ಲಂಡನ್: ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಐದು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದ ಜೋ ರೂಟ್ ಈಚೆಗೆ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಅವರ ಸ್ಥಾನವನ್ನು 30 ವರ್ಷದ ಬೆನ್ ತುಂಬಲಿದ್ದಾರೆ.

79 ಟೆಸ್ಟ್‌ಗಳನ್ನು ಆಡಿರುವ ಬೆನ್ 5061 ರನ್‌ಗಳನ್ನು ಗಳಿಸಿದರು. ಅದರಲ್ಲಿ 11 ಶತಕಗಳನ್ನು ಗಳಿಸಿದ್ದಾರೆ. ಮಧ್ಯಮವೇಗಿಯಾಗಿರುವ ಅವರು 174 ವಿಕೆಟ್‌ಗಳನ್ನೂ ಪಡೆದಿದ್ದಾರೆ. 2019ರಲ್ಲಿ ಹೆಡಿಂಗ್ಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡವು ಒಂದು ವಿಕೆಟ್ ಜಯ ಸಾಧಿಸುವಲ್ಲಿ ಸ್ಟೋಕ್ಸ್ ಗಳಿಸಿದ್ದ ಅಜೇಯ 135 ರನ್‌ಗಳ ಆಟವೇ ಕಾರಣವಾಗಿತ್ತು.

ಇದನ್ನೂ ಓದಿ–ರೋಹಿತ್ ಬದಲಿಗೆ ಬೂಮ್ರಾ ಅಥವಾ ಸೂರ್ಯಕುಮಾರ್ಗೆ ಮುಂಬೈ ನಾಯಕತ್ವ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.