ಮೊನ್ನೆ ನಡೆದ ‘ಸಾಹಿತ್ಯ ಸಂಭ್ರಮ’ ಸಂದರ್ಭದಲ್ಲಿ ಧಾರವಾಡಕ್ಕೆ ಹೋಗಿದ್ದಾಗ ಸಹಜ ಕುತೂಹಲದಿಂದ ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ ಮನೆ ನೋಡಲು ಹೋಗಿದ್ದೆ. ಅದನ್ನು ನೋಡಿ ತುಂಬ ಬೇಸರವಾಯ್ತು. ಅವರ ನೆನಪಿಗಾಗಿ ಸರ್ಕಾರ ಅವರ ಮನೆಯ ಪುನರುಜ್ಜೀವನಕ್ಕೆಂದು ₨ 25 ಲಕ್ಷ ಹಣ ನೀಡಿದೆ. ಆದರೆ ಈ ಹಣ ಎಲ್ಲಿ ಹೋಗಿದೆ ಎಂಬುದು ತಿಳಿಯುವಂತಿಲ್ಲ!

ಮನೆ ಶಿಥಿಲವಾಗಿರುವುದಷ್ಟೇ ಅಲ್ಲ ಅದಕ್ಕೆ ಕಳೆದ 3 ತಿಂಗಳಿನಿಂದ ವಿದ್ಯುತ್ತಿನ ಅನುಕೂಲವಿಲ್ಲ. ಅಲ್ಲಿರುವ ಅಪೂರ್ವ ಛಾಯಾಚಿತ್ರಗಳು ಬಣ್ಣಗೆಟ್ಟಿವೆ. ಶೀರ್ಷಿಕೆ ಒಂದು ಕಡೆ ಇದ್ದರೆ, ಅದಕ್ಕೆ ಸಂಬಂಧಿಸಿದ ಚಿತ್ರ ಇನ್ನೆಲ್ಲೋ ಇದೆ. ಹಿರಿಯರು ಉಳಿಸಿ ಹೋಗಿರುವುದನ್ನು ಉಳಿಸಿಕೊಳ್ಳಬೇಕು ಎನ್ನುವ ಪ್ರಜ್ಞೆಯೇ ಬಹುಶಃ ನಮ್ಮಲ್ಲಿ ಇಲ್ಲ ಅನಿಸುತ್ತದೆ. ಈ ಬಗ್ಗೆ ನಮ್ಮ ಸಾಹಿತಿಗಳಾಗಲೀ ಸಂಗೀತಪ್ರಿಯರಾಗಲೀ ಯಾವುದೇ ಕಳಕಳಿ ಪ್ರದರ್ಶಿಸದೆ ಇರುವುದು ವಿಷಾದಕರ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತ್ತ ಕಡೆ ಈಗಲಾದರೂ ದೃಷ್ಟಿಹರಿಸಿ ಈ ದೊಡ್ಡ ಸಂಗೀತಗಾರ್ತಿಯ ಬಳುವಳಿ ಉಳಿಯುವಂತೆ ಮಾಡುವುದು ತೀರಾ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.