ಈಗಾಗಲೇ ಅತ್ಯಾಚಾರ ಪ್ರಕರಣವೊಂದರಲ್ಲಿ ನಿರೀಕ್ಷಣಾ ಜಾಮೀನಿನಲ್ಲಿರುವ ಪ್ರಬಲ ಮೇಲ್ಜಾತಿಯ ಸ್ವಾಮೀಜಿಯೊಬ್ಬರ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ಚಾರ್ಜ್ಶೀಟ್ ಹಾಕುವ ಹಂತದಲ್ಲಿದೆ ಎಂದು ವರದಿಯಾಗಿದೆ. ಪ್ರಬಲ ಸಾಕ್ಷ್ಯಾಧಾರಗಳು ದೊರೆತಿವೆ ಎನ್ನುವ ಹೇಳಿಕೆ ನೀಡಿದ್ದ ವಕೀಲರ ಹೇಳಿಕೆಗೆ ಪುಷ್ಟಿ ನೀಡುವಂತೆ ನ್ಯಾಯಾಲಯದಲ್ಲಿ ಸ್ವಾಮೀಜಿಗೆ ಹಿನ್ನಡೆಯಾಗಿದೆ.

ಈಗ ಅವರ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅತ್ಯಾಚಾರದಡಿ ದಾಖಲಾದ ಹಲವಾರು ಪ್ರಕರಣಗಳಲ್ಲಿ ಕೂಡಲೇ ಬಂಧಿಸುವ ಕಾನೂನು ಈ ಸ್ವಾಮೀಜಿಗೆ ಮಾತ್ರ ವಿನಾಯಿತಿ ನೀಡಿ, ನುಣುಚಿಕೊಳ್ಳುವ ಕಾನೂನು ರಂಧ್ರಗಳನ್ನು ಹಿಗ್ಗಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆಯೇನೋ ಎನ್ನುವ ಅನುಮಾನ ಕಾಡುತ್ತಿದೆ.

ಬಹುಶಃ ಮೇಲ್ಜಾತಿಯ ಸ್ವಾಮೀಜಿ ಎನ್ನುವ ಕಾರಣವೂ ಇರಬಹುದೇನೊ. ಏಕೆಂದರೆ ಇತ್ತೀಚೆಗೆ ಪ್ರಬಲ ಸಮುದಾಯವಲ್ಲದ ಬಂಜಾರ ಸ್ವಾಮೀಜಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಕೂಡಲೇ ಬಂಧಿಸಿದ ಕಾನೂನು, ಈ ಸ್ವಾಮಿಗೆ ಅನ್ವಯವಾಗದಿರುವುದು ಕಾನೂನು ವ್ಯವಸ್ಥೆಯೂ ಶ್ರೇಣೀಕೃತಗೊಂಡಿದೆಯೋ ಎಂಬ ಭಾವನೆ ಬರುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.