ಬಿಹಾರ ಸರ್ಕಾರ ಏಪ್ರಿಲ್‌ನಿಂದ ಮದ್ಯಪಾನ ನಿಷೇಧಕ್ಕೆ ನಿರ್ಧರಿಸಿದೆ. ಮದ್ಯಪಾನ ನಿಷೇಧ ಒಂದು ನಗೆಪಾಟಲು. ಹೇಳುವುದಕ್ಕೆ ಚೆನ್ನಾಗಿದೆ. ಕಾನೂನು ಮಾಡಿದರೂ ಜಾರಿಗೆ ತರುವುದು ಸುಲಭವಲ್ಲ. ಅನೇಕ ರಾಜ್ಯಗಳಲ್ಲಿ ಇದರ ಕಹಿ ಅನುಭವ ಆಗಿದೆ.

ಕರ್ನಾಟಕ, ತಮಿಳುನಾಡಿನಲ್ಲಿಯೂ ಈ ಹಿಂದೆ ಇದರ ಅನುಭವವಾಗಿದೆ. ಗುಜರಾತಿನಲ್ಲಿ ಈಗಲೂ ಕದ್ದು ಮುಚ್ಚಿ ಮದ್ಯಪಾನ ನಡೆಯುತ್ತಲೇ ಇದೆ. ಕಳೆದ ಸಲ ನಾವು ಗುಜರಾತಿಗೆ ಹೋಗಿದ್ದಾಗ ನನ್ನ ಸ್ನೇಹಿತರು ಸುಲಭವಾಗಿ ಅದನ್ನು ಸಂಪಾದಿಸಿ ಕುಡಿದಿದ್ದರು. ಮದ್ಯಪಾನ, ಇಸ್ಪೀಟು, ವೇಶ್ಯಾವಾಟಿಕೆ ಎಲ್ಲ ಕಾಲಕ್ಕೂ ಎಲ್ಲ ಊರುಗಳಲ್ಲಿಯೂ ಇದ್ದದ್ದೇ. ನಿಯಂತ್ರಣಕ್ಕೆ ಕಾನೂನು ಮಾಡಿದಷ್ಟೂ ಅಧಿಕಾರಿಗಳಿಗೆ, ಪೊಲೀಸರಿಗೆ ಹಬ್ಬವೇ ಹೊರತು ಸಂಪೂರ್ಣ ನಿಯಂತ್ರಣ ಸಾಧ್ಯವೇ ಇಲ್ಲ. ಇದೊಂದು ವ್ಯರ್ಥ ಪ್ರಯತ್ನ ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.