ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್ ಟೂರ್ನಿ: ಮೊಹಸಿನ್, ವಿದ್ಯಾಧರ್ ದಾಳಿಗೆ ಕುಸಿದ ಮಧ್ಯಪ್ರದೇಶ

ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿ: ಕೆಎಸ್‌ಸಿಎ ಇಲೆವನ್ ಬೌಲರ್‌ಗಳ ಪಾರಮ್ಯ
Published : 9 ಸೆಪ್ಟೆಂಬರ್ 2024, 20:30 IST
Last Updated : 9 ಸೆಪ್ಟೆಂಬರ್ 2024, 20:30 IST
ಫಾಲೋ ಮಾಡಿ
Comments

ಬೆಂಗಳೂರು: ಕೆಎಸ್‌ಸಿಎ ಇಲೆವನ್ ತಂಡದ ಮೊಹಸಿನ್ ಖಾನ್ (42ಕ್ಕೆ4) ಮತ್ತು ವಿದ್ಯಾಧರ್ ಪಾಟೀಲ (40ಕ್ಕ3) ಅವರ ಪರಿಣಾಮಕಾರಿ ದಾಳಿಯ ಮುಂದೆ ಮಧ್ಯಪ್ರದೇಶ ತಂಡವು ಅಲ್ಪಮೊತ್ತಕ್ಕೆ ಕುಸಿಯಿತು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದದಲ್ಲಿ ಮಧ್ಯಪ್ರದೇಶ ತಂಡವು 79.3 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಯಿತು. 

ಸಂಕ್ಷಿಪ್ತ ಸ್ಕೋರುಗಳು

ಚಿನ್ನಸ್ವಾಮಿ ಕ್ರೀಡಾಂಗಣ: ಮಧ್ಯಪ್ರದೇಶ: 79.3 ಓವರ್‌ಗಳಲ್ಲಿ 187 (ಹರ್ಷ ಗವಳಿ 22, ರಿಷಭ್ ಚೌಹಾಣ್ 24, ಹರಪ್ರೀತ್ ಸಿಂಗ್ 68, ಕುಮಾರ ಕಾರ್ತಿಕೇಯ 21, ವಿದ್ಯಾಧರ್ ಪಾಟೀಲ 40ಕ್ಕೆ3, ಸಂತೋಕ್ ಸಿಂಗ್ 41ಕ್ಕೆ2, ಮೊಹಸಿನ್ ಖಾನ್ 42ಕ್ಕೆ4) ವಿರುದ್ಧ ಕೆಎಸ್‌ಸಿಎ ಇಲೆವನ್.

ಆಲೂರು (1); ಛತ್ತೀಸಗಡ: 90 ಓವರ್‌ಗಳಲ್ಲಿ 7ಕ್ಕೆ289 (ರಿಷಭ್ ತಿವಾರಿ 86, ಆದಿತ್ಯ ಸಿಂಗ್ 26, ಸಂಜೀತ್ ದೇಸಾಯಿ 77, ಶಶಾಂಕ್ ಸಿಂಗ್ ಔಟಾಗದೆ 50, ಅರ್ಜುನ್ ತೆಂಡೂಲ್ಕರ್ 40ಕ್ಕೆ2, ಮೋಹಿತ್ ರೇಡ್ಕರ್ 92ಕ್ಕೆ3, ದರ್ಶನ್ ಮಿಶಾಲ್ 43ಕ್ಕೆ2) ವಿರುದ್ಧ ಗೋವಾ.

ಬಿಜಿಎಸ್ ಕ್ರೀಡಾಂಗಣ: ವಿದರ್ಭ: 90 ಓವರ್‌ಗಳಲ್ಲಿ 6ಕ್ಕೆ247 (ಅಮನ್ ಮೊಖಾಡೆ 35, ಯಶ್ ರಾಥೋಡ್ 25, ಜಿತೇಶ್ ಶರ್ಮಾ 23, ಶುಭಂ ದುಬೆ 47, ಅಕ್ಷಯ್ ಕರ್ಣೇವರ್ ಔಟಾಗದೆ 57, ಪಾರ್ಥ್ ರೇಕಡೆ 30, ರಾಜವೀರ್ ವಾದ್ವಾ 39ಕ್ಕೆ2) ವಿರುದ್ಧ ಕೆಎಸ್‌ಸಿಎ ಪ್ರೆಸಿಡೆಂಟ್ಸ್ ಇಲೆವನ್.

ಆಲೂರು (3): ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 63.1 ಓವರ್‌ಗಳಲ್ಲಿ 181 (ಶ್ರೇಯಸ್ ಗೋಪಾಲ್ 51, ಯಶೋವರ್ಧನ್ ಪರಂತಾಪ್ 27, ಅಧೋಕ್ಷ 56, ಎಸ್‌. ಅಖಿಲ್ 34ಕ್ಕೆ3, ಸತ್ಯನಾರಾಯಣ ರಾಜು 43ಕ್ಕೆ2, ಜಿ. ಮನೀಶ್ 30ಕ್ಕೆ3), ಆಂಧ್ರ: 24 ಓವರ್‌ಗಳಲ್ಲಿ 1 ವಿಕೆಟ್‌ಗೆ 106 (ಕೆ. ಮಹೀಪ್ ಕುಮಾರ 22, ಎಂ. ವಂಶಿಕೃಷ್ಣ ಔಟಾಗದೆ 77)

ಮೈಸೂರು: ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ: ಒಡಿಶಾ ಕ್ರಿಕೆಟ್‌ ಸಂಸ್ಥೆ: 28.3 ಓವರ್‌ಗಳಲ್ಲಿ 2 ವಿಕೆಟ್‌ಗೆ 73 ( ಶಂತನು ಮಿಶ್ರ ಔಟಾಗದೆ 30, ಗೋವಿಂದ ಪೊದ್ದಾರ್‌ ಔಟಾಗದೆ 19 ಲಕ್ಮನ್‌ ಮೆರಿವಾಲಾ 20ಕ್ಕೆ 1). ಬರೋಡಾ ಕ್ರಿಕೆಟ್ ಸಂಸ್ಥೆ ವಿರುದ್ಧ.

ಮೊದಲ ದಿನ ಮಳೆಯದ್ದೇ ಆಟ!
ಮೈಸೂರಿನ ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ಕೆಎಸ್‌ಸಿಎ ಕೋಲ್ಟ್ಸ್‌ ಹಾಗೂ ಡಾ.ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ ನಡುವಿನ ಕ್ರಿಕೆಟ್‌ ಪಂದ್ಯವು ಮೊದಲ ದಿನದಂದು ಮಳೆಯ ಕಾರಣಕ್ಕೆ ಒಂದೂ ಎಸೆತ ಕಾಣಲಿಲ್ಲ. ಮಳೆಯಿಂದಾಗಿ ಅಂಕಣ ಒದ್ದೆ ಆಗಿದ್ದರಿಂದ ಬೆಳಿಗ್ಗೆ ಟಾಸ್ ವಿಳಂಬವಾಯಿತು. ಮಧ್ಯಾಹ್ನ ಮತ್ತೆ ಮಳೆ ಸುರಿದಿದ್ದರಿಂದ ಪಂದ್ಯವನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಯಿತು. ಮಂಗಳವಾರವೂ ಮಳೆ ಸುರಿಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT