ಮತ್ತೆ ಭೀಕರ ಬರದತ್ತ ರಾಜ್ಯ ಮುಖ ಮಾಡಿದೆ (ಪ್ರ.ವಾ., ಜೂನ್ 28). ಮೋಡ ಬಿತ್ತನೆ ಕುರಿತ ಚರ್ಚೆ ಒಂದೆಡೆಯಾದರೆ, ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಚಿಂತನೆ ಇನ್ನೊಂದು ಕಡೆ.

ಮಲೆನಾಡು ಉಳಿಸಿ, ಶರಾವತಿ ರಕ್ಷಿಸಿ ಎಂಬ ಕೂಗು ಶಿವಮೊಗ್ಗ ಭಾಗದಲ್ಲಿ ಹಬ್ಬಿದೆ. ಇತ್ತ ರಾಜ್ಯ ಸರ್ಕಾರವು ಕೊಳ್ಳೇಗಾಲ– ಹನೂರು ರಸ್ತೆ ವಿಸ್ತರಣೆಗಾಗಿ ನೂರಾರು ಮರಗಳನ್ನು ಹನನ ಮಾಡಲು ಮುಂದಾಗಿದೆ. ನೀರಿಗಾಗಿ ಹಾಹಾಕಾರ ಉಂಟಾಗಿರುವ ಕಾಲದಲ್ಲಿ ಮಳೆಗಾಗಿ ಪರ್ಜನ್ಯ ಜಪ, ಹೋಮ, ಮೋಡಬಿತ್ತನೆಯಂತಹ ವಿಫಲ ಪ್ರಯತ್ನಗಳು ತರವಲ್ಲ.

ಮಳೆ ಬೀಳಲು ಪೂರಕ ವಾತಾವರಣ ನಿರ್ಮಿಸುವ ಮರಗಳನ್ನು ಉಳಿಸಿ ರಕ್ಷಿಸಬೇಕು ಎಂಬ ಕನಿಷ್ಠ ಜ್ಞಾನವೂ ಸರ್ಕಾರಕ್ಕೆ ಇಲ್ಲದಿರುವುದು ಹಾಸ್ಯಾಸ್ಪದ.ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಒಕ್ಕಲೆಬ್ಬಿಸಿದ್ದ 2,500 ಕುಟುಂಬಗಳಿಗೆ ಇನ್ನೂ ನ್ಯಾಯ ದೊರೆತಿಲ್ಲ. ಇದರ ನಡುವೆಯೇ ಭೂಮಿ ಅಗೆದು ಬೆಂಗಳೂರಿಗೆ ನೀರು ಕೊಂಡೊಯ್ಯುವುದು ಎಡಬಿಡಂಗಿ ಕೆಲಸವಾಗುತ್ತದೆ. ಹಾಗೆಯೇ ಜಿಲ್ಲೆಯ ಜನರ ಧ್ವನಿಯನ್ನು ಕಡೆಗಣಿಸುವುದೂ ಸರಿಯಲ್ಲ. ಅವರ ಸಮಸ್ಯೆ ಮತ್ತು ಬೇಡಿಕೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕ್ರಮ ಕೈಗೊಳ್ಳಬೇಕು.

– ಹರೀಶ್ ಕಮ್ಮನಕೋಟೆ,ತುಮಕೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.