ತೊರುಬಾ, ವೆಸ್ಟ್ ಇಂಡೀಸ್: ಹಾಲಿ ಚಾಂಪಿಯನ್ ಬಾರ್ಬಡೀಸ್ ಟ್ರೈಡೆಂಟ್ಸ್ ತಂಡವು ಕೆರಿಬಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಟೂರ್ನಿಯಿಂದ ಹೊರಬಿದ್ದಿದೆ. ಗುರುವಾರ ನಡೆದ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು ಆರು ವಿಕೆಟ್‌ಗಳಿಂದ ಬಾರ್ಬಡೀಸ್‌ಗೆ ಸೋಲುಣಿಸಿತು. ಇದರೊಂದಿಗೆ ವಾರಿಯರ್ಸ್ ತಂಡ ಸೆಮಿಫೈನಲ್ ತಲುಪಿತು.

ಟ್ರಿನ್‌ಬ್ಯಾಗೊ ನೈಟ್ ರೈಡರ್ಸ್, ಗಯಾನಾ ವಾರಿಯರ್ಸ್, ಸೇಂಟ್ ಲೂಸಿಯಾ ಜೌಕ್ಸ್ ಹಾಗೂ ಜಮೈಕಾ ತಲ್ಲಾವಾಸ್ ತಂಡಗಳು ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿವೆ.

ಗಯಾನಾ ವಾರಿಯರ್ಸ್ ಎದುರಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾರ್ಬಡೀಸ್, ಮೂರಂಕಿ ಮೊತ್ತ ತಲುಪಲೂ ವಿಫಲವಾಯಿತು. ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 89 ರನ್ ಗಳಿಸಲಷ್ಟೇ ಶಕ್ತವಾಯಿತು.

ರೊಮಾರಿಯೊ ಶೆಫರ್ಡ್ (22ಕ್ಕೆ 3), ಇಮ್ರಾನ್ ತಾಹೀರ್ (12ಕ್ಕೆ 3), ಕ್ರಿಸ್ ಗ್ರೀನ್ (17ಕ್ಕೆ 1) ಹಾಗೂ ಕೆವಿನ್ ಸಿಂಕ್ಲೇರ್ (23ಕ್ಕೆ 1) ಅವರ ಬೌಲಿಂಗ್ ದಾಳಿಗೆ ಟ್ರೈಡೆಂಟ್ಸ್ ತತ್ತರಿಸಿತು.

ಮಧ್ಯಮ ಕ್ರಮಾಂಕದಲ್ಲಿ ಮಿಚೆಲ್ ಸ್ಯಾಂಟನರ್ (18) ಹಾಗೂ ನಯೀಂ ಯಂಗ್ (18) ಅಲ್ಪ ಕೊಡುಗೆ ನೀಡಿದರು.

ಸಾಧಾರಣ ಗುರಿ ಬೆನ್ನತ್ತಿದ ವಾರಿಯರ್ಸ್ ಪರ ಚಂದ್ರಪಾಲ್ ಹೇಮರಾಜ್ (29) ಹಾಗೂ ಶಿಮ್ರಾನ್ ಹೆಟ್ಮೆಯರ್ (32) ಎರಡನೇ ವಿಕೆಟ್‌ಗೆ 34 ರನ್ ಸೇರಿಸಿದರು. 15 ಓವರ್‌ಗಳಲ್ಲಿ ತಂಡವು ಜಯದ ಗಡಿ ತಲುಪಿತು.

ಸಂಕ್ಷಿಪ್ತ ಸ್ಕೋರ್: ಬಾರ್ಬಡೀಸ್ ಟ್ರೈಡೆಂಟ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 89 (ಮಿಚೆಲ್ ಸ್ಯಾಂಟನರ್ 18, ನಯೀಂ ಯಂಗ್ 18, ಜಾನ್ಸನ್ ಚಾರ್ಲ್ಸ್ 10; ಇಮ್ರಾನ್ ತಾಹೀರ್ 12ಕ್ಕೆ 3, ರೊಮಾರಿಯೊ ಶೆಫರ್ಡ್ 22ಕ್ಕೆ 3, ಕ್ರಿಸ್ ಗ್ರೀನ್ 17ಕ್ಕೆ 1, ಕೆವಿನ್ ಸಿಂಕ್ಲೇರ್ 23ಕ್ಕೆ 1). ಗಯಾನಾ ಅಮೆಜಾನ್ ವಾರಿಯರ್ಸ್: 14.2 ಓವರ್‌ಗಳಲ್ಲಿ 4 ವಿಕೆಟ್‌ಗೆ 90 (ಶಿಮ್ರಾನ್ ಹೆಟ್ಮೆಯರ್ 32 , ಚಂದ್ರಪಾಲ್ ಹೇಮರಾಜ್ 29, ರಾಸ್ ಟೇಲರ್ ಅಜೇಯ 16; ಜೇಸನ್ ಹೋಲ್ಡರ್ 10ಕ್ಕೆ 2, ರೇಮನ್ ರೀಪರ್ 16ಕ್ಕೆ 1) ಫಲಿತಾಂಶ: ಗಯಾನಾ ಅಮೆಜಾನ್ ವಾರಿಯರ್ಸ್‌ಗೆ ಆರು ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.