ಬಿ.ಎಂ.ಟಿ.ಸಿ. ಬಸ್ಸಿನಲ್ಲಿ ಮೊದಲ ಸ್ಟೇಜಿಗೆ ಟಿಕೆಟ್ ದರ ₹ 5 ನಿಗದಿ ಮಾಡಿದೆ. ಹಿರಿಯ ನಾಗರಿಕರಿಗೆ ₹ 4. ಆದರೆ ಯಾವ ನಿರ್ವಾಹಕರೂ ₹4ರ ಟಿಕೆಟ್ ಅನ್ನು ಕೊಡುತ್ತಿಲ್ಲ. ತಮ್ಮ ಹತ್ತಿರ ಆ ಟಿಕೆಟ್ಟೇ ಇಲ್ಲವೆಂದು ಸಬೂಬು ಹೇಳುತ್ತಾರೆ. ಇನ್ನು ಎರಡು ಸ್ಟೇಜುಗಳಿಗೆ ಹಿರಿಯ ನಾಗರಿಕರಿಗೆ ₹ 9 ತೆಗೆದು ಕೊಳ್ಳಬೇಕು.

ಇಲ್ಲಿ ಕೂಡ ₹ 10ರ ಟಿಕೆಟ್ಟನ್ನು ಕೊಟ್ಟು ₹ 9ರ ಟಿಕೆಟ್ಟು ತಮ್ಮ ಹತ್ತಿರ ಇಲ್ಲವೆಂದು ಹೇಳುತ್ತಾರೆ. ಈ ರೀತಿಯಾದರೆ ಸಾರಿಗೆ ಸಂಸ್ಥೆಯವರು ಹಿರಿಯ ನಾಗರಿಕರಿಗೆ ಶೇಕಡಾ 25ರ ರಿಯಾಯಿತಿ ಕೊಡುತ್ತೇವೆ ಎಂದು ಹೇಳುವುದು ಯಾವ ನ್ಯಾಯ? ಎಲ್ಲ ನಿರ್ವಾಹಕರೂ ಕಡ್ಡಾಯವಾಗಿ ಈ ಟಿಕೆಟ್ಟುಗಳನ್ನು ಹೊಂದಿರಲೇಬೇಕೆಂದು ಕಟ್ಟುನಿಟ್ಟಾಗಿ ನಿರ್ದೇಶಿಸಿದಲ್ಲಿ ಮಾತ್ರ ಈ ರಿಯಾಯಿತಿಯನ್ನು ಹಿರಿಯ ನಾಗರಿಕರಿಗೆ ತಲುಪಿಸಿದಂತಾಗುವುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.