ದೂರ ಪ್ರಯಾಣದ ಕೆಎಸ್‌ಆರ್‌ಟಿಸಿ ಲಕ್ಷುರಿ ಬಸ್ಸುಗಳು ಈಗ ಚಲಿಸುವ ತಿಗಣೆ ಸಾಕಣೆ ಕೇಂದ್ರಗಳಾಗಿ ಮಾರ್ಪಾಟಾಗಿವೆ. ಈ ಬಸ್ಸುಗಳಲ್ಲಿ ರಾತ್ರಿ ದೂರ ಪ್ರಯಾಣ ಮಾಡುವವರು ಒಂದು ಯೂನಿಟ್ ರಕ್ತದಾನಕ್ಕಾದರೂ ಸಿದ್ಧರಾಗಿರಬೇಕು.

ಈ ‘ತಿಗಣೆ- ಸಾರಿಗೆ’ ಬಸ್ಸುಗಳಲ್ಲಿ ಒಮ್ಮೆ ಪ್ರಯಾಣಿಸಿದರೆ ತಿಗಣೆ ಮತ್ತು ಪ್ರಯಾಣಿಕನ ರಕ್ತ ಸಂಬಂಧ ಅಲ್ಲಿಗೇ ಮುಗಿಯುವುದಿಲ್ಲ. ಕಾರಣ ಈ ಬಸ್ಸಿನ ಕೆಲವು ಸ್ನೇಹಮಯಿ ತಿಗಣೆಗಳು ತಮ್ಮ ಕುಟುಂಬ ಸಮೇತ ನಮ್ಮ ಬಟ್ಟೆ ಬ್ಯಾಗುಗಳಲ್ಲಿ ಸೇರಿಕೊಂಡು ನಮ್ಮ ಮನೆಗೂ ವಲಸೆ ಬಂದು ಅಲ್ಲಿಯೂ ತಮ್ಮ ಸಂಸಾರ ಭರ್ಜರಿಯಾಗಿ ಬೆಳೆಸುತ್ತವೆ. ಸರ್ಕಾರಿ ಬಸ್ಸಿನವರು ಇದರ ನಿರ್ಮೂಲನೆಯ ಕೆಲಸದ ಹೊರಗುತ್ತಿಗೆ ಯಾಕೆ ಕೊಡುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.