ಬೆಂಗಳೂರು: ಅಫ್ಗಾನಿಸ್ತಾನ ವಿರುದ್ಧದ ಟಿ–20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರ ಫೀಲ್ಡಿಂಗ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಿಕ್ಸರ್ ತಡೆಯಲು ಅವರು ಮಾಡಿದ ಪ್ರಯತ್ನ ಕ್ರಿಕೆಟ್ ಅಭಿಮಾನಿಗಳ ಶ್ಲಾಘನೆಗೆ ಪಾತ್ರವಾಗಿದೆ.

ವಾಷಿಂಗ್ಟನ್ ಸುಂದರ್ ಅವರ ಓವರ್‌ನಲ್ಲಿ ಕರೀಂ ಜನ್ನತ್ ಅವರು ಬಾರಿಸಿದ ಚೆಂಡನ್ನು, ಅದ್ಭುತ ಫೀಲ್ಡಿಂಗ್ ಮೂಲಕ ಸಿಕ್ಸರ್ ಆಗುವುದನ್ನು ಕೊಹ್ಲಿ ತಡೆದಿದ್ದರು. ಕ್ಯಾಚ್ ಆಗಿ ಪರಿವರ್ತಿಸಲು ವಿಫಲರಾದರೂ, ಕೊಹ್ಲಿಯವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಫೀಲ್ಡಿಂಗ್ ವೇಳೆ ಅವರ ದೇಹದ ಭಾಷೆ, ಜಸ್‌ಪ್ರೀತ್ ಬೂಮ್ರಾ ಅವರ ಬೌಲಿಂಗ್ ಶೈಲಿಯನ್ನು ಹೋಲುತ್ತಿತ್ತು. ‘ಇದೊಂದು ಜಸ್‌ಪ್ರೀತ್ ಬೂಮ್ರಾ ಮೂಮೆಂಟ್’ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕೊಹ್ಲಿ ಅವರ ಈ ಪ್ರಯತ್ನದ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರಾ ಅವರಿಂದ ಕೂಡ ಮೆಚ್ಚುಗೆ ವ್ಯಕ್ತವಾಗಿದೆ.

‘ಹಲೋ ಐಸಾಕ್ ನ್ಯೂಟನ್? ಗುರುತ್ವಾಕರ್ಷಣೆ-ವಿರೋಧಿ ಈ ಘಟನೆಗೆ ಭೌತಶಾಸ್ತ್ರದ ಹೊಸ ನಿಯಮವನ್ನು ವ್ಯಾಖ್ಯಾನಿಸಲು ನೀವು ನಮಗೆ ಸಹಾಯ ಮಾಡಬಹುದೇ?’ ಎಂದು ಬರೆದುಕೊಂಡಿದ್ದಾರೆ.

ಇದೇ ಪಂದ್ಯದಲ್ಲಿ ಸುಮಾರು 38 ಮೀಟರ್‌ಗಳಷ್ಟು ಓಡಿ ಬಂದು, ವಿರಾಟ್ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.