ಜನರಿಂದ ಜನಗಳಿಗಾಗಿ ಯೋಜನೆ. ಇದು ಅಧಿಕಾರ ವಿಕೇಂದ್ರೀಕರಣ ಪ್ರಯೋಗದಲ್ಲಿ ಅಡಕವಾಗಿರುವ ಒಂದು ಮುಖ್ಯ ತತ್ವ. ಯೋಜನಾ ಪ್ರಕ್ರಿಯೆ ಮೇಲಿನಿಂದ ತಯಾರಾಗಿ ಕೆಳಗೆ ಹರಿದು ಬರುವ ಮೊದಲು, ಕೆಳಮಟ್ಟದಿಂದ ತಯಾರಾಗಿ ಊರ್ಧ್ವಗಾಮಿಯಾದರೆ ಜನರ ಮಟ್ಟಿಗೆ ಇದು ಅರ್ಥಪೂರ್ಣ. ಆದುದರಿಂದ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಶುರುವಾದ ಪ್ರಕ್ರಿಯೆ ರಾಜ್ಯ ಮಟ್ಟಕ್ಕೆ ತಲುಪಿ ಅದು ರಾಜ್ಯದ ವಾರ್ಷಿಕ ಯೋಜನೆಯ ಅಂಗವಾಗಬೇಕು..

ಹೀಗಾಗಬೇಕು ಎನ್ನುವುದು ಬರೀ ವಿಕೇಂದ್ರೀಕರಣ ಪ್ರತಿಪಾದಕರ ಸದಿಚ್ಛೆಯಷ್ಟೇ ಅಲ್ಲ. ಇದು ಸಂವಿಧಾನದ ಆಶಯವೂ ಹೌದು. ಪ್ರತಿಯೊಂದು ಜಿಲ್ಲೆಗೆ ಜಿಲ್ಲಾ ಯೋಜನಾ ಸಮಿತಿ ರಚನೆಯನ್ನು ಕಡ್ಡಾಯವಾಗಿ ಮಾಡಬೇಕು (ಸಂವಿಧಾನದ ಕಲಂ 243 ZD). ಇದು ಹೇಗಿರಬೇಕು, ಅದರ ಸದಸ್ಯತ್ವದ ಕಾರ್ಯವಿಧಾನದ ವಿವರ ಮೊದಲಾದವುಗಳನ್ನು ನಿರ್ಧರಿಸುವುದಷ್ಟೇ ರಾಜ್ಯ ಸರ್ಕಾರಗಳಿಗೆ ಬಿಟ್ಟ ಕೆಲಸ. ಜಿಲ್ಲೆಗಳಲ್ಲಿರುವ ಪಂಚಾಯತ್ ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಈ ಸಮಿತಿಯು ಒಂದು ಸಮಗ್ರ ಜಿಲ್ಲಾ ಕರಡು ಅಭಿವೃದ್ಧಿ ಯೋಜನೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು ಎಂಬ ಶಾಸನವಿದೆ.

ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೀಡಿರುವ ಈ ಸಾಂವಿಧಾನಿಕ ಸೌಲಭ್ಯದ ಮಹತ್ವ ಏನೆಂದರೆ ಇಂಥದ್ದೊಂದು ರಕ್ಷಣೆ ಯೋಜನಾ ಆಯೋಗಕ್ಕೂ ಇಲ್ಲ, ಯೋಜನಾ ಆಯೋಗವು ಸರಕಾರಿ ಆಜ್ಞೆಯ ಮೆಲೆ ಜನ್ಮ ತಾಳಿದ ಸಂಸ್ಥೆಯಾದುದರಿಂದಲೇ ಅದನ್ನು ರದ್ದು ಮಾಡುವ ನಿರ್ಧಾರವನ್ನು ಮೋದಿ ಧುರೀಣತ್ವಲ್ಲಿರುವ ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಂಥದ್ದೊಂದು ಸಂವಿಧಾನ ತಿದ್ದುಪಡಿ ಬಂದು ಎರಡೂವರೆ ದಶಕಗಳೇ ಕಳೆದಿದ್ದರೂ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅದರ ಫಲ ಇನ್ನೂ ದೊರೆತಿಲ್ಲ.

೧೯೯೪ರಿಂದ ಇಂದಿನವರೆಗೆ ಐದು ಚುನಾವಣೆಗಳು ನಡೆದು, ಆರು ಸರ್ಕಾರಗಳು (೨೦೦೪ರ ಅವಧಿಯಲ್ಲಿನ ಎರಡು ಸಮ್ಮಿಶ್ರ ಸರ್ಕಾರಗಳನ್ನು ಒಳಗೊಂಡು) ರಾಜ್ಯವನ್ನು ಆಳಿವೆ. ಸಂವಿಧಾನ ತಿದ್ದುಪಡಿಯನ್ನು ತರಲು ಮುತುವರ್ಜಿ ವಹಿಸಿ, ಅಧಿಕಾರ ವಿಕೇಂದ್ರಿಕರಣವು ತನ್ನ ರಾಷ್ಟ್ರೀಯ ಗುರಿ ಎಂದು ಸಾರಿದ ಕಾಂಗ್ರೆಸ್ ಏಳೂವರೆ ವರ್ಷ (ಸ್ವಂತಬಲದಿಂದ ಐದು ವರ್ಷ ಮತ್ತು ಸಮ್ಮಿಶ್ರ ಸರ್ಕಾರದ ಮೂಲಕ ಎರಡೂವರೆ ವರ್ಷ) ಅಳಿ ಮತ್ತೆ ಈಗ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಈ ಪ್ರಯೋಗವನ್ನು ಜಾರಿಗೆ ತಂದ ಖ್ಯಾತಿಯನ್ನು ಪಡೆದ ಅವಿಭಜಿತ ಜನತಾದಳ ತನ್ನ ೧೯೯೪ರಲ್ಲಿನ ಐದು ವರ್ಷ ಆಳಿದ ನಂತರ ರಾಜಕೀಯವಾಗಿ ನಾಮಶೇಷವಾಗಿದೆ. ಆದರೆ ಈ ಪಕ್ಷದ ವಾರಸುದಾರಿಕೆ ತಮ್ಮದೆಂದು ಹೇಳಿಕೊಳ್ಳುವ ಜಾತ್ಯತೀತ ಜನತಾದಳ ಎರಡು ಸಮ್ಮಿಶ್ರ ಸರ್ಕಾರಗಳಲ್ಲಿ ಭಾಗಿಯಾಗಿ ಅಧಿಕಾರ ಅನುಭವಿಸಿತ್ತು. ಹಾಗೆಯೇ ವಿಕೇಂದ್ರೀಕರಣ ಪ್ರಯೋಗದ ಜೊತೆಗೆ ಅಂಥದ್ದೇನೂ ಸಂಬಂಧವಿಲ್ಲದ ಬಿಜೆಪಿ ಕೂಡಾ ಹೆಚ್ಚೂ ಕಡಿಮೆ ಏಳೂವರೆ ವರ್ಷಗಳ ಅಧಿಕಾರ ಅನುಭವಿಸಿತ್ತು.

ಮೂರೂ ಪಕ್ಷಗಳ ನಡುವಿರುವ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ವಿಕೇಂದ್ರೀಕರಣ ವಿಷಯದ ನಿರಾಸಕ್ತಿಯಲ್ಲಿ ಎಲ್ಲರೂ ಸಮಾನರು. 1994ರ ದೇವೇಗೌಡರ ನೇತೃತ್ವದಲ್ಲಿನ ಅವಿಭಜಿತ ಜನತಾದಳದ ಸರ್ಕಾರ ಜಿಲ್ಲಾ ಯೋಜನಾ ಸಮಿತಿಗಳನ್ನು ಸ್ಥಾಪಿಸುವದಕ್ಕೆ ಉತ್ಸುಕತೆಯನ್ನು ತೋರಿಸಿತ್ತು. ಅದಕ್ಕಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಂದಲೂ, ನಗರ ಸ್ಥಳೀಯ ಸಂಸ್ಥೆಗಳಿಂದಲೂ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆಯನ್ನೂ ನಡೆಸಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ಮಹಾನಗರ ಪಾಲಿಕೆಯ ಮೇಯರರು ಉಪಾಧ್ಯಕ್ಷರಾಗಿರುವ ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸುವುದಕ್ಕೆ ಕಾರ್ಯೋನ್ಮುಖವಾಗುವಂತೆ ಎಲ್ಲಾ ತಯಾರಿಯನ್ನು ಮಾಡಲಾಗಿತ್ತು. ಕೊನೆಗಳಿಗೆಯಲ್ಲಿ ಕೈಬಿಟ್ಟಿತು. ಈ ಹಿಂಜರಿಕೆಗೆ ಕಾರಣಗಳೇನು? ಆಡಳಿತಾತ್ಮಕ ತೊಂದರೆಯೇ ಅಥವಾ ರಾಜಕೀಯ ತೊಂದರೆಯೇ ಎನ್ನುವುದನ್ನು ಆ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದ ದೇವೇಗೌಡರಾಗಲೀ, ಜೆ. ಎಚ್ ಪಟೇಲರಾಗಲೀ, ಅಥವಾ ಸಂಬಂಧಿತ ಮಂತ್ರಿಗಳಾದ ಎಂ.ಪಿ.ಪ್ರಕಾಶರಾಗಲೀ ಕೊನೆಯ ತನಕವೂ ಹೇಳಲಿಲ್ಲ. ಅವರಿಂದ ಒಂದು ಉತ್ತರವನ್ನು ಯಾರೂ ಬಯಸಲೂ ಇಲ್ಲ.

ಎಪ್ಪತರ ದಶಕದ ಕಾಲದ ದೇವರಾಜ ಅರಸರ ಆಳ್ವಿಕೆಯಲ್ಲಿ ಹೆಸರಾಂತ ಆರ್ಥಿಕ ತಜ್ಞ ನಂಜುಂಡಪ್ಪನವರು ಯೋಜನಾ ಸಲಹೆಗಾರ ಮತ್ತು ನಂತರ ಯೋಜನಾ ಕಾರ್ಯದರ್ಶಿಗಳಿದ್ದಾಗ ಜಿಲ್ಲಾ ಮಟ್ಟದ ಯೋಜನೆ ತಯಾರಿಸುವ ಪ್ರಯತ್ನ ಶುರುವಾಯಿತು. ಇದಕ್ಕಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಯೋಜನಾ ಘಟಕಗಳನ್ನೂ ರಚಿಸಲಾಯಿತು. ಕಾರಣಾಂತರಗಳಿಂದ ಹೆಚ್ಚಿನ ಪ್ರಗತಿಯಾಗಲಿಲ್ಲ. ರಾಜ್ಯ ಮಟ್ಟದ ಕಾರ್ಯಕ್ರಮಗಳಿಗಿರುವ ಹಣವನ್ನೇ ಜಿಲ್ಲೆಗಳ ನಡುವೆ ಹಂಚಿಹಾಕುವ ಮಟ್ಟಕ್ಕೆ ಅದು ಸೀಮಿತವಾಗಿತ್ತು. ಆಗ ಅಧಿಕಾರ ವಿಕೇಂದ್ರೀಕರಣದ ಕಲ್ಪನೆಯೂ ಸಾಕಾರಗೊಂಡಿರಲಿಲ್ಲ. ಆದರೆ ಅದು ಕೆಳಮಟ್ಟದಿಂದ ಯೋಜನಾ ಪ್ರಕ್ರಿಯೆ ಶುರುವಾಗಬೇಕೆಂಬ ಸದಿಚ್ಛೆಯ ಮೊದಲ ಹೆಜ್ಜೆಯಾಗಿತ್ತು. ಇದು ಪಂಚಾಯತ್ ರಾಜ್ ವ್ಯವಸ್ಥೆಯೊಂದಿಗೆ ಹೆಚ್ಚು ಪ್ರಬಲವಾಗಿ ಕಾರ್ಯರೂಪಕ್ಕೆ ಬರಬೇಕಿತ್ತು. ಆದರೆ ರಾಜ್ಯ ಸರ್ಕಾರಗಳ ನಿರಾಸಕ್ತಿಯಿಂದ ಏನೂ ಆಗದೆ ಉಳಿದುಕೊಂಡಿದೆ.

ಯೋಜನೆಗಳನ್ನು ರೂಪಿಸುವ ಪ್ರಕ್ರಿಯೆ ಕೆಳಗಿನಿಂದ ಮೇಲಕ್ಕೆ ಸಾಗಬೇಕು ಎಂಬ ಆಶಯದೊಂದಿಗೆ ಸಂವಿಧಾನ ತಿದ್ದುಪಡಿಯಾಗಿದೆ. ಪ್ರತಿಯೊಂದು ಜಿಲ್ಲೆಗೆ ಯೋಜನಾ ಸಮಿತಿ ಇರಬೇಕು. ಅದರಲ್ಲಿ ಸ್ಥಳೀಯ ಸರ್ಕಾರಗಳ ಸದಸ್ಯರಿರಬೇಕು. ಅವರ ಮೂಲಕ ರಾಜ್ಯ ಮಟ್ಟದಲ್ಲಿ ಯೋಜನೆ ರೂಪುಗೊಳ್ಳಬೇಕು. ಆದರೆ ಅದೀಗ ಅಧಿಕಾರಿಗಳು ಶಾಸಕರ ಮೂಗಿನ ನೇರಕ್ಕೆ ರೂಪಿಸುವ ಯೋಜನೆಯಾಗಿದೆ.

ರಾಜ್ಯ ವಾರ್ಷಿಕ ಯೋಜನೆ ತಯಾರಿಕೆಯ ಪೂರ್ವಭಾವಿಯಾಗಿ ಜಿಲ್ಲೆಗಳಿಗೆ ಪ್ರಸ್ತಾಪಗಳನ್ನು ವೇಳಾಪಟ್ಟಿಗೆ ಅನುಸಾರವಾಗಿ ಕಳಿಸಲು ಸರ್ಕಾರದಿಂದ ಜಿಲ್ಲೆಗಳಿಗೆ ಸೂಚನೆ ಬರುತ್ತದೆ. ಇದ್ದ ಕಾರ್ಯಕ್ರಮಗಳನ್ನು ಮುಂದುವರಿಸುವುದಕ್ಕೆ ಪ್ರಾಶಸ್ತ್ಯ. ಜಿಲ್ಲಾ ಪಂಚಾಯಿತಿಯ ಅನುಮೋದನೆ ಪಡೆದು ಕಳಿಸಬೇಕೆಂದಿದ್ದರೂ, ವಾಸ್ತವವಾಗಿ ಹಾಗೆ ಆಗುವುದೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿಯ ಸಭೆ ತಿಂಗಳುಗಟ್ಟಲೆ ನಡೆಯುವುದೇ ಇಲ್ಲ. ಒಂದು ವೇಳೆ ನಡೆದರೂ ಯೋಜನಾ ಪ್ರಸ್ತಾಪಗಳ ಕುರಿತ ಚರ್ಚೆ ನಡೆಯದೇ ಅಧಿಕಾರಿಗಳು ನೀಡುವ ಪ್ರಸ್ತಾವನೆಯೇ ಸರ್ಕಾರಕ್ಕೆ ರವಾನೆಯಾಗುತ್ತದೆ.

ಮಂಜೂರಾಗಿ ಬಂದ ಕಾರ್ಯಕ್ರಮಗಳ ಅನುಷ್ಠಾನದ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಗೊಂದಲಗಳು ಎದುರಾಗುತ್ತವೆ. ಮಂಜೂರಾದವುಗಳೆಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯಕ್ರಮಗಳು. ಈ ಕಾರ್ಯಕ್ರಮಗಳೊಂದಿಗೆ ತಳುಕು ಹಾಕಿಕೊಂಡೇ ಅನುದಾನ ಬಂದಿರುವುದರಿಂದ ಅವುಗಳನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಬೇರೆ ಕಾರ್ಯಕ್ರಮಗಳಿಗೆ ಬಳಸಲೂ ಸಾಧ್ಯವಿಲ್ಲ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ತಮ್ಮದೇ ಆದ ಸಂಪನ್ಮೂಲ ಕ್ರೋಢಿಕರಿಸಿ ಕಾರ್ಯಕ್ರಮ ರೂಪಿಸುವ ಅಧಿಕಾರವಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಈ ಅಧಿಕಾರವಿದೆ. ಆದರೆ ಸರಿಯಾದ ಉಪಯೋಗ ಮಾಡಿದರೆ ಗ್ರಾಮಗಳ ಬೇಡಿಕೆ ಈಡೇರಿಸಲು ಸಾಧ್ಯವಾದೀತು.

ಈ ರೀತಿ ಹಳಿ ತಪ್ಪಿದ ಯೋಜನಾ ಪ್ರಕ್ರಿಯೆಯನ್ನು ಸರಿ ಮಾಡುವ ತನಕ ಚುನಾಯಿತ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರ ತಮ್ಮ ಹೊಣೆಯ ಕುರಿತ ಅಸ್ಪಷ್ಟತೆ ನಿವಾರಣೆ ಆಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.