ಸಾವಿರ ಗಂಡು ಮಕ್ಕಳಿಗೆ 958 ಹೆಣ್ಣು ಮಕ್ಕಳಿರುವುದು ಆತಂಕಕಾರಿಯಾಗಿದೆ. ರಾಜ್ಯದ ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಲಿಂಗಾನುಪಾತ ಆಶಾದಾಯಕವಾಗಿಲ್ಲ. ವಂಶೋದ್ಧಾರಕ ಗಂಡು ಎಂಬ ವ್ಯಾಮೋಹ, ಭ್ರೂಣ ಹತ್ಯೆಯಂತಹ ಕಾರಣಗಳಿಂದ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿರುವುದೇ ಇಂದು ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗದಿರುವುದಕ್ಕೆ ಕಾರಣವಾಗಿದೆ. ಹೀಗಾಗಿ ಇಂತಹ ಸ್ಥಿತಿಗೆ ಸರ್ಕಾರ ಮತ್ತು ಸಮಾಜ ಹೊಣೆಯಲ್ಲ. ನಮ್ಮ ಕುಟುಂಬದಲ್ಲಿಯೂ ಹೆಣ್ಣು ಮಗುವಿರಲಿ ಎಂಬ ಮನೋಭಾವ ಕುಟುಂಬಗಳಿಗೆ ಬರದ ವಿನಾ ಸಮಸ್ಯೆ ಪರಿಹಾರವಾಗುವುದಿಲ್ಲ.

ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.