ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿ ಸರಿಸುಮಾರು 9 ತಿಂಗಳು ಕಳೆದಿವೆ. ಇಷ್ಟಾದರೂ ಇನ್ನೂ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕವನ್ನು ಪ್ರಾಧಿಕಾರ ಪ್ರಕಟಿಸಿಲ್ಲದಿರುವುದು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಇಲ್ಲದ ಪೇಚಿಗೆ ಸಿಲುಕಿಸಿದೆ.

ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಅಭ್ಯರ್ಥಿಗಳಿಗೆ ಓದುವ ಆಸಕ್ತಿಯು ದಿನಗಳು ಉರುಳಿದಂತೆ ಕುಂದಿದೆ. ಪರೀಕ್ಷೆಯು ಸದ್ಯದಲ್ಲೆ ನಡೆಯುವ ಬಗ್ಗೆ ಅನುಮಾನವೂ ಬೇರೂರಿದೆ. ಜೊತೆಗೆ ಮುಂದಿನ ತಿಂಗಳಿನಲ್ಲಿ ಕ್ರಮವಾಗಿ ಕೆ–ಸೆಟ್ ಹಾಗೂ ನೆಟ್ ಪರೀಕ್ಷೆಗಳು ನಡೆಯಲಿವೆ. ಆದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಬೇಗ ಪರೀಕ್ಷೆ ನಡೆಸುವಂತಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.