ಅಧುನೀಕರಣ, ಜಾಗತೀಕರಣ, ತಾಂತ್ರೀಕರಣ ಮುಂತಾದ ಬೃಹತ್ ಪರಿವರ್ತನೆಗಳಲ್ಲಿ ಕನ್ನಡದ ಉಳಿವು–ಬೆಳವಿನ ಕುರಿತು ಈಗ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಯಾಕೆಂದರೆ ಕನ್ನಡ ಈ ಹೊತ್ತು ಭಾಷೆಯಾಗಿ ಮಾತ್ರ ಉಳಿದಿಲ್ಲ. ವ್ಯವಹಾರ, ಸಂಸ್ಕೃತಿ, ಚಿಂತನೆ, ಸಂಪ್ರದಾಯ ಮುಂತಾಗಿ ವ್ಯಾಪಿಸಿಕೊಂಡಿದೆ.

ಅದರಲ್ಲೂ ದಶಕದ ಈಚೆಗಿನ ತಾಂತ್ರಿಕ ಬೆಳವಣಿಗೆಗಳು ಕನ್ನಡ ಭಾಷೆಯನ್ನು ಜಾಗತಿಕ ಮಟ್ಟದಲ್ಲಿ ಸಜ್ಜುಗೊಳಿಸಿವೆ. ಟ್ವಿಟರ್, ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ತಾಣಗಳು ಕನ್ನಡಕ್ಕೆ ಜಾಗತಿಕ ನೆಲೆ, ಬೆಲೆ ತಂದುಕೊಟ್ಟಿವೆ. ಆದರೆ, ಅಲೈಯನ್ಸ್ ಫ್ರಾನ್ಸೆನಲ್ಲಿ (https://goo.gl/3SuwtZ) ಫ್ರೆಂಚ್, ಮ್ಯಾಕ್ಸ್ ಮ್ಯುಲರ್‌ನಲ್ಲಿ ಜರ್ಮನ್ ಕಲಿಸುವ ರೀತಿಯಲ್ಲಿ ಅತ್ಯಂತ ವೃತ್ತಿಪರವಾದ ರೀತಿಯಲ್ಲಿ ಕನ್ನಡ ಕಲಿಕೆಯ ವ್ಯವಸ್ಥೆಗಳು ನಮ್ಮಲ್ಲಿ ಇನ್ನೂ ರೂಪುಗೊಂಡಿಲ್ಲ.

ಹೀಗೆ ಕನ್ನಡ ಜನಪ್ರಿಯಗೊಂಡರೆ ಅದಕ್ಕೆ ಮಾರುಕಟ್ಟೆ ಮೌಲ್ಯ ಹೆಚ್ಚುತ್ತದೆ. ಅನ್ಯಭಾಷಿಕರು ಕನ್ನಡ ಕಲಿಯಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಅಷ್ಟೇ ಅಲ್ಲ, ಹೊಸ ತಲೆಮಾರಿನ ತಾಂತ್ರಿಕ ಆವಿಷ್ಕಾರಗಳಲ್ಲಿ ಕನ್ನಡ ಬಳಕೆಯ ಸಾಧ್ಯತೆಯೂ ಹೆಚ್ಚಲಿದೆ ಎನ್ನುತ್ತಾರೆ ಐಟಿ ವೃತ್ತಿಪರರಾದ ಶಿವಮೊಗ್ಗ ಜಿಲ್ಲೆಯ ಜಯಂತ್ ಸಿದ್ಮಲ್ಲಪ್ಪ ಮತ್ತು ರವಿ ಸಾವ್ಕಾರ್.

ಬೆಂಗಳೂರಿನ ಬೇರೆ ಬೇರೆ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಎಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಈ ಇಬ್ಬರು ಉತ್ಸಾಹಿ ತರುಣರು ಇತ್ತೀಚೆಗೆ ‘ಕಲಿ ಕನ್ನಡ’ (https://goo.gl/sd0oAU) ಎಂಬ ಟ್ವಿಟರ್ ಖಾತೆ ತೆರೆದಿದ್ದಾರೆ. ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ, ವ್ಯಾಪಕವಾಗಿ ಮತ್ತು ತಾಂತ್ರಿಕ ಸ್ನೇಹಿಯಾಗಿ ರೂಪಿಸುವುದು ಈ ಪ್ರಯತ್ನದ ಹಿಂದಿನ ಆಶಯ.

ಜತೆಯಲ್ಲೇ, ಕನ್ನಡ ಕಲಿಯುವ ಮತ್ತು ಕಲಿಸುವ ಆಸಕ್ತಿ ಇರುವ ಇಬ್ಬರನ್ನೂ ಒಂದೇ ವೇದಿಕೆಯಡಿ ತರುವ ಪ್ರಯತ್ನವೂ ಈ ಖಾತೆ ಮೂಲಕ ನಡೆದಿದೆ. ‘ಕಲಿ ಕನ್ನಡ’ ಕನ್ನಡ ಕಲಿಯುವ-ಕಲಿಸುವ ಜನರನ್ನು ಜೋಡಿಸುವ ಕೊಂಡಿಯಂತೆ ಕೆಲಸ ಮಾಡುತ್ತಿದೆ. ಮೇ ತಿಂಗಳಲ್ಲಿ ಆರಂಭವಾದ ಈ ಪ್ರಯತ್ನಕ್ಕೆ ಮೂರು ವಾರಗಳಲ್ಲೇ ಮುನ್ನೂರಕ್ಕೂ ಹೆಚ್ಚು ಜನರು ಹಿಂಬಾಲಕರಾಗಿರುವುದು ಗಮನೀಯ ಅಂಶ.
ಕನ್ನಡದಲ್ಲಿ ಗ್ರಾಹಕ ಸೇವೆಯನ್ನು ಕೇಳಿ ಪಡೆಯಬೇಕು ಮತ್ತು ಆ ಮೂಲಕ ಮಾರುಕಟ್ಟೆಯಲ್ಲಿ ಕನ್ನಡಕ್ಕೊಂದು ಆರ್ಥಿಕ ಬಲ ತಂದುಕೊಡಬೇಕು ಎಂಬ ಆಶಯದೊಂದಿಗೆ 2012ರಲ್ಲಿ ಹುಟ್ಟಿಕೊಂಡ ಸಂಘಟನೆ ಕನ್ನಡ ಗ್ರಾಹಕರ ಕೂಟ.

(http://goo.gl/U2OgKH) ‘ಕಲಿ ಕನ್ನಡ’ ಖಾತೆಯ ನಿರ್ವಾಹಕರಾಗಿರುವ ಜಯಂತ್ ಮತ್ತು ರವಿ ಇಬ್ಬರೂ ಈ ಸಂಘಟನೆಯ ಸಕ್ರಿಯ ಸದಸ್ಯರು. ಕನ್ನಡ ಗ್ರಾಹಕರ ಕೂಟ ಬೆಂಗಳೂರಿನ ಸಾಕಷ್ಟು ಸಾಫ್ಟ್‌ವೇರ್ ಸಂಸ್ಥೆಗಳಲ್ಲಿ ಕನ್ನಡ ಕಲಿಸುವ ಪ್ರಯತ್ನಗಳಿಗೆ ಹಾಗೂ ವೃತ್ತಿಪರವಾಗಿ ಕನ್ನಡ ಕಲಿಸುವ ಸಂಸ್ಥೆಗಳಿಗೆ ಪಠ್ಯಕ್ರಮ, ಪ್ರಚಾರ, ತಾಂತ್ರಿಕ ಸಲಹೆ ಮುಂತಾದ ಬೆಂಬಲವನ್ನು ನೀಡುತ್ತಾ ಬಂದಿದೆ. ಈ ಒಕ್ಕೂಟದ ಮುಂದುವರಿದ ಪ್ರಯತ್ನವೇ ‘ಟ್ವಿಟರ್ ಕಲಿ ಕನ್ನಡ.’

ಕಲಿಯಿರಿ–ಕಲಿಸಿರಿ
‘ಅನ್ಯ ಭಾಷಿಕರಿಗೆ ಸ್ಥಳೀಯ ಭಾಷೆಯನ್ನು ಕಲಿಯಬೇಕೆಂದರೆ ಅದಕ್ಕೆ ಪೂರಕ ವಾತಾವರಣ ನಿರ್ಮಿಸುವ ಹೊಣೆ ಸ್ಥಳೀಯರದ್ದೇ’ ಎನ್ನುತ್ತಾರೆ ಜಯಂತ್. ಈಗಂತೂ ಭಾಷೆಯೊಂದನ್ನು (ಕನ್ನಡ) ಕಲಿಯಲು ಮತ್ತು ಕಲಿಸಲು ಸಾಕಷ್ಟು ವೇದಿಕೆಗಳಿವೆ. ಆದರೆ, ಇವೆಲ್ಲವುಗಳಿಗಿಂತ ‘ಟ್ವಿಟರ್ ಕಲಿ ಕನ್ನಡ’ ತುಸು ಭಿನ್ನ.

ಅಸಲಿಗೆ ಈ ಖಾತೆಯ ಮೂಲಕ ನೇರವಾಗಿ ಕನ್ನಡ ಕಲಿಸುವ ಕೆಲಸ ನಡೆಯುತ್ತಿಲ್ಲ. ಕಲಿಯುವ ಮತ್ತು ಕಲಿಸುವ ಆಸಕ್ತರನ್ನು ಒಂದೆಡೆ ಸೇರಿಸುವ ‘ಅಗ್ರಿಗೇಟರ್’ (Aggregator) ಸೇವೆಯನ್ನು ಟ್ವಿಟರ್‌ನ ಈ ಪುಟ ಒದಗಿಸುತ್ತಿದೆ. ಸದ್ಯ ಈ ವೇದಿಕೆಯಲ್ಲಿ 429 ಹಿಂಬಾಲಕರಿದ್ದು, ಮಾಹಿತಿ ವಿನಿಮಯ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. ನೀವು ಕನ್ನಡ ಕಲಿಸುವುದಾಗಿದ್ದರೆ, ಕನ್ನಡ ಕಲಿಯಲು ಇಚ್ಛಿಸುವವರ ಪರಿಚಯವಿದ್ದರೆ ಅವರನ್ನು ಈ ಕೊಂಡಿಯತ್ತ ಕಳುಹಿಸಿ ಎನ್ನುತ್ತಾರೆ ಅವರು.

ಕನ್ನಡ ಕಲಿಯಲು ಅಥವಾ ಕಲಿಸಲು ಆಸಕ್ತಿ ಹೊಂದಿರುವವರು ವೇದಿಕೆಯನ್ನು ಈ (https://twitter.com/KaliKannadaa) ಕೊಂಡಿ ಮೂಲಕ ತಲುಪಬಹುದು. ಈ ಖಾತೆಯಿಂದ ಕನ್ನಡ ಕಲಿಯಲು ಇರುವ ಪುಸ್ತಕ, ಸಿ.ಡಿ, ವಿಡಿಯೊ, ಜಾಲತಾಣಗಳು, ವಾಟ್ಸ್‌ಆ್ಯಪ್ ಗುಂಪುಗಳು ಹೀಗೆ ಬಹು ವಿಧ ಮಾಹಿತಿಗಳನ್ನು ನಿಯಮಿತವಾಗಿ ಹಂಚಿಕೊಳ್ಳಲಾಗುತ್ತದೆ. ಜತೆಯಲ್ಲೇ ಕನ್ನಡ ಕಲಿಸುವ ಸಂಸ್ಥೆಗಳಿಂದ ಮಾಹಿತಿ ಪಡೆದು ಸಂಸ್ಥೆಯ ವಿವರ, ತರಗತಿ ನಡೆಯುವ ಸ್ಥಳ, ನೋಂದಾಯಿಸಿಕೊಳ್ಳುವ ಮಾಹಿತಿ, ಸಂಪರ್ಕ ವಿವರ ಇತ್ಯಾದಿಯನ್ನು ಕಲಿಯುವ ಆಸಕ್ತಿಯಿರುವ ಟ್ವಿಟರ್ ಹಿಂಬಾಲಕರೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಜತೆಯಲ್ಲೇ ಕನ್ನಡ ಕಲಿಯುವ ಆಸಕ್ತಿಯಿದ್ದು ಕಲಿಸುವವರನ್ನು ಹುಡುಕುತ್ತಿದ್ದರೆ ಅಂಥವರಿಗೂ ‘ತರಬೇತುದಾರ’ರನ್ನು ಹುಡುಕಿಕೊಡುವ ಕೆಲಸವನ್ನೂ ಮಾಡಲಾಗುತ್ತದೆ.

ವಾಟ್ಸ್‌ಆ್ಯಪ್, ಫೇಸ್‌ಬುಕ್, ಲಿಂಕ್ಡ್‌ಇನ್‌ನಂತಹ ತಾಣಗಳನ್ನು ಜನರು ಹೆಚ್ಚಾಗಿ ವೈಯಕ್ತಿಕ ಮಟ್ಟದಲ್ಲಿ ಬಳಸುತ್ತಾರೆ. ಸುದ್ದಿ, ಮಾಹಿತಿಗಾಗಿ ಹೆಚ್ಚಾಗಿ ಹುಡುಕುವುದು ಮೈಕ್ರೊ ಬ್ಲಾಗಿಂಗ್ ತಾಣವಾದ ಟ್ವಿಟರ್. ಹೀಗಾಗಿ ಟ್ವಿಟರ್ ಮೂಲಕ ಈ ಅಭಿಯಾನ ಕೈಗೊಳ್ಳಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ನೆಲೆಸಿರುವ ಸಾಕಷ್ಟು ಪರಭಾಷಿಕರನ್ನು ಸಂಪರ್ಕಿಸಲು ಟ್ವಿಟರ್ ಹೆಚ್ಚು ಸೂಕ್ತ ಆಯ್ಕೆಯಾದ ಕಾರಣಕ್ಕೂ ಅದನ್ನು ಬಳಸಿಕೊಳ್ಳಲಾಗಿದೆ ಎನ್ನುವ ವಿವರಣೆ ನಿರ್ವಾಹಕರದ್ದು.

‘ಕಲಿ ಕನ್ನಡ’ ಖಾತೆಯಿಂದ ಮಾಹಿತಿ ವಿನಿಮಯ ಕೆಲಸವನ್ನು ಮಾತ್ರ ಮಾಡುತ್ತಿದ್ದೇವೆ. ಅಂದರೆ, ನಾವು ನೇರವಾಗಿ ಯಾವುದೇ ಕಾರ್ಯಕ್ರಮ, ತರಗತಿ, ಸಂವಾದಗಳನ್ನು ಹಮ್ಮಿಕೊಳ್ಳುವುದಿಲ್ಲ. ಅಂತಹ ಕೆಲಸ ಮಾಡುತ್ತಿರುವ ಸಂಸ್ಥೆಗಳ ಬಗ್ಗೆ, ಅವರ ಕಾರ್ಯಕ್ರಮಗಳ ಬಗ್ಗೆ ತಿಳಿಯುವ, ಕಲಿಯುವ ಆಸಕ್ತಿ ಇರುವವರಿಗೆ ಮಾಹಿತಿ ಹಂಚಿಕೊಳ್ಳುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ. ವಾಟ್ಸ್‌ಆ್ಯಪ್ ಮೂಲಕ, ಆನ್‌ಲೈನ್ ಕೋರ್ಸ್ ಮೂಲಕ, ತರಗತಿಯಲ್ಲಿ ಮುಖಾಮುಖಿ ಭೇಟಿಯಾಗಿ ಕಲಿಸುವ, ಮೊಬೈಲ್ ಆ್ಯಪ್ ಮೂಲಕ ಕನ್ನಡ ಕಲಿಸುವ ಹಲವು ಸಂಸ್ಥೆಗಳ ಜತೆ ನಿರಂತರ ಸಂಪರ್ಕದಲ್ಲಿದ್ದು ಅವರ ಕಲಿಸುವ ಯೋಜನೆಗಳಿಗೆ ಕಲಿಯುವ ಆಸಕ್ತರನ್ನು ‘ಜೋಡಿಸುವ’ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಮ್ಮ ಯೋಜನೆ ವಿವರಿಸುತ್ತಾರೆ ಇವರು.

‘ಇನ್ಫೋಸಿಸ್, ಸೀಮೆನ್ಸ್, ಸ್ಯಾಪ್ ಲ್ಯಾಬ್ಸ್ ಸೇರಿದಂತೆ ಬೆಂಗಳೂರಿನಲ್ಲಿ ಸುಮಾರು 30ಕ್ಕೂ ಹೆಚ್ಚು ಕಂಪೆನಿಗಳಲ್ಲಿ ಕನ್ನಡ ಕಲಿ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಬೇಕಿದ್ದ ಪಠ್ಯಕ್ರಮ, ಪಾಠ ಮಾಡುವವರಿಗೆ ತರಬೇತಿ (ಟ್ರೈನ್ ದಿ ಟ್ರೈನರ್), ವೃತ್ತಿಪರ ಸಂಸ್ಥೆಗಳಿಂದ ಕಲಿಯುವ ಆಸಕ್ತಿ ಇದ್ದರೆ ಅಂತಹ ಸಂಸ್ಥೆಗಳನ್ನು ಈ ಕಂಪೆನಿಗಳಿಗೆ ಪರಿಚಯಿಸುವಂತಹ ಹಲವಾರು ಕೆಲಸಗಳನ್ನು ನಮ್ಮ ತಂಡ ನಿಭಾಯಿಸಿದೆ.

ಈಗಂತೂ ಬೆಂಗಳೂರಿನಲ್ಲಿ ಕನ್ನಡ ಕಲಿಕೆಗೆ ಸಾಕಷ್ಟು ಬೇಡಿಕೆ ಹುಟ್ಟಿಕೊಂಡಿರುವುದರಿಂದ ಅದನ್ನೇ ವೃತ್ತಿಪರವಾಗಿ ನಡೆಸುವ ಸಂಸ್ಥೆಗಳೂ ಹುಟ್ಟಿಕೊಂಡಿವೆ. ಹೀಗಾಗಿ ಈ ಹೊಸ ಪ್ರಯತ್ನದ ಮೂಲಕ ಅಂತಹ ಸಂಸ್ಥೆಗಳನ್ನು, ಕಲಿಯುವ ಆಸಕ್ತಿ ಇರುವ ವ್ಯಕ್ತಿ, ಸಂಸ್ಥೆಗಳ ಜತೆ ಜೋಡಿಸುವ ಕೆಲಸ ಮಾಡುತ್ತಿದ್ದೇವೆ. ವ್ಯಾವಹಾರಿಕ ಕನ್ನಡದ ಜತೆಯಲ್ಲೇ ಹೆಚ್ಚಿನ ಆಸಕ್ತಿ ಇರುವವರಿಗೆ ಕನ್ನಡ ಬರೆಯಲು ಕಲಿಸುವಂತಹ ಯೋಜನೆಗಳನ್ನೂ ಇಂತಹ ಸಂಸ್ಥೆಗಳು ಮಾಡುತ್ತವೆ. ಪಠ್ಯಕ್ರಮ ಮತ್ತು ಕಲಿಕಾ ಹಂತಗಳನ್ನು ಆಯಾ ಸಂಸ್ಥೆಗಳೇ ನಿರ್ಧರಿಸುತ್ತಿವೆ. ಕಲಿ ಕನ್ನಡ ಖಾತೆಯ ಮೂಲಕ ದೊಡ್ಡ ಪ್ರಮಾಣದಲ್ಲಿ ಪರಭಾಷಿಕರು ಕನ್ನಡ ಕಲಿಯಲು ಬೇಕಿರುವ ಪೂರಕ ವ್ಯವಸ್ಥೆ ರೂಪಿಸುವುದು ನಮ್ಮ ಯೋಜನೆಯಾಗಿದೆ’ ಎನ್ನುತ್ತಾರೆ ಈ ಕನ್ನಡಿಗ ಹುಡುಗರು.

ಕನ್ನಡ ಗ್ರಾಹಕರ ಕೂಟ, ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವ ಹಕ್ಕೊತ್ತಾಯದ ಪ್ರಜ್ಞೆಯನ್ನು ಕನ್ನಡಿಗರಲ್ಲಿ ಬಿತ್ತಲು ನಿರಂತರವಾಗಿ ಶ್ರಮಿಸುತ್ತಿದೆ. ಇದರ ಫಲವಾಗಿ ಕನ್ನಡ ಕಲಿಕೆಗೆ ಬೆಂಗಳೂರಿನಲ್ಲಿ ಸಾಕಷ್ಟು ಬೇಡಿಕೆಯೂ ಉಂಟಾಗಿದೆ. ಈಗ ಕನ್ನಡ ಕಲಿಯುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕಲಿ ಕನ್ನಡ ಯೋಜನೆ ಆರಂಭಿಸಲಾಗಿದೆ. ನಮ್ಮ ಅಂದಾಜಿನ ಪ್ರಕಾರ ಬೆಂಗಳೂರು ಒಂದರಲ್ಲೇ ಕನ್ನಡ ಕಲಿಸುವ ಪ್ರಯತ್ನಕ್ಕೆ ದೊಡ್ಡ ಮಾರುಕಟ್ಟೆಯ ಸಾಧ್ಯತೆಯಿದೆ.

ಮುಖ್ಯವಾಗಿ ಟ್ವಿಟರ್‌ನಂತಹ ಪ್ರಭಾವಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಮಾಡುತ್ತಿರುವ ಈ ಪ್ರಯತ್ನವು ಕನ್ನಡ ಭಾಷೆಯ ಹರಡುವಿಕೆಯ ನಿಟ್ಟಿನಲ್ಲಿ ಮತ್ತು ಅನ್ಯಭಾಷಿಕರನ್ನು ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಭಾಷೆಯೊಂದರ ಬೆಳವಣಿಗೆಗೆ ವಿಶೇಷವಾಗಿ ಕನ್ನಡದ ಅಭಿವೃದ್ಧಿಗೆ ಇಂತಹ ಸಂಘಟಿತ, ಆಧುನಿಕ, ತಾಂತ್ರಿಕ ಪ್ರಯತ್ನಗಳು ಅಗತ್ಯವಿದೆ ಎನ್ನುವುದು ಇವರಿಬ್ಬರ ಸ್ಪಷ್ಟ ಅಭಿಮತ.

ಕನ್ನಡ ಕಲಿಕೆಯ ಕ್ಷೇತ್ರದಲ್ಲಿ ಸೇವೆಯ ಮನೋಭಾವನೆಯ ಜತೆಗೆ ವ್ಯಾಪಾರದಲ್ಲಿರುವ ವೃತ್ತಿಪರತೆಯೂ ಬೇಕಿದೆ. ಫ್ರೆಂಚ್, ಜರ್ಮನ್ ಕಲಿಕಾ ಕಾರ್ಯಕ್ರಮಗಳು ಹೇಗೆ ಹಣಕಾಸಿನ ತೊಂದರೆ ಎದುರಿಸುತ್ತಿಲ್ಲವೋ ಅಂತಹುದೇ ಸ್ಥಿತಿ ಕನ್ನಡ ಕಲಿಕೆಗೂ ಬರಬೇಕು ಎನ್ನುವ ಈ ಯುವಕರ ಮಾತಿನಲ್ಲಿ ಕನ್ನಡದ ಇಂದಿನ ಸ್ಥಿತಿಗತಿಯ ಕುರಿತು ಕಳಕಳಿ ಮತ್ತು ನಾಳೆಯ ಭವಿಷ್ಯದ ಭರವಸೆಯೂ ಅಡಗಿದೆ.

ಕನ್ನಡ ಮಾತನಾಡಲು ಹಿಂದೇಟು!
‘ಪ್ರಾರಂಭದಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದ ಸಾಫ್ಟ್‌ವೇರ್ ಕಂಪೆನಿಯಲ್ಲಿ ಅನ್ಯಭಾಷಿಕ ಸಹೋದ್ಯೋಗಿಗಳಿಗೆ ಕನ್ನಡ ಕಲಿಸುವ ಪ್ರಯತ್ನ ನಡೆಸಿದೆ. ನಂತರ ಎರಡು ವರ್ಷಗಳ ಹಿಂದೆ ಇದೇ ಪ್ರಯತ್ನಕ್ಕೆ ವ್ಯವಸ್ಥಿತ ರೂಪ ನೀಡಿ ‘ಕನ್ನಡ ಲಾಂಗ್ವೇಜ್ ಲರ್ನಿಂಗ್ ಸ್ಕೂಲ್’ ಪ್ರಾರಂಭಿಸಿದೆ. ಸದ್ಯ ಈ ಸಂಸ್ಥೆ ಮೂಲಕ ಬೆಂಗಳೂರಿನಲ್ಲಿ ಕನ್ನಡ ಕಲಿಯಲು ಆಸಕ್ತಿ ಇರುವವರಿಗಾಗಿ ತಜ್ಞರಿಂದ ‘ಕಲಿಕಾ’ ತರಗತಿಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲಾಗುತ್ತದೆ.

ಬೇಡಿಕೆ ಮೇರೆಗೆ ಕಾರ್ಪೊರೇಟ್ ಸಂಸ್ಥೆಗಳಲ್ಲೂ ಕನ್ನಡ ಕಲಿಕಾ ತರಗತಿಗಳನ್ನು ಆಯೋಜಿಸಲಾಗುತ್ತದೆ. ಸುಮಾರು 500ಕ್ಕೂ ಹೆಚ್ಚು ಮಂದಿ ನಮ್ಮ ಸಂಸ್ಥೆ ಮೂಲಕ ಕನ್ನಡ ಕಲಿತಿದ್ದಾರೆ. ಬೇಡಿಕೆಯೂ ಸಾಕಷ್ಟಿದೆ. ಆದರೆ, ಕನ್ನಡ ಕಲಿತ ಮೇಲೆ ಇವರು ಕೇಳುವ ಒಂದು ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇರುವುದಿಲ್ಲ. ಹೌದು.! ನಾವು ಯಾರ ಜತೆ ಕನ್ನಡ ಮಾತನಾಡಬೇಕು? ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರು ಯಾರಾದರೂ ಇದ್ದಾರೆಯೇ ಎನ್ನುತ್ತಾರೆ. ಅಸಲಿಗೆ ಅನ್ಯಭಾಷಿಕರಿಗೆ ಅಲ್ಲ, ಕನ್ನಡಿಗರಿಗೇ ಮೊದಲು ಕನ್ನಡ ಮಾತನಾಡುವುದನ್ನು ಕಲಿಸುವ ಕೆಲಸ ಆಗಬೇಕಿದೆ.
–ರಾಘವೇಂದ್ರ ಪ್ರಸಾದ್, ಕನ್ನಡ ಲಾಂಗ್ವೇಜ್ ಲರ್ನಿಂಗ್ ಸ್ಕೂಲ್

ಕನ್ನಡ ಕಲಿಯಿರಿ
* ಕನ್ನಡ ಲಾಂಗ್ವೇಜ್ ಲರ್ನಿಂಗ್ ಸ್ಕೂಲ್-kannadalanguagelearningschool.com

* ‘ಕನ್ನಡ ಗೊತ್ತಿಲ್ಲ’ ವಾಟ್ಸ್ ಆ್ಯಪ್ ಗ್ರೂಪ್ - kannadagottilla.com

* ‘ಕನ್ನಡ ಬರುತ್ತೆ’ ಮೊಬೈಲ್ ಆ್ಯಪ್ - https://goo.gl/xaL1f0

* ‘ಕೇಳು’ ಮೊಬೈಲ್ ಆ್ಯಪ್ - https://goo.gl/dLY3kV

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.